Subscribe to Gizbot

SC, ಕಾಂಗ್ರೆಸ್ ವೆಬ್ಸೈಟ್ ಹ್ಯಾಕ್ ಆಗಿದ್ಯಾಕೆ ?

Posted By: Varun
SC, ಕಾಂಗ್ರೆಸ್ ವೆಬ್ಸೈಟ್ ಹ್ಯಾಕ್ ಆಗಿದ್ಯಾಕೆ ?

ನೆನ್ನೆ ಸಂಜೆ ಮನೆಯಲ್ಲಿ ಕಾಫಿ ಹೀರುತ್ತಾ ಇಂಟರ್ನೆಟ್ ಸೆಕ್ಯೂರಿಟಿ ಬಗ್ಗೆ ಓದುತ್ತಾ ಕೂತಿದ್ದೆ. ಪಕ್ಕದಲ್ಲಿದ್ದ ಮೊಬೈಲ್ ಸಡನ್ನಾಗಿ ವೈಬ್ರೇಟ್ ಆಯಿತು. ನೋಡಿದರೆ ಅದು ನನ್ನ ಗೆಳೆಯ ಮಹೇಶನ ಫೋನು. ಗೇಲ್ ಅಬ್ಬರ ಶುರುವಾಗಿಲ್ಲ ಈಗ್ಯಾಕೆ ಫೋನ್ ಮಾಡಿದ ಎಂದು ಯೋಚಿಸುತ್ತ ಹಲೋ ಎಂದೆ. ಅತ್ತಕಡೆಯಿಂದ ಆತ " ನೋಡೋ ಸುಪ್ರೀಂ ಕೋರ್ಟ್ ಹಾಗು ಕಾಂಗ್ರೆಸ್ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ" ಅಂದ. ಶಾಕ್ ಆದರೂ., ಸರಿ ನಾಳೆ ಇದರ ಬಗ್ಗೆ ಸುದ್ದಿ ಬರಿತೀನಿ, ಅಂಥಾ ಸೀರಿಯಸ್ ಹ್ಯಾಕಿಂಗ್ ಸುದ್ದಿ ಏನೂ ಅಲ್ಲ ಅನಿಸಿ ಫೋನಿಟ್ಟೆ.

ಯಾವುದೋ ಐಟಿ ಕಂಪನಿಯದ್ದೋ ಅಥವಾ ಬ್ಯಾಂಕಿಂಗ್ ವೆಬ್ಸೈಟುಗಳನ್ನು ಹ್ಯಾಕ್ ಮಾಡಿದ್ದರೆ ತಲೆ ಕೆಡಿಸಿಕೊಳ್ಳಬಹುದಿತ್ತು. ಅದು ಬಿಟ್ಟು ಸಡನ್ನಾಗಿ ಯಾಕಪ್ಪಾ ಸುಪ್ರೀಂ ಕೋರ್ಟ್ ಹಾಗು ಕಾಂಗ್ರೆಸ್ ವೆಬ್ಸೈಟುಗಳನ್ನು ಹ್ಯಾಕ್ ಮಾಡಿದ್ದಾರೆ ಅಂತಾ ಯೋಚಿಸುತ್ತಿದ್ದೆ. ಬಹುಶಃ ಸುಪ್ರೀಂ ಕೋರ್ಟ್, ಸಿಬಿಐ ತನಿಖೆ ಮಾಡಿಸಿ ಅಂತ ಆದೇಶ ಹೊರಡಿಸಿದ್ದಕ್ಕೆ ಹಾಗು ಕಾಂಗ್ರೆಸ್ ಸರಕಾರ ಯಡಿಯೂರಪ್ಪನವರನ್ನು ಜೈಲಿಗೆ ತಳ್ಳಲು ಪಿತೂರಿ ನಡೆಸುತ್ತಿರುವುದರಿಂದ, ಆ ದ್ವೇಷಕ್ಕೆ ಏನಾದರೂ ಈ ರೀತಿ ಮಾಡಿದ್ದಾರಾ ಅನಿಸಿತು. ಆದರೆ ನಮ್ಮ ರಾಜಕಾರಣಿಗಳಿಗೆ ಆಪಲ್ ಟ್ಯಾಬ್ಲೆಟ್ ಉಪಯೋಗಿಸಲಿಕ್ಕೇ ಟ್ರೈನಿಂಗ್ ಬೇಕಿರುವಾಗ, ಹ್ಯಾಕ್ ಮಾಡಿಸುವಷ್ಟು ತಲೆಓಡಿರಲ್ಲ ಎಂದುಕೊಂಡು ಸುಮ್ಮನಾದೆ.

ಇವತ್ತು ಬೆಳಗ್ಗೆ ಅಸಲೀ ವಿಷಯ ಏನೆಂದು ನೋಡಿದರೆ ಗೊತಾಯ್ತು, ಅದು "Anonymous" ಅನ್ನೋ ಹ್ಯಾಕರುಗಳ ಕಿತಾಪತಿ ಅಂತ. ವಿಶ್ವದಾದ್ಯಂತ ತುಂಬಾ ಕುಖ್ಯಾತಿ ಪಡೆದಿರುವ ಈ ತಂಡ, ಅಮೆರಿಕಾದ CIA ಹಾಗು FBI ವೆಬ್ಸೈಟುಗಳನ್ನೇ ಅಟ್ಯಾಕ್ ಮಾಡಿರುವಷ್ಟು ನಟೋರಿಟಿ ಹೊಂದಿದೆ.

ನೆನ್ನೆ ಸುಪ್ರೀಂ ಕೋರ್ಟ್ ಹಾಗು ಕಾಂಗ್ರೆಸ್ ವೆಬ್ಸೈಟುಗಳನ್ನು ಅಟ್ಯಾಕ್ ಮಾಡಲು ಕಾರಣ ಏನೆಂದರೆ, ದೆಹಲಿ ಹೈಕೋರ್ಟ್ ನ ಆದೇಶದ ಮೇರೆಗೆ ರಿಲಯನ್ಸ್, ಏರ್ಟೆಲ್, MTNL ಸೇರಿದಂತೆ ಹಲವಾರು ಇಂಟರ್ನೆಟ್ ಸೇವಾ ಕಂಪನಿಗಳು ವೀಡಿಯೋ ಶೇರಿಂಗ್ ಹಾಗು ಪೈರೇಟೆಡ್ ಫಿಲಂಗಳು ಸಿಗುವ ಹಲವಾರು ಟಾರೆಂಟ್ ವೆಬ್ಸೈಟುಗಳನ್ನು ಬ್ಲಾಕ್ ಮಾಡಿದ್ದರಿಂದ ಅದರ ಪ್ರತೀಕಾರಕ್ಕಾಗಿ ಈ ರೀತಿ ಮಾಡಿದ್ದಾರಂತೆ. ಈ ಹ್ಯಾಕಿಂಗ್ ಆಕ್ರಮಣಕ್ಕೆ "MT Operation India." ಅಂತ ಹೆಸರನ್ನು ಬೇರೆ ಕೊಟ್ಟಿದ್ದಾರೆ.

ಇದೇ ರೀತಿ ಪ್ರತಿ ವರ್ಷವೂ ಹಲವಾರು ಸರಾಕಾರೀ ವೆಬ್ಸೈಟುಗಳು ಹ್ಯಾಕರುಗಳಿಗೆ ಸುಲಭದ ತುತ್ತಾಗಿವೆ. ಹಲವು ತಿಂಗಳುಗಳ ಹಿಂದಷ್ಟೇ ನಮ್ಮ BBMP ವೆಬ್ಸೈಟು ಕೂಡಾ ಹ್ಯಾಕ್ ಆಗಿದ್ದನ್ನು ನೀವು ನೆನಪಿಸಿಕೊಳ್ಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot