ಇನ್ನು ಗೂಗಲ್ ಡ್ರೈವ್‌ನಲ್ಲಿ ವಾಟ್ಸಾಪ್ ಚಾಟ್ ಬ್ಯಾಕಪ್ ಮಾಡಿ

Written By:

ತಮ್ಮ ವಾಟ್ಸಾಪ್ ಚಾಟ್‌ಗಳನ್ನು ನೇರವಾಗಿ ಗೂಗಲ್ ಡ್ರೈವ್‌ನಲ್ಲಿ ಬ್ಯಾಕಪ್ ಮಾಡಿಡಲು ಬಳಕೆದಾರರಿಗೆ ಅನುಮತಿಸಿದೆ ಎಂದು ಆಂಡ್ರಾಯ್ಡ್ ಪೋಲೀಸ್ ವರದಿಯಲ್ಲಿ ತಿಳಿಸಿದೆ. [ಓದಿರಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೆಕ್ ದಿಗ್ಗಜರು]

ಇನ್ನು ಗೂಗಲ್ ಡ್ರೈವ್‌ನಲ್ಲಿ ವಾಟ್ಸಾಪ್ ಚಾಟ್ ಬ್ಯಾಕಪ್ ಮಾಡಿ

ವಾಟ್ಸಾಪ್‌ನ ಅತ್ಯಾಧುನಿಕ ಆವೃತ್ತಿಯು ಇದಕ್ಕೆ ಅಗತ್ಯವಾಗಿದ್ದು, ಈ ಆವೃತ್ತಿ 2.12.45. ಆಗಿದೆ. ಅಧಿಕೃತ ವಾಟ್ಸಾಪ್ ವೆಬ್‌ಸೈಟ್‌ನಲ್ಲಿ ಇದೀಗ ಈ ವೈಶಿಷ್ಟ್ಯ ಲಭ್ಯವಿಲ್ಲದೇ ಹೋದರೂ ಇಲ್ಲಿ ಕ್ಲಿಕ್ ಮಾಡುವ ಮೂಲಕ ಈ ಸೌಲಭ್ಯವನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. [ಓದಿರಿ: ರೂ 15,000 ಕ್ಕೆ ಬೆಸ್ಟ್ ಟ್ಯಾಬ್ಲೆಟ್‌ಗಳು]

ಇನ್ನು ಗೂಗಲ್ ಡ್ರೈವ್‌ನಲ್ಲಿ ವಾಟ್ಸಾಪ್ ಚಾಟ್ ಬ್ಯಾಕಪ್ ಮಾಡಿ

ಬಿಲ್ಟ್ ಅನ್ನು ಉಳಿಸಲು, ಅಪ್ಲಿಕೇಶನ್ ಅಪ್‌ಡೇಟ್ ಮಾಡುವುದು ಅಗತ್ಯವಾಗಿದೆ. ನಂತರ ಸೆಟ್ಟಿಂಗ್ಸ್‌ಗೆ ಹೋಗಿ ನಂತರ ಚಾಟ್ ಸೆಟ್ಟಿಂಗ್ಸ್ ಮತ್ತು ಚಾಟ್ ಬ್ಯಾಕಪ್ ಈ ವಿಧಾನವನ್ನು ನೀವು ಅನುಸರಿಸಬೇಕಾಗುತ್ತದೆ. ಇಲ್ಲಿ ನಿಮಗೆ ಗೂಗಲ್ ಡ್ರೈವ್ ಆಯ್ಕೆ ದೊರೆಯಲಿದ್ದು ಚಾಟ್ ಬ್ಯಾಕಪ್‌ಗೆ ನೀವು ಬದಲಾಯಿಸಿದ ನಂತರ, ಗೂಗಲ್ ಡ್ರೈವ್‌ನಲ್ಲಿ ಉಳಿಸುವ ಆಯ್ಕೆ ನಿಮಗೆ ದೊರೆಯುತ್ತದೆ.

[ಓದಿರಿ: ವಾಟ್ಸಾಪ್ ಅನ್ನು ಫೇಸ್‌ಬುಕ್ ಖರೀದಿಸಿದ್ದರ ಹಿಂದಿರುವ ಟಾಪ್ ರಹಸ್ಯ]

ಇನ್ನು ಗೂಗಲ್ ಡ್ರೈವ್‌ನಲ್ಲಿ ವಾಟ್ಸಾಪ್ ಚಾಟ್ ಬ್ಯಾಕಪ್ ಮಾಡಿ

ವಾಟ್ಸಾಪ್‌ನ ಆಂಡ್ರಾಯ್ಡ್ ಅಪ್ಲಿಕೇಶನ್ ಸಂಪೂರ್ಣ ಬದಲಾವಣೆಯನ್ನು ಪಡೆದುಕೊಳ್ಳಲಿದ್ದು ಆಂಡ್ರಾಯ್ಡ್ ಲಾಲಿಪಪ್‌ನೊಂದಿಗೆ ಒಗ್ಗೂಡಿ ಮೆಟೀರಿಯಲ್ ವಿನ್ಯಾಸವನ್ನು ಪಡೆದುಕೊಳ್ಳಲಿದೆ. ಕರೆಗಳು, ಚಾಟ್‌ ಮತ್ತು ಸಂಪರ್ಕಗಳ ಟ್ಯಾಬ್ ಅನ್ನು ಇದು ಒಳಗೊಳ್ಳಲಿದ್ದು ಸರ್ಚ್, ಸಂದೇಶ ಮತ್ತು ಆಯ್ಕೆಯನ್ನು ಹಸಿರು ಬಣ್ಣದಲ್ಲಿ ನಿಮಗೆ ಕಾಣಬಹುದು.

English summary
WhatsApp will now allow users to back up their chats to Google Drive directly, says a report in Android Police.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot