999 ರೂ.ಗೆ ಜಿಯೋ ಸ್ಮಾರ್ಟ್‌ಫೋನ್!! ಬಿಡುಗಡೆ ಯಾವಾಗ?

Written By:

ಭಾರತದ ಟೆಲಿಕಾಂ ಪ್ರಪಂಚದ ದಿಕ್ಕನ್ನೇ ಬದಲಾಯಿಸುತ್ತಿರುವ ರಿಲಯನ್ಸ್‌ ಜಿಯೋ ಕೇವಲ ಟೆಲಿಕಾಂನಲ್ಲಿ ಮಾತ್ರ ಸದ್ದು ಮಾಡುತ್ತಿಲ್ಲ!. ಟೆಲಿಕಾಂ ಮತ್ತು ಮೊಬೈಲ್‌ ಮಾರುಕಟ್ಟೆ ಎರಡನ್ನು ಗುರಿಯಾಗಿಸಿಕೊಂಡಿರುವ ಜಿಯೋ ಕಡಿಮೆ ಬೆಲೆಯಲ್ಲಿ ತನ್ನ LYF ಸ್ಮಾರ್ಟಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.!!

ಜಿಯೋ ಟೆಲಿಕಾಂ ಪ್ರವೇಶಕ್ಕೂ ಮುನ್ನವೇ ತನ್ನ LYF ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದ ಜಿಯೋ. ತನ್ನ ಬೆಲೆಯನ್ನು 2990 ರೂಪಾಯಿಗಳಿಂದ ಬಿಡುಗಡೆ ಮಾಡಿತ್ತು. ಹೆಚ್ಚೇನು ಫೀಚರ್‌ ಹೊಂದಿರದ ಜಿಯೋ ಫೋನ್‌ಗಳು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಂದರೂ ಮೊಬೈಲ್‌ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಏನು ಆಗಲಿಲ್ಲ.

999 ರೂ.ಗೆ ಜಿಯೋ ಸ್ಮಾರ್ಟ್‌ಫೋನ್!! ಬಿಡುಗಡೆ ಯಾವಾಗ?

ಓದಿರಿ:ನೋಕಿಯಾ ಆಂಡ್ರಾಯ್ಡ್ ಬಗ್ಗೆ ಬಳಕೆದಾರರು ಏನೆಂದರು? ಹೇಗಿದೆಯಂತೆ "ನೋಕಿಯಾ 6"?

ಹಾಗಾಗಿ, ಜಿಯೋ ಕೇವಲ 1000 ರೂಪಾಯಿಗೆ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸುತ್ತದೆ ಎಂದು ಎರಡು ತಿಂಗಳ ಹಿಂದೆಯೇ ಸುದ್ದಿಯಾಗಿತ್ತು, ಇನ್ನು ಇದೀಗ, ಜಿಯೋ 999 ಮತ್ತು 1500 ರೂಪಾಯಿಗಳ ಬೆಲೆಯಲ್ಲಿ ನೂತನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಹೊರತರುತ್ತಿದೆ ಎಂದು ಪ್ರಖ್ಯಾತ "The economic Times"ಪತ್ರಿಕೆ ವರದಿ ಮಾಡಿದೆ.

999 ರೂ.ಗೆ ಜಿಯೋ ಸ್ಮಾರ್ಟ್‌ಫೋನ್!! ಬಿಡುಗಡೆ ಯಾವಾಗ?

ಸೈಬರ್‌ಮೀಡಿಯ ರಿಸರ್ಚ್ ವಿಶ್ಲೇಷಕ ಫೈಜಲ್ ಕವೋಸ ಅವರು ಹೇಳುವಂತೆ 4G ವೋಲ್ಟ್‌ ಹೊಂದಿರುವ ಸ್ಮಾರ್ಟ್‌ಫೊನ್‌ಗಳನ್ನು ಜಿಯೋ ಅತ್ಯಂತ ಕಡಿಮೆ ದರಕ್ಕೆ ಬಿಡುಗಡೆ ಮಾಡುತ್ತಿದ್ದು, 2017 ರಲ್ಲಿ ಸ್ಮಾರ್ಟ್‌ಪೊನ್‌ ಮಾರುಕಟ್ಟೆಗೆ ಒಂದು ದೊಡ್ಡ ಚಾಲೆಂಜ್ ಇದ್ದಂತೆ ಎಂದು ಹೇಳಿದ್ದಾರೆ.

999 ರೂ.ಗೆ ಜಿಯೋ ಸ್ಮಾರ್ಟ್‌ಫೋನ್!! ಬಿಡುಗಡೆ ಯಾವಾಗ?

ಓದಿರಿ: ವೂಟರ್ ಐಡಿಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಸುವುದು ಹೇಗೆ? ಮನೆಗೆ ಡೆಲಿವರಿ ಪಡೆಯಿರಿ!!

ಜಿಯೋ ಹೊಂದಿರುವ ಎಲ್ಲಾ ಫೀಚರ್‌ಗಳನ್ನು ಒಳಗೊಂಡ, ಅಂದರೆ ಜಿಯೋ ಮನಿ, ಜಿಯೋ ವಾಲೆಟ್, ಜಿಯೋ ಟಿವಿಯಂತಹ ಎಲ್ಲಾ ಅಪ್ಲಿಕೇಷನ್‌ಗಳು ಜಿಯೋವಿನ ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಇರುತ್ತದೆ ಎನ್ನಲಾಗಿದ್ದು, ಒಂದು ರೂಮರ್ಸ್‌ ಪ್ರಕಾರ ಉಚಿತ ಸೇವೆ ಇರುವಾಗಲೇ ಜಿಯೋ ತನ್ನ 999 ಮತ್ತು 1500 ರೂಪಾಯಿ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎನ್ನಲಾಗಿದೆ.

 

English summary
According to an Economic Times report, Reliance Jio is considering launching 4G VoLTE-ready feature phones that would cost as little as Rs 999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot