ನೋಕಿಯಾ ಆಂಡ್ರಾಯ್ಡ್ ಬಗ್ಗೆ ಬಳಕೆದಾರರು ಏನೆಂದರು? ಹೇಗಿದೆಯಂತೆ "ನೋಕಿಯಾ 6"?

Written By:

ಅಂತು ಇಂತು ನೋಕಿಯಾ ಕಂಪೆನಿ ತನ್ನ ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿಷಯ ಎಲ್ಲರಿಗೂ ಗೊತ್ತೇ ಇದೇ. ಮೊದಲಿಗೆ ಚೀನಾದಲ್ಲಿ ಬಿಡುಗಡೆಯಾಗಿರುವ ನೋಕಿಯಾ 6 ಸ್ಮಾರ್ಟ್‌ಫೊನ್ ಮಾರಾಟವೂ ಜೋರಾಗಿದೆ.!!

ನೋಕಿಯಾ ಮೊಬೈಲ್‌ ಎಂದರೆ ಗುಣಮಟ್ಟದ ಮೊಬೈಲ್‌ ಎಂದು ನಂಬಿರುವ ಜನ ಇದೀಗ ನೋಕಿಯಾದ ನೂತನ ಸ್ಮಾರ್ಟ್‌ಫೋನ್‌ ಬಗ್ಗೆಯೂ ಅದೇ ನಂಬಿಕೆಯನ್ನು ಇಟ್ಟಿದ್ದಾರೆ. ಭಾವನಾತ್ಮಕ ಸಂಭದ ವೃದ್ದಿಸಿಕೊಂಡಿರುವ ನೋಕಿಯಾ ಕೂಡ ತನ್ನ ಮೇಲಿನ ವಿಶ್ವಾಸವನ್ನು ಉಳಿಸಿಕೊಳ್ಳಲು ಬಹಳಷ್ಟು ಪ್ರಯತ್ನಿಸಿದೆ ಎಂದು ರೀಪೋರ್ಟ್ ಒಂದು ಹೇಳಿದೆ.!

ನೋಕಿಯಾ ಆಂಡ್ರಾಯ್ಡ್ ಬಗ್ಗೆ ಬಳಕೆದಾರರು ಏನೆಂದರು? ಹೇಗಿದೆಯಂತೆ

ಲಾಂಚ್‌ ಆಯ್ತು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!! ಊಹಾಪೋಹಕ್ಕೆ ತೆರೆಎಳೆದ "ನೋಕಿಯಾ 6"!

ಚೀನಾದಲ್ಲಿ ಬಿಡುಗಡೆಯಾಗಿರುವ ನೋಕಿಯಾ 6 ಸ್ಮಾರ್ಟ್‌ಫೋನ್ 16,750 ರೂಪಾಯಿ ಬೆಲೆಯನ್ನು ಹೊಂದಿದ್ದು, 5.5 ಇಂಚ್‌ ಡಿಸ್‌ಪ್ಲೆ, 4 GB ರ್ಯಾಮ್ ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಬೆಲೆಗೆ ತಕ್ಕಂತೆ ಫೀಚರ್ಸ್ ಹೊಂದಿರುವ ನೋಕಿಯಾ 6 ಅತ್ಯುತ್ತಮ ಅನ್ನುವಂತಹ ಕಾರ್ಯನಿರ್ವಹಣೆ ನೀಡುತ್ತಿದೆ ಎಂದು ಬಳಕೆದಾರರು ತೀಳಿಸಿದ್ದಾರೆ.

ನೋಕಿಯಾ ಆಂಡ್ರಾಯ್ಡ್ ಬಗ್ಗೆ ಬಳಕೆದಾರರು ಏನೆಂದರು? ಹೇಗಿದೆಯಂತೆ

ಸ್ನಾಪ್‌ಡ್ರಾಗನ್ 820 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 7.0 ನ್ಯೂಗಾ ಮಾದರಿಯನ್ನು ಹೊಂದಿರುವ ಕೆಲವೇ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ನೋಕಿಯಾ ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದರಿಂದ ಗ್ರಾಹಕರು ಸಂತಸಗೊಂಡಿದ್ದು, ಕ್ಯಾಮೆರಾ ಗುಣಮಟ್ಟವೂ ಅತ್ಯುತ್ತಮವಾಗಿದ್ದು, ಉತ್ತಮ ಫೋಟೊಗಳನ್ನು ತೆಗೆಯುತ್ತದೆ ಎಂದು ಬಳಕೆದಾರರು ಹೇಳಿದ್ದಾರೆ.

ನೋಕಿಯಾ ಆಂಡ್ರಾಯ್ಡ್ ಬಗ್ಗೆ ಬಳಕೆದಾರರು ಏನೆಂದರು? ಹೇಗಿದೆಯಂತೆ

ಇನ್ನು ಬ್ಯಾಟರಿ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೇವಲ 3000Mah ಬ್ಯಾಟರಿ ಬಾಳಿಕೆ ಕಡಿಮೆಯಾಗಿದೆ. ಸಂಪುರ್ಣವಾಗಿ ಎರಡು ದಿನ ಬ್ಯಾಟರಿ ಬ್ಯಾಕಪ್‌ ಬರುಂವಂತೆ ಸ್ಮಾರ್ಟ್‌ಪೊನ್‌ ರೂಪಿತವಾಗಿಲ್ಲ ಎಂದು ಆರೋಪಿಸಿದ್ದಾರೆ. ಒಟ್ಟಾರೆ, ನೋಕಿಯಾ ಆಂಡ್ರಾಯ್ಡ್ ತನ್ನ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

English summary
Nokia had mentioned last year that 2017 is going to be the year they come back to where the action is. to knoiw more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot