ಶ್ಯೋಮಿ ಎಮ್ಐ 4 ಐನ 32 ಜಿಬಿ ಆವೃತ್ತಿ ಬಿಡುಗಡೆ

Written By:

ಭಾರತದಲ್ಲಿ ತನ್ನ ಪ್ರಥಮ ವರ್ಷವನ್ನು ಸಂಪೂರ್ಣಗೊಳಿಸಿರುವ ಶ್ಯೋಮಿ ಜುಲೈ 22 ರಂದು, ವಾರ್ಷಿಕ ಸಂಭ್ರಮಾಚರಣೆಯನ್ನು ಕೆಲವೊಂದು ಯೋಜನೆಗಳ ಮೂಲಕ ಹಮ್ಮಿಕೊಂಡಿದೆ. ಎಮ್ಐ 4ಐ ಸ್ಮಾರ್ಟ್‌ಫೋನ್ ಅನ್ನು ಮುಂಬರುವ ಡಿವೈಸ್ ಆಗಿ ಶ್ಯೋಮಿ ಬಿಡುಗಡೆ ಮಾಡಲಿದೆ.

ಓದಿರಿ: ವಿಜ್ಞಾನ ವಿಸ್ಮಯ: ಅಂಗಗಳ ಬದಲೀ ಪ್ರಯೋಗ

ಶ್ಯೋಮಿ ಎಮ್ಐ 4 ಐನ 32 ಜಿಬಿ ಆವೃತ್ತಿ ಬಿಡುಗಡೆ

ಪ್ರಸ್ತುತ ಉತ್ಪನ್ನದ 32 ಜಿಬಿ ಆವೃತ್ತಿಯನ್ನು ಕಂಪೆನಿ ಲಾಂಚ್ ಮಾಡುವ ನಿಟ್ಟಿನಲ್ಲಿದೆ. ಅತಿ ಹೆಚ್ಚು ಸಂಗ್ರಹಣಾ ಸಾಮರ್ಥ್ಯವುಳ್ಳ ಡಿವೈಸ್ ಅಂತೆಯೇ ವಿಶೇಷ ವೈಶಿಷ್ಟ್ಯತೆಗಳು ಶ್ಯೋಮಿ ಜನತೆಗೆ ನೀಡುವ ಕೊಡುಗೆಯಾಗಿದೆ ಎಂಬದು ಶ್ಯೋಮಿ ವೈಸ್ ಪ್ರೆಸಿಡೆಂಟ್ ಹೂಗೋ ಬಾರಾ ಮಾತಾಗಿದೆ.

ಶ್ಯೋಮಿ ಎಮ್ಐ 4 ಐನ 32 ಜಿಬಿ ಆವೃತ್ತಿ ಬಿಡುಗಡೆ

ಎಮ್ಐ 4ಐ ನ ಪ್ರಸ್ತುತ ಆವೃತ್ತಿ 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಯಾವುದೇ ಎಸ್‌ಡಿ ಕಾರ್ಡ್‌ಗೆ ಬೆಂಬಲವನ್ನು ಒದಗಿಸುತ್ತಿಲ್ಲ. ಆದರೆ ಕಂಪೆನಿ ಮಾಡಿರುವ ಟ್ವೀಟ್ ಪ್ರಕಾರ ಎಮ್ಐ 4ಐ ನ ಡಿವೈಸ್ ಇನ್ನು 32 ಜಿಬಿಗೆ ಬೆಂಬಲವನ್ನು ಒದಗಿಸುತ್ತಿದ್ದು ಆದಷ್ಟು ಬೇಗನೇ ಜನತೆಯನ್ನು ತಲುಪಲಿದೆ.

ಓದಿರಿ: ನಮ್ಮ ಬೆಂಗಳೂರಿನಲ್ಲೂ ಉಚಿತ ವೈಫೈ ಎಲ್ಲೆಲ್ಲಿ?

ಶ್ಯೋಮಿ ಎಮ್ಐ 4ಐ, 5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. 1.7GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಬಿಟ್ ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದ್ದು, 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ರಿಯರ್ ಕ್ಯಾಮೆರಾ 13 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ. ಆರು ಭಾರತೀಯ ಭಾಷೆಗಳಿಗೆ ಈ ಡಿವೈಸ್ ಬೆಂಬಲವನ್ನೊದಗಿಸುತ್ತಿದ್ದು ವಿಶುವಲ್ ಐವಿಆರ್‌ಗೂ ಇದು ಬೆಂಬಲ ನೀಡುತ್ತಿದೆ.

English summary
Xiaomi will complete its first year in India on July 22, and is celebrating the anniversary with week-long deals and new products. And one of the upcoming devices you can expect may be a new variant of its Mi 4i smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot