ಟಾಪ್ 5 ವೈರಸ್ ವಿರೋಧೀ ಉಚಿತ ಸಾಫ್ಟ್ ವೇರ್

By Super
|
ಟಾಪ್ 5  ವೈರಸ್ ವಿರೋಧೀ ಉಚಿತ  ಸಾಫ್ಟ್ ವೇರ್

ಕಂಪ್ಯೂಟರ್, ಲ್ಯಾಪ್ ಟಾಪ್ ಗಳಿಗೆ ಬಹು ಮುಖ್ಯ ಸಮಸ್ಯೆ ಎಂದರೆ ಈ ವೈರಸ್ ಗಳು. ಇಂಟರ್ನೆಟ್ ಇದ್ದರಂತೂ ಬಿಡಿ ಡೌನ್ಲೋಡ್ ಮಾಡುವಾಗೆಲ್ಲ ಹುಷಾರಾಗಿರಬೇಕು. ಇದೆಲ್ಲದರಿಂದ ರಕ್ಷಿಸಿಕೊಳ್ಳಲು ಒಳ್ಳೆ ವೈರಸ್ ವಿರೋಧೀ ತಂತ್ರಾಂಶ ಬೇಕೇ ಬೇಕು. ಉಚಿತವಾಗಿ ಸಿಗುವ 5 ಉತ್ತಮ ತಂತ್ರಾಂಶಗಳ ಲಿಸ್ಟ್ ಇಲ್ಲಿದೆ.

1. ಮೈಕ್ರೋ ಸಾಫ್ಟ್ ಎಸೆನ್ಶಿಯಲ್ಸ್ :ಈ ತಂತ್ರಾಂಶ ವೈರಸ್, ಸ್ಪೈ ವೇರ್, ಟ್ರೋಜನ್ ಮತ್ತು ಇತರ ಹಾನಿಕಾರಕ ಸಾಫ್ಟ್ ವೇರ್ ಗಳಿಂದ ರಕ್ಷಿಸುತ್ತದೆ .ಆಟೋಮ್ಯಾಟಿಕ್ ಅಪ್ಡೇಟ್ ಆಗುವುದರಿಂದ ಪ್ರತೀ ವರ್ಷವೂ ಡೌನ್ಲೋಡ್ ಮಾಡುವ ಅಗತ್ಯ ಇರುವುದಿಲ್ಲ.

2. ಪಿ. ಸಿ ಟೂಲ್ಸ್ : ಸಾಮಾನ್ಯವಾಗಿ ಬರುವ ಸೈಬರ್ ತೊಂದರೆಗಳಿಂದ ಇದು ತಡೆ ಗಟ್ಟುತ್ತದೆ. ನೀವು ಡೌನ್ ಲೋಡ್ ಮಾಡುವಾಗ ಬರುವ ವೈರಸ್ ಗಳನ್ನ ಮೊದಲೇ ಗುರುತಿಸಿ ನಿಮ್ಮ ಕಂಪ್ಯೂಟರ್ ಗೆ ಬರದಂತೆ ಮಾಡುತ್ತದೆ.

3. ಅವಾಸ್ಟ್ : ಅತ್ಯುತ್ತಮ ವೈರಸ್ ಸ್ಕ್ಯಾನ್ ಮಾಡುವ ಇಂಜಿನ್ ಗಳನ್ನ ಹೊಂದಿದ್ದು ತುಂಬಾ ಹೆಸರುವಾಸಿಯಾದ ಸಾಫ್ಟ್ ವೇರ್ ಇದಾಗಿದೆ.

4. ಕ್ಲಾಂವಿನ್ ಪೋರ್ಟಬಲ್ : ವಿನ್ ಡೋಸ್ ಓ.ಎಸ್ ಇರುವ ಕಂಪ್ಯೂಟರ್ ಗಳಿಗೋಸ್ಕರವೇ ಡಿಸೈನ್ ಮಾಡಲಾದ ಇದನ್ನ ನೀವು ಪೆನ್ ಡ್ರೈವ್ ನಲ್ಲಿ ಕೂಡ ತೆಗೆದುಕೊಂಡು ಹೋಗಬಹುದು. ಯಾವಾಗ ಫೈಲ್ ಗಳನ್ನ ಸ್ಕ್ಯಾನ್ ಮಾಡಬೇಕೋ ಆಗ ಉಪಯೋಗಿಸಬಹುದು.

5. ತ್ರೆಟ್ ಫೈರ್ : ಇದರ ಆಕ್ಟಿವ್ ಡಿಫೆನ್ಸ್ ತಂತ್ರಜ್ಞಾನದಿಂದ ವೈರಸ್, ಟ್ರೋಜನ್ , ವೊರ್ಮ್, ರೂಟ್ ಕಿಟ್ ನಂತವುಗಳನ್ನೂ ತಡೆಗಟ್ಟುವ ಸಾಮರ್ಥ್ಯ ವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X