Home
ಸುದ್ದಿಜಾಲ

ಇಂದು Anonymous ಪ್ರತಿಭಟನೆ. ವಿಷಯ ಏನು?

By Varun
ಇಂದು Anonymous ಪ್ರತಿಭಟನೆ. ವಿಷಯ ಏನು?

ಇಂಟರ್ನೆಟ್ ಎಂದರೆ ದೇಶಗಳ ಬೇಲಿ ದಾಟಿ, ಜಾತಿ, ರಾಜಕೀಯ, ವರ್ಣ ಬೇಧ, ಲಿಂಗದ ಬೇಧ, ಈ ರೀತಿ ಯಾವುದೇ ತಡೆಯಿಲ್ಲದೆ ಜ್ಞಾನವನ್ನು, ವಿಷಯವನ್ನ, ಅಭಿಪ್ರಾಯವನ್ನ ಹಂಚಿಕೊಳ್ಳುವ ಬೃಹತ್ ಜಾಲಬಂಧವಾಗಿದೆ.

ಹಾಗಾಗಿಯೇ ವಿಶ್ವದ ಯಾವುದೇ ಮೂಲೆಯಲ್ಲಿ ನಡೆಯುವ ಬೆಳವಣಿಗೆಗಳು ತ್ವರಿತ ಗತಿಯಲ್ಲಿ ಸಾಮಾಜಿಕ ಜಾಲ ತಾಣಗಳ ಮೂಲಕ ತಿಳಿಯುತ್ತೆ. ಇದು ಕೆಲವೊಮ್ಮೆ ಸರಕಾರದ ನೀತಿಯ ವಿರುದ್ಧವೂ ಆಗಿರಬಹುದು, ಜನರಿಗೆ ಜಾಗೃತಿ ಮೂಡಿಸುವ ವಿಚಾರಗಳು ಇರಬಹುದು ಅಥವಾ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ವಿರುದ್ಧದ ಹೋರಾಟವೂ ಇರಬಹುದು. ಇದಕ್ಕೆ ಉತ್ತಮವಾದ ಉದಾಹರಣೆ ಎಂದರೆ, ಅಮೇರಿಕಾ ಸೇರಿದಂತೆ ಜಗತ್ತಿನ ಹಲವಾರು ದೇಶಗಳ ರಹಸ್ಯಗಳನ್ನು ಬಯಲಿಗೆಳೆದ ವಿಕಿಲೀಕ್ಸ್ ವೆಬ್ಸೈಟ್.

ಹಾಗಾಗಿಯೇ ಇರಾನ್, ಪಾಕಿಸ್ತಾನ್, ಚೀನಾ ದಂತಹ ರಾಷ್ಟ್ರಗಳು ಕೆಲವು ವೆಬ್ಸೈಟುಗಳನ್ನು ಬ್ಲಾಕ್ ಮಾಡಿ ತಮ್ಮ ಜನರಿಗೆ ವಿಶ್ವದ ಆಧುನಿಕ ಜ್ಞಾನವಾಹಿನಿಯಾದ ಇಂಟರ್ನೆಟ್ ಮೂಲಕ ಅರಿವು ಪಡೆಯಲು ತಡೆಹಿಡಿಯುತ್ತಿವೆ.

ಈ ರೀತಿಯ ತಡೆಗಟ್ಟುವಿಕೆ ಭಾರತದಂಥ ಯುವ ಜನಸಂಖ್ಯೆಯೇ ಹೆಚ್ಚಿರುವ ದೇಶದಲ್ಲೂ ತರಲು ಸರ್ಕಾರ ಪ್ರಯತ್ನಿಸುತ್ತಿರುವುದು ನಿಮಗೂ ಗೊತ್ತು. ಅದಷ್ಟೇ ಅಲ್ಲದೆ ರಿಲಯನ್ಸ್ ಕಳೆದ ತಿಂಗಳು ಜಾನ್ ಡೋ ಆರ್ಡರ್ ತರುವ ಮೂಲಕ ಬಹುತೇಕ ಇಂಟರ್ನೆಟ್ ಸೇವಾ ಕಂಪನಿಗಳ ಮೂಲಕ ವೀಡಿಯೋ ಶೇರಿಂಗ್ ಹಾಗು ಟಾರೆಂಟ್ ವೆಬ್ಸೈಟ್ ಗಳನ್ನು ಬ್ಲಾಕ್ ಮಾಡಿಸಿತ್ತು.

ಇದನ್ನು ಪ್ರತಿಭಟಿಸಿ Anonymous ತಂಡ, ಸುಪ್ರೀಂ ಕೋರ್ಟ್ ಹಾಗು ಕಾಂಗ್ರೆಸ್ ಪಕ್ಷದ ವೆಬ್ಸೈಟುಗಳನ್ನುಹ್ಯಾಕ್ ಮಾಡಿತ್ತು ಕೂಡ. ಈಗ ಈ ರೀತಿಯ ನಿರ್ಬಂಧ ಹೇರಿರುವ, ಇಂಟರ್ನೆಟ್ ಅನ್ನು ಸೆನ್ಸರ್ ಗೆ ಒಳಪಡಿಸುವ ಸರಕಾರದ ವಿಚಾರವನ್ನು ಖಂಡಿಸಿ ಇಂದು ದೇಶದಾದ್ಯಂತ Anonymous ತಂಡ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಂಗಳೂರಿನಲ್ಲೂ ಇಂದು (9/6/2012) ಎಂ.ಜಿ ರಸ್ತೆಯ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಸಂಜೆ 4:30 ಕ್ಕೆ ನಡೆಯಲಿದೆ.

ನೀವೂ ಇಂಟರ್ನೆಟ್ ಸೆನ್ಸರ್ ಶಿಪ್ ವಿರುದ್ಧ ಹೋರಾಡಲು ಇದರಲ್ಲಿ ಪಾಲ್ಗೊಳ್ಳಬಹುದು. ನಿಮಗೆ ಹೋಗಲು ಆಗದೆ ಇದ್ದರೆ, ಈ ಪ್ರತಿಭಟನೆಯ ವೀಡಿಯೋ ಸ್ಟ್ರೀಮಿಂಗ್ ಅನ್ನು ನೋಡಬಹುದು.

ಇಂಟರ್ನೆಟ್ ಸೆನ್ಸರ್ ಶಿಪ್ ಬಗ್ಗೆ ನಿಮ್ಮ ಅನಿಸಿಕೆ ಏನು? Anonymous ಮಾಡುತ್ತಿರುವ ರೀತಿ ಸರಿ ಇದೆಯೇ? ನಿಮ್ಮ ಅಭಿಪ್ರಾಯವನ್ನು ನಮಗೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+