ಫೇಸ್‌ಬುಕ್‌ನಿಂದ ಹಣ ಸಂಪಾದನೆ .!

Posted By:

ಫೇಸ್‌ಬುಕ್‌ನಿಂದ ಹಣ ಸಂಪಾದನೆ .! ಸುದ್ದಿ ಕೇಳಿ ಶಾಕ್‌ ಅದ್ರಾ. ಹೌದು ಈಗ ಮಕ್ಕಳು ಫೇಸ್‌ಬುಕ್‌ನಿಂದ ಹಣ ಸಂಪಾದಿಸಲು ತೊಡಗಿದ್ದಾರೆ. ಅಮೆರಿಕದಲ್ಲಿಒಬ್ಬಳು 14 ವರ್ಷದ ಬಾಲಕಿ ತನ್ನ ಅಪ್ಪನಿಂದಲೇ ಹಣ ಸಂಪಾದನೆ ಮಾಡಲು ಆರಂಭಿಸಿದ್ದಾಳೆ.

ಫೇಸ್‌ಬುಕ್‌ ಎಷ್ಟು ಪ್ರಸಿದ್ದವಾಗುತ್ತಿದೆ ಎಂದರೆ ಸಣ್ಣ ಮಕ್ಕಳು ಸಹ ಈಗ ಅಕೌಂಟ್‌ ಓಪನ್‌ ಮಾಡ್ತಿದ್ದಾರೆ. ಇದೇ ರೀತಿಯಲ್ಲಿ 14 ವರ್ಷದ ಬಾಲಕಿ ಫೇಸ್‌ಬುಕ್‌ ಅಕೌಂಟ್‌ ಓಪನ್‌ ಮಾಡಿದ್ದಾಳೆ. ಅಕೌಂಟ್‌ ಓಪನ್‌ ಮಾಡಿದ್ರೆ ಏನು ತಪ್ಪಿಲ್ಲ ಬಿಡಿ ಆದ್ರೆ ಯಾವಾಗ್ಲೂ ಫೇಸ್‌ಬುಕ್‌ನಲ್ಲಿ ಕಾಲ ಕಳೆದ್ರೆ ಹೇಗೆ ? ಬೆಳಗ್ಗೆ ಎದ್ದ ಮೇಲೆ ಫೇಸ್‌ಬುಕ್‌, ಸ್ಕೂಲ್‌ನಿಂದ ಬಂದ ಮೇಲೂ ಫೇಸ್‌ಬುಕ್‌ನಲ್ಲೇ ಈ ಬಾಲೆ ಕಾಲ ಕಳೆಯತೊಡಗಿದಳು.ಪೋಷಕರು ಎಷ್ಟೇ ಗದರಿಸಿದ್ರೂ ಕದ್ದು ಮುಚ್ಚಿ ಫೇಸ್‌ಬುಕ್‌ ನೋಡಲು ಆರಂಭಿಸ ತೊಡಗಿದಳಂತೆ. ಕೊನೆಗೆ ಇದಕ್ಕೆ ಪರಿಹಾರವಾಗಿ ಆ ಹುಡುಗಿಯ ತಂದೆ ಇವಳ ಫೇಸ್‌ಬುಕ್‌ ಚಟವನ್ನು ನಿಲ್ಲಿಸಲು ಒಂದು ಉಪಾಯ ಮಾಡಿದರು.

ಫೇಸ್‌ಬುಕ್‌ನಿಂದ ಹಣ ಸಂಪಾದನೆ .!

ಆ ತನ್ನ ಪ್ರೀತಿಯ ಮಗಳನ್ನು ಕರೆದು ನಾನು ಹಣ ಕೊಡ್ತೇನೆ. ನೀನು ಫೇಸ್‌ಬುಕ್‌ ಚಟವನ್ನು ನಿಲ್ಲಿಸಬೇಕು ಎಂದು ಹೇಳಿದ್ನನಂತೆ. ಅಪ್ಪನ ಮಾತಿಗೆ ಒಪ್ಪಿ ಆ ಬಾಲೆ ಸರಿಯೆಂದು ತಲೆಯಾಡಿಸುವುದೇ.! ಸರಿ ಒಪ್ಪಿದಾಯ್ತು ಅದಕ್ಕೆ ಸಾಕ್ಷಿ ಬೇಕಲ್ಲ. ಕೊನೆಗೆ ಒಂದು ಒಪ್ಪಂದ ಪತ್ರವು ತಯಾರಿ ಆಯ್ತು. 5 ತಿಂಗಳ ಕಾಲ ಫೇಸ್‌ಬುಕ್‌ನ್ನು ಮಗಳು ಬಳಸದ್ದಕ್ಕೆ ನಾನು ಅವಳಿಗೆ 200 ಡಾಲರ್‌ ನೀಡುತ್ತೇನೆ ಎಂದು ಅಪ್ಪ ಮಗಳಿಗೆ ಒಪ್ಪಂದ ಪತ್ರದಲ್ಲಿ ಸಹಿ ಹಾಕಿ ಕೊಟ್ಟಿದ್ದಾನಂತೆ.!ಈಗ ತಂದೆ ಬ್ಲಾಗ್‌ನಲ್ಲಿ ಈ ಒಪ್ಪಂದ ಪತ್ರದ ಫೋಟೋವನ್ನು ಪ್ರಕಟಿಸುವ ಮೂಲಕ ಈ ವಿಚಾರ ವಿಶ್ವದ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದೆ.

ಈಗ ಈ ಒಪ್ಪಂದ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಿಂದೆ ಮಕ್ಕಳು ಕೆಲಸ ಮಾಡಿದ್ದಕ್ಕೆ ಪೋಷಕರು ಹಣ ನೀಡುತ್ತಿದ್ದರೆ ಇಂದು ಫೇಸ್‌ಬುಕ್‌ ಅಕೌಂಟ್‌ ಡಿ ಆಕ್ಟಿವೇಷನ್‌ ಮಾಡುವುದಕ್ಕೆ ಹಣ ನೀಡುವ ಪರಿಸ್ಥಿತಿ ಎದುರಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot