ಮೊಬೈಲ್ ಸಂಸ್ಥೆಗಾಗಿ ವಿಪ್ರೊ ಐಟಿ ಸಹಕಾರ

Posted By:

ಪೋಲ್ಯಾಂಡ್‌ನ ಅತಿ ದೊಡ್ಡ ಮೊಬೈಲ್ ಆಪರೇಟರ್ ಟಿ ಮೊಬೈಲ್‌ಗಳಿಗೆ ಇಂಟಿಗ್ರೇಟೆಡ್ ಅಪ್ಲಿಕೇಶನ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಸೇವೆಗಳನ್ನು ಒದಗಿಸುವ ಬಹು ವರ್ಷ ಒಪ್ಪಂದವನ್ನು ಐಟಿ ಪ್ರಮುಖ ವಿಪ್ರೊ ಘೋಷಿಸಿದೆ.

ಮೊಬೈಲ್ ಸಂಸ್ಥೆಗಾಗಿ ವಿಪ್ರೊ ಐಟಿ ಸಹಕಾರ

ಓದಿರಿ: ರೀಟೈಲ್ ತಾಣಗಳಿಂದ ಗ್ರಾಹಕರಿಗೆ ಚಳ್ಳೆಹಣ್ಣು!!!

ಟಿ ಮೊಬೈಲ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಇಂತಹ ಬೆಳವಣಿಗೆಯನ್ನು ನಾವು ಕಂಡುಕೊಳ್ಳುತ್ತಿದ್ದು ಬಳಕೆದಾರರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ವಿಪ್ರೊ ಉಪಾಧ್ಯಕ್ಷರಾದ ಅನಿಲ್ ಜೈನ್ ತಿಳಿಸಿದ್ದಾರೆ.

ಮೊಬೈಲ್ ಸಂಸ್ಥೆಗಾಗಿ ವಿಪ್ರೊ ಐಟಿ ಸಹಕಾರ

ಓದಿರಿ: ಫೋನ್‌ನಲ್ಲಿ ಚಾರ್ಜ್ ಇಲ್ಲವೇ ಇನ್ನು ಚಿಂತೆಯೇ ಬೇಡ!!

ಟಿ ಮೊಬೈಲ್‌ನ ಲೆಗೆಸಿ ಅಪ್ಲಿಕೇಶನ್ ಸುಧಾರಣೆ, ಇನ್ನು ಡೊಮೇನ್‌ಗಳಿಗೆ ಆಪರೇಟಿಂಗ್ ಮಾಡೆಲ್ ವರ್ಗಾವಣೆ ಇವೇ ಮುಂತಾದ ಪ್ರಮುಖ ಕಾರ್ಯಗಳನ್ನು ಸಂಸ್ಥೆ ನಡೆಸಲಿದೆ. ಟಿ ಮೊಬೈಲ್ ಒಂದು ಪ್ರಮುಖ ವ್ಯವಹಾರ ಸಂಸ್ಥೆಯಾಗಿದ್ದು, ಕಾರ್ಯಾಚರಣೆಗಳ ಮೂಲಕ ಇದು ಬಳಕೆದಾರರನ್ನು ಇನ್ನಷ್ಟು ಸಮೀಪಿಸುವುದಕ್ಕೆ ನಾವು ನೆರವಾಗಲಿರುವೆವು ಎಂದು ಜೈನ್ ಹೇಳಿದ್ದಾರೆ. ಐರೋಪ್ಯ ದೇಶಗಳಲ್ಲೂ ವಿಪ್ರೊ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, 300 ಉದ್ಯೋಗಿಗಳು ಈ ದೇಶಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

English summary
Indian IT major Wipro Ltd announced it had bagged a multi-year contract to provide integrated application and infrastructure services to T-Mobile, Poland's largest mobile operator.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot