ಜಗತ್ತಿನ ಡೇಂಜರಸ್ ಕಂಪ್ಯೂಟರ್ ವೈರಸ್ ಪತ್ತೆ !

By Varun
|
ಜಗತ್ತಿನ ಡೇಂಜರಸ್ ಕಂಪ್ಯೂಟರ್ ವೈರಸ್ ಪತ್ತೆ !

ಜಗತ್ತಿನಾದ್ಯಂತ ಜುಲೈ 9 ರ ಇಂಟರ್ನೆಟ್ ಬಂದ್ ನ ಸಾಧ್ಯತೆಯ ಸುದ್ದಿಯ ಬೆನ್ನಲ್ಲೇ ರಶಿಯಾದ ಇಂಟರ್ನೆಟ್ ಸೆಕ್ಯೂರಿಟಿ ಸಂಸ್ಥೆಕ್ಯಾಸ್ಪರ್ ಸ್ಕಿ ಲ್ಯಾಬ್, "ಫ್ಲೇಮ್" ಎಂಬ ಸಂಕೇತ ನಾಮ ಹೊಂದಿರುವ ವೈರಸ್ ಒಂದನ್ನು ಪತ್ತೆ ಹಚ್ಚಿದೆ.

Worm.Win32.Flame ಎಂದು ಇದನ್ನು ಪತ್ತೆ ಹಚ್ಚಲಾಗಿದ್ದು 2010 ರಿಂದ ವ್ಯಾಪಕವಾಗಿ ಹರಡುತ್ತಿದ್ದು, ಈ ಡೇಂಜರಸ್ ವೈರಸ್ ಒಂದು ಬಾರಿ ಇದರ ಸೋಂಕು ಕಂಪ್ಯೂಟರ್ ಗೆ ಹರಡಿದರೆ, ಅದರ ಸಂಕೀರ್ಣ ಪ್ರೋಗ್ರಾಮ್ ಗಳ ಮೂಲಕ ಇಡೀ ಕಂಪ್ಯೂಟರ್ ಅನ್ನು ಆವರಿಸಿಕೊಂಡು, ಆ ಕಂಪ್ಯೂಟರ್ ನ ನೆಟ್ವರ್ಕ್ ಅನ್ನು ಜಾಲಾಡಿ, ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು, ಡಿಸ್ಪ್ಲೇಯ ಮೇಲ್ವಿಚಾರಣೆ ಮಾಡುವುದು, ವೀಡಿಯೋ ಕಾಲಿಂಗ್ ಮಾಡಿದರೆ ಅದನ್ನು ರೆಕಾರ್ಡ್ ಮಾಡಿಕೊಳ್ಳುವುದು, ಕೀಬೋರ್ಡ್ ನ ಕೆಲಸವನ್ನು ಕೆಡಿಸುವುದು ಮಾಡುತ್ತದಂತೆ.

ಇದಷ್ಟೇ ಅಲ್ಲದೆ, ಈ ಎಲ್ಲಾ ಮಾಹಿತಿಯನ್ನು ಜಗತ್ತಿನಾದ್ಯಂತ ಇರುವ ತನ್ನ ಹಲವಾರು ಕಂಪ್ಯೂಟರುಗಳಿಗೆ ರವಾನೆ ಮಾಡುತ್ತದಂತೆ. ಈ ಮಾಹಿತಿ ರವಾನೆಯಾದ ನಂತರ ಆ ಸರ್ವರ್ ಗಳ ಮೂಲಕ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಇನ್ನೂ ಹೆಚ್ಚಿನ ನಾಶ ಮಾಡುವ ಮಾಡ್ಯೂಲ್ ಗಳನ್ನು ಸೇರಿಸಿ ಸಂಪೂರ್ಣವಾಗಿ ಹಾಳುಮಾಡುತ್ತದೆ ಎಂದು ಪತ್ತೆ ಹಚ್ಚಲಾಗಿದೆ.

ಮೊಟ್ಟ ಮೊದಲ ಬಾರಿಗೆ ಈ ವೈರಸ್ ಅನ್ನು ಇರಾನ್ ನಲ್ಲಿ ಪತ್ತೆ ಹಚ್ಚಲಾಗಿದ್ದು, ಇಸ್ರೇಲ್, ಸುಡಾನ್, ಸಿರಿಯಾ, ಲೆಬಾನನ್, ಸೌದಿ ಅರೇಬಿಯಾ ಹಾಗು ಈಜಿಪ್ಟ್ ದೇಶಗಳಿಗೂ ಹರಡಿದೆಯಂತೆ. ಈ ಫ್ಲೇಮ್ ವಾರ್ಸ್ ಈ ದೇಶಗಳ ಮಹತ್ವದ ಮಾಹಿತಿಯನ್ನು ಶೇಖರಿಸಿರುವುದರಿಂದ ಏಶಿಯಾ ಖಂಡದ ದೇಶಗಳಿಗೂ ಹರಡುವ ಸಾಧ್ಯತೆ ಇದೆ ಎಂಬ ಗುಮಾನಿ ಇದೆ ಎನ್ನಲಾಗಿದೆ.

ಕ್ಯಾಸ್ಪರ್ ಸ್ಕಿ ಲ್ಯಾಬ್ ನ ಪ್ರಕಾರ ಇದುವರೆಗೂ ಪತ್ತೆಹಚ್ಚಲಾಗಿರುವ ವೈರಸ್ ಗಳಲ್ಲೇ ಅತ್ಯಂತ ಸಂಕೀರ್ಣವಾದ ಹಾಗು ಮುಂದುವರೆದ ತಂತ್ರಗಳು ಇರುವ ಈ "ಫ್ಲೇಮ್" ವೈರಸ್ ಇದುವರೆಗೂ 600ಕ್ಕೂ ಹೆಚ್ಚು ವ್ಯಕ್ತಿಗಳ, ಕಂಪನಿಗಳ ಹಾಗು ಸರಕಾರೀ ಕಂಪ್ಯೂಟರುಗಳನ್ನು ಕೆಡಿಸಿದೆಯಂತೆ.

ಇನ್ನೂ ಆತಂಕಕಾರಿ ವಿಷಯವೆಂದರೆ ಇದನ್ನು ಯಾವುದೇ ದೇಶದ ಮೇಲೆ ಉಪಯೋಗಿಸಬಹುದಾಗಿದ್ದು, USB ಮೂಲಕವೂ ಸುಲಭವಾಗಿ ಹರಡಬಹುದಂತೆ. ಸದ್ಯಕ್ಕೆ ಕ್ಯಾಸ್ಪರ್ ಸ್ಕಿ ಈ ವೈರಸ್ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮಾಡಿ ಮತ್ತಷ್ಟು ವಿವರ ಗಳನ್ನು ಪ್ರಕಟಿಸಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X