ವೊಡಾಫೋನ್ ಎಂ-ಪೆಸಾ ಬಳಸಿ ಹಣ ವಿತ್‌ಡ್ರಾ ಮಾಡಿ: ಕ್ಯೂನಲ್ಲಿ ನಿಲ್ಲುವುದೇ ಬೇಡಾ..!

Written By:

ವೊಡಾಫೋನ್ ಇಂಡಿಯಾ ತನ್ನ 8.4 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ 'ಎಂ-ಪೆಸಾ(M-Pesa)' ಡಿಜಿಟಲ್ ವ್ಯಾಲೆಟ್ ಮೂಲಕ ಹಣ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ. ದೇಶದಾದ್ಯಂತದ 120,000 ವೊಡಾಫೋನ್ ಇಂಡಿಯಾದ ಕೇಂದ್ರಗಳಿಂದ ಹಣ ವಿತ್‌ಡ್ರಾ ಮಾಡಿಕೊಳ್ಳಬಹುದು ಎಂದು ಕಂಪನಿ ಬುಧವಾರ ಹೇಳಿದೆ.

ವೊಡಾಫೋನ್ ಎಂ-ಪೆಸಾ ಬಳಸಿ ಹಣ ವಿತ್‌ಡ್ರಾ ಮಾಡಿ: ಕ್ಯೂನಲ್ಲಿ ನಿಲ್ಲುವುದೇ ಬೇಡಾ..!

ಸರ್ಕಾರದಿಂದ ಉಚಿತ 50 ಲಕ್ಷ 4G ಮೊಬೈಲ್, ಫ್ರೀ ಡಾಟಾ!! ಏಕೆ? ಎಲ್ಲಿ?

'ಎಂ-ಪೆಸಾ(M-Pesa)' ಎಂದರೇನು?
'ಎಂ-ಪೆಸಾ(M-Pesa)' ಮೊಬೈಲ್ ಫೋನ್ ಆಧಾರಿತ ಹಣ ವರ್ಗಾವಣೆ, ಹಣಕಾಸು ಮತ್ತು ಮೈಕ್ರೋಫೈನಾನ್ಸ್ ಸೇವೆಯಾಗಿದ್ದು, ವೊಡಾಫೋನ್ 2007 ರಲ್ಲಿ ಲಾಂಚ್ ಮಾಡಿದೆ.

ವೊಡಾಫೋನ್ ಎಂ-ಪೆಸಾ ಬಳಸಿ ಹಣ ವಿತ್‌ಡ್ರಾ ಮಾಡಿ: ಕ್ಯೂನಲ್ಲಿ ನಿಲ್ಲುವುದೇ ಬೇಡಾ..!

"ವೊಡಾಫೋನ್‌ 'ಎಂ-ಪೆಸಾ(M-Pesa)' ಗ್ರಾಹಕರು ಹೊರ ಪ್ರದೇಶಗಳ ಏಟಿಎಂ ಮತ್ತು ಬ್ಯಾಂಕ್‌ ಶಾಖೆಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ದೇಶದಾದ್ಯಂತ 120,000 'ಎಂ-ಪೆಸಾ(M-Pesa)' ಕೇಂದ್ರಗಳನ್ನು ನಿರ್ಮಿಸಲು ಹೂಡಿಕೆ ಮಾಡಿದ್ದೇವೆ. ದೇಶದಾದ್ಯಂತ ಬ್ಯಾಂಕ್‌ ಶಾಖೆಗಳಷ್ಟೇ ಸಂಖ್ಯೆಯ 'ಎಂ-ಪೆಸಾ(M Pesa)' ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ", ಎಂದು 'ಎಂ-ಪೆಸಾ(M-Pesa)' ಬಿಜಿನೆಸ್ ಹೆಡ್ 'ಸುರೇಶ್‌ ಸೇಥಿ' ಹೇಳಿದ್ದಾರೆ.

ವೊಡಾಫೋನ್ ಎಂ-ಪೆಸಾ ಬಳಸಿ ಹಣ ವಿತ್‌ಡ್ರಾ ಮಾಡಿ: ಕ್ಯೂನಲ್ಲಿ ನಿಲ್ಲುವುದೇ ಬೇಡಾ..!

ವೊಡಾಫೋನ್‌ ಇಂಡಿಯಾದ ಶೇ.56 ರಷ್ಟು 'ಎಂ-ಪೆಸಾ(M-Pesa)' ಕೇಂದ್ರಗಳು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇವೆ.

" ವೊಡಾಫೋನ್ ಇಂಡಿಯಾ ಗ್ರಾಹಕರು ಗ್ರಾಮೀಣ ಪ್ರದೇಶಗಳಲ್ಲಿನ ಯಾವುದೇ 'ಎಂ-ಪೆಸಾ(M-Pesa)' ಕೇಂದ್ರಗಳಿಗೆ ಭೇಟಿ ನೀಡಿ, 'ಎಂ-ಪೆಸಾ(M-Pesa)' ಡಿಜಿಟಲ್ ವ್ಯಾಲೆಟ್ ಬಳಸಿ ಹಣ ವಿತ್‌ಡ್ರಾ ಮಾಡಿಕೊಳ್ಳಬಹುದು. ಅಲ್ಲದೇ ನಮ್ಮ ಡಿಜಿಟಲ್ ವ್ಯಾಲೆಟ್ ಸುಲಭವಾಗಿ ಕ್ರೆಡಿಟ್/ಡೆಬಿಟ್ ಕಾರ್ಡ್‌ ಅಥವಾ ನೆಟ್‌ ಬ್ಯಾಂಕಿಂಗ್ ಮೂಲಕ ಡಿಜಿಟಲಿ ಲೋಡ್ ಆಗುತ್ತದೆ", ಎಂದು ಸುರೇಶ್ ಸೇಥಿ ಹೇಳಿದ್ದಾರೆ.

ರಿಲಾಯನ್ಸ್ ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆ!

ವೊಡಾಫೋನ್ ಎಂ-ಪೆಸಾ ಬಳಸಿ ಹಣ ವಿತ್‌ಡ್ರಾ ಮಾಡಿ: ಕ್ಯೂನಲ್ಲಿ ನಿಲ್ಲುವುದೇ ಬೇಡಾ..!

ಗ್ರಾಹಕರು ತಮ್ಮ ಹತ್ತಿರದ 'ಎಂ-ಪೆಸಾ(M-Pesa)' ಕೇಂದ್ರಗಳಲ್ಲಿ ಹಣ ವಿತ್‌ಡ್ರಾ ಮಾಡಲು, ರಿಸರ್ವ್‌ ಬ್ಯಾಂಕ ಆಫ್‌ ಇಂಡಿಯಾ ನಿಯಮದ ಪ್ರಕಾರ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು ಎಂದು ಹೇಳಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳಿಗಾಗಿ ಕ್ಲಿಕ್ ಮಾಡಿ

 

 

Read more about:
English summary
Vodafone MPesa Customers Can Now Withdraw Cash From Company Outlets. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot