ಮಕ್ಕಳಿಗಾಗಿ ಹೊಸದೊಂದು ಸೋಶಿಯಲ್‌ ನೆಟ್‌ವರ್ಕ್

Posted By:

ನಿಮ್ಮ ಮಕ್ಕಳು ಸೋಶಿಯಲ್‌ ನೆಟ್‌ವರ್ಕ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಚಿಂತೆ ಮಾಡುತ್ತಿದ್ದೀರಾ. ಹಾಗಾದ್ರೆ ಇನ್ನು ಮುಂದೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಮಕ್ಕಳಿಗಾಗಿಯೇ ಹೊಸದಾಗಿ ಒಂದು ಸೋಶಿಯಲ್‌ ನೆಟ್‌ವರ್ಕ್ ಆರಂಭಗೊಂಡಿದೆ.

ಜಾಹಿರಾತು ಮತ್ತು ಡಿಜಿಟಲ್‌ ಮೀಡಿಯಾದಲ್ಲಿ ಹೆಸರುವಾಸಿಯಾದ ಫೋಕಸ್‌ ಗ್ರೂಪ್‌ ವರ್ಲ್ಡು(Worldoo )ಎಂಬ ಹೆಸರಿನ ಮಕ್ಕಳಿಗಾಗಿಯೇ ವಿಶೇಷವಾಗಿ ರೂಪಿಸಿಲಾದ ವೆಬ್‌ಸೈಟ್‌ನ್ನು ಆರಂಭಿಸಿದೆ.

ಮಕ್ಕಳಿಗಾಗಿ ಹೊಸದೊಂದು ಸೋಶಿಯಲ್‌ ನೆಟ್‌ವರ್ಕ್

ಸೋಶಿಯಲ್‌ ನೆಟ್‌ವರ್ಕ್‌ನಲ್ಲಿ ಇಂದಿನ ಯುವ ಮಕ್ಕಳು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಇಂದಿನ ಮಕ್ಕಳಿಗೆ ಎಳವೆಯಲ್ಲಿ ಉತ್ತಮ ಮಾಹಿತಿ ನೀಡಿ ಅವರ ಶಿಕ್ಷಣಕ್ಕೆ ಸಹಾಯವಾಗುವಂತೆ ಈ ಸೋಶಿಯಲ್‌ ನೆಟ್‌ವರ್ಕ್‌ನ್ನು ಫೋಕಸ್‌ ಗ್ರೂಪ್‌ ವಿನ್ಯಾಸ ಪಡಿಸಿದೆ.

ವರ್ಲ್ಡು ವೆಬ್‌ಸೈಟ್‌ನಲ್ಲಿ ಏನೇನಿದೆ?
ಆರರಿಂದ ಹನ್ನೆರಡು ವಯಸ್ಸಿನ ಮಕ್ಕಳನ್ನು ಕೇಂದ್ರವಾಗಿರಿಸಿ ಈ ಸೋಶಿಯಲ್‌ ನೆಟ್‌ವರ್ಕ್‌ನ್ನು ಆರಂಭಿಸಲಾಗಿದೆ. ಇದರಲ್ಲಿ ಮಕ್ಕಳು ಲಾಗಿನ್‌ ಆಗಬೇಕಾದ್ರೆ ಪೋಷಕರ ಇಮೇಲ್‌ ಕಡ್ಡಾಯ.ಮಕ್ಕಳ ಬುದ್ದಿಯನ್ನು ಚುರುಕು ಮಾಡುವ ಗೇಮ್ಸ್‌ಗಳು, ಜನರೆಲ್‌ ನಾಲೆಡ್ಜ್‌, ಜೊತೆಗೆ ಮಕ್ಕಳೇ ಚಾಟ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ನ್ಯಾಷನಲ್‌ ಜಿಯಾಗ್ರಫಿಕ್‌,ಜಿ ಕ್ಯೂ ವೀಡಿಯೋಗಳನ್ನು ಸಹ ವೀಕ್ಷಿಸಬಹುದಾಗಿದೆ.

ಈ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಭೇಟಿ ನೀಡಿ: www.worldoo.com

ಇದನ್ನೂ ಓದಿ : ಕಂಪ್ಯೂಟರ್‌ ಕೀಬೋರ್ಡ್‌ನಲ್ಲಿ ವೇಗವಾಗಿ ಟೈಪಿಂಗ್‌ ಮಾಡುವುದು ಹೇಗೆ ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot