ಶ್ಯೋಮಿ ಎಮ್ಐ 4 ಮೇಲೆ ಅದ್ಭುತ ದರಕಡಿತ

Written By:

ಭಾರತದಲ್ಲಿ ತನ್ನ ಪ್ರಥಮ ವರ್ಷದ ಸಂಭ್ರಮಾಚರಣೆಯನ್ನು ಶ್ಯೋಮಿ ಆಚರಿಸುತ್ತಿದ್ದು ತನ್ನ ಉತ್ಪನ್ನಗಳ ಮೇಲೆ ಅದ್ಭುತ ರಿಯಾಯಿತಿಯನ್ನು ಇದು ಒದಗಿಸುತ್ತಿದೆ. ಎಮ್ಐ 4 ಮೇಲೆ ಅದ್ಭುತ ದರಕಡಿತ ಕೊಡುಗೆಯನ್ನು ಕಂಪೆನಿ ಘೋಷಿಸಿದ್ದು, ಇತ್ತೀಚೆಗೆ ಲಾಂಚ್ ಮಾಡಿರುವ ಎಮ್ಐ 4 ನ 32 ಜಿಬಿ ಆವೃತ್ತಿಯನ್ನು ಆಕರ್ಷಕ ದರದೊಂದಿಗೆ ಹೆಡ್‌ಫೋನ್ ಕೊಡುಗೆಯೊಂದಿಗೆ ಘೋಷಿಸಿದೆ.

ಶ್ಯೋಮಿ ಎಮ್ಐ 4 ಮೇಲೆ ಅದ್ಭುತ ದರಕಡಿತ

ಇನ್ನು ತನ್ನ ಸಂಭ್ರಮಾಚರಣೆಗೆ ಇನ್ನಷ್ಟು ಮೆರುಗನ್ನು ನೀಡುವುದಕ್ಕಾಗಿ, ಎಮ್ಐ 4 64 ಜಿಬಿ ಆವೃತ್ತಿಯ ಮೇಲೆ ವಿಶೇಷ ಕೊಡುಗೆಯನ್ನು ಕಂಪೆನಿ ಘೋಷಿಸಿದ್ದು ರೂ 2,000 ದರಕಡಿತ ಕೊಡುಗೆಯನ್ನು ನೀಡುತ್ತಿದೆ. ಈ ಆಫರ್ ಇಂದು ಮಾತ್ರ ನಡೆಯುತ್ತಿದೆ. ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಫೋನ್ ಬೆಲೆ ರೂ 17,999 ಆಗಿದೆ. ಶ್ಯೋಮಿ ಎಮ್ಐ 4, 64 ಜಿಬಿ ಆವೃತ್ತಿಯನ್ನು 23,999 ಕ್ಕೆ ಲಾಂಚ್ ಮಾಡಿತ್ತು. ನಂತರ ಬೆಲೆಯನ್ನು 21,999 ಮತ್ತು 19,999 ಕ್ಕೆ ಇಳಿಸಿತ್ತು.

ಓದಿರಿ: ಆನ್‌ಲೈನ್‌ನಲ್ಲಿ ಗೋಲ್ಮಾಲ್ ಐಫೋನ್ ಬದಲಿಗೆ ಪ್ರೆಶ್ಶರ್ ಕುಕ್ಕರ್

ಹೆಚ್ಚುವರಿಯಾಗಿ ಫ್ಲಿಪ್‌ಕಾರ್ಟ್ ಫೋನ್ ಮೇಲೆ ವಿನಿಮಯ ಕೊಡುಗೆಯನ್ನು ಚಾಲನೆ ಮಾಡುತ್ತಿದ್ದು, ಎಮ್ಐ 4 64 ಜಿಬಿ ಆವೃತ್ತಿಯನ್ನು ರೂ 12,999 ಕ್ಕೆ ಮಾರಾಟ ಮಾಡುತ್ತಿದೆ. ಈ ಆಫರ್ ಅಡಿಯಲ್ಲಿ ವಿನಾಯಿತಿ ದರ ಎಮ್ಐ 4 ವಿರುದ್ಧ ನೀಡಿರುವ ಸ್ಮಾರ್ಟ್‌ಫೋನ್ ಆಧರಿಸಿದೆ.

ಓದಿರಿ: ಮೈಕ್ರೋಸಾಫ್ಟ್ ಕೋರ್ಟಾನಾ: ತಿಳಿದುಕೊಳ್ಳಬೇಕಾದ ಅಂಶಗಳೇನು?

ಎಮ್ಐ 4, 5 ಇಂಚಿನ ಪೂರ್ಣ ಎಚ್‌ಡಿ 1080 ಪಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು, 2.5GHz ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. 3 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಇದರಲ್ಲಿದೆ. 8 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ಇತರ ವೈಶಿಷ್ಟ್ಯತೆಗಳಾದ ವೈಫೈ, ಬ್ಲ್ಯೂಟೂತ್ ಮತ್ತು 3,080mAh ಬ್ಯಾಟರಿ ಇದರಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯನ್ನು ಡಿವೈಸ್ ಪಡೆದುಕೊಂಡಿದ್ದು ಶ್ಯೋಮಿ MIUI 6.0 ಇದರಲ್ಲಿದೆ.

English summary
India with much gusto and is offering great deals on its products. The company first announced a significant price cut to the Mi 4, then recently launched the Mi 4i 32GB variant at an attractive price point, and unveiled its headphones, and the Mi Store app as well.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot