Subscribe to Gizbot

ವೊಡಾಫೋನ್‌ನಿಂದ ದೇಶದ ಬಳಕೆದಾರರ ಮಾಹಿತಿ ಸೋರಿಕೆ!

Posted By:

ಬಹುರಾಷ್ಟ್ರೀಯ ಟೆಲಿಕಾಂ ಕಂಪೆನಿ ವೊಡಾಫೋನ್‌‌‌‌ ಭಾರತದ ಭಾರತದ ಮೊಬೈಲ್‌ ಬಳಕೆದಾರರ ಕರೆ ಮಾಹಿತಿ, ಇ ಮೇಲ್‌ ಮಾಹಿತಿಯನ್ನು ಬ್ರಿಟನ್‌ನ ಭದ್ರತಾ ಸಂಸ್ಥೆಯೊಂದಕ್ಕೆ ನೀಡಿದ ಗಂಭೀರ ಆರೋಪಕ್ಕೆ ತುತ್ತಾಗಿದೆ.

ಬ್ರಿಟನ್‌ನ ಗುಪ್ತಚರ ಮತ್ತು ಭದ್ರತಾ ಸಂಸ್ಥೆ 'ಗವರ್ನಮೆಂಟ್‌ ಕಮ್ಯುನಿಕೇಷನ್ಸ್‌ ಹೆಡ್‌ಕಾರ್ಟರ್'ಗೆ (Government Communications Headquarters) ವೊಡಾಫೋನ್‌ ದೇಶದ ರಹಸ್ಯ ಮಾಹಿತಿಗಳನ್ನು ನೀಡಿದೆ ನೀಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ.

ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಲು ಸಮುದ್ರದ ಅಡಿಯಲ್ಲಿ ಏಳೆಯಲಾಗಿರುವ ಕೇಬಲ್‌ಗ‌ಳನ್ನು ಬಳಸುವ ಅವಕಾಶವನ್ನು ವೊಡಾಫೋನ್‌, ಬ್ರಿಟನ್‌ನ ಜಿಸಿಎಚ್‌ಕ್ಯುಗೆ ನೀಡಿತ್ತು. ಕಳೆದ ಐದು ವರ್ಷ‌ಗಳಿಂದ ಜಿಸಿಎಚ್‌ಕ್ಯು ಬ್ರಿಟಿಷ್ ತೀರದಲ್ಲಿ ಈ ಕೇಬಲ್‌ಗಳಿಂದ ಇಂಟರ್‌ಸೆಪ್ಟ್ (ಮಾಹಿತಿ ಭೇದಿಸುವ) ಉಪಕರಣಗಳನ್ನು ಬಳಸಿ ಮಾಹಿತಿಯನ್ನು ಕದಿಯುತ್ತಿದೆ ಎಂದು ಎಂದು ಆರೋಪಿಸಲಾಗಿದೆ.

 ವೊಡಾಫೋನ್‌ನಿಂದ ದೇಶದ ಬಳಕೆದಾರರ ಮಾಹಿತಿ ಸೋರಿಕೆ!

ವೊಡಾಫೋನ್‌ ಬ್ರಿಟನ್ ಮೂಲದ ಕಂಪೆನಿಯಾಗಿದ್ದು,ಜಿಸಿಎಚ್‌ಕ್ಯು ಟ್ಯಾಪಿಂಗ್‌ ಕೆಲಸಕ್ಕೆ ಅಮೆರಿಕ ಮೂಲದ ವೆರಿಜೋನ್‌ ಕಂಪನಿ ಸಹ ಕೈಜೋಡಿಸಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ.

ಕೇಂದ್ರ ಗೃಹ ಸಚಿವಾಲಯದ ಆರೋಪಕ್ಕೆ ಪ್ರತಿಕ್ರಿಯಿಸಿರುವ ವೊಡಾಫೋನ್‌ ಅಕ್ರಮವಾಗಿ ಯಾರಿಗೂ ಬಳಕೆದಾರರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.ಕಾನೂನು ರೀತಿಯಾಗಿ ಯಾವೆಲ್ಲಾ ಮಾಹಿತಿಗಳನ್ನು ನೀಡಬಹುದು ಆ ಮಾಹಿತಿಯನ್ನು ಮಾತ್ರ ನೀಡಿದ್ದೇವೆ ಎಂದು ಹೇಳಿದೆ.

ಫೆಬ್ರವರಿ ಮೊದಲ ವಾರದಲ್ಲಿ ಚೀನಾ ಮೂಲದ ಹುವಾವೇ ಕಂಪೆನಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ನ್ನು ಹ್ಯಾಕ್‌‌ ಮಾಡಿದೆ ಎಂದು ಐಟಿ ಖಾತೆ ರಾಜ್ಯ ಸಚಿವೆ ಕಿಲ್ಲಿ ಕೃಪಾರಾಣಿ ಸಂಸತ್ತಿನಲ್ಲಿ ಆರೋಪಿಸಿದ್ದರು. ಸರ್ಕಾರ ಹುವಾವೇ ಹ್ಯಾಕಿಂಗ್‌ ಬಗ್ಗೆ ಎಚ್ಚೆತ್ತಿದ್ದು ತನಿಖೆ ಆರಂಭಿಸಿದೆ.

ಇದನ್ನೂ ಓದಿ: ಫೋನ್‌ ಟ್ಯಾಪಿಂಗ್‌ ಯಾಕೆ?ಹೇಗೆ?ಯಾರು ಮಾಡಬಹುದು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot