ಖರೀದಿಸಿ ರೆಡ್ಮೀ 2 ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 5,999 ಕ್ಕೆ
ಚೀನಾದ ಟೆಕ್ ಕಂಪೆನಿ ಶ್ಯೋಮಿ, ಬಜೆಟ್ ಫೋನ್ ರೆಡ್ಮೀ 2 ಬೆಲೆಯನ್ನು ರೂ 1,000 ಕ್ಕೆ ಇಳಿಸಿದೆ. ಫೋನ್ ಇದೀಗ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಸ್ನ್ಯಾಪ್‌ಡೀಲ್‌ನಲ್ಲಿ ರೂ 5,999 ಕ್ಕೆ ಲಭ್ಯವಾಗುತ್ತಿದೆ.
ಓದಿರಿ: ಐದರ ಹರೆಯದ ಶ್ಯೋಮಿ ಮಾಡಿದ್ದಾದರೂ ಏನು?

ಫೋನ್‌ನ ವಿಶೇಷತೆಗಳನ್ನು ಗಮನಿಸಿದಾಗ ಇದು 4.7 ಇಂಚಿನ 720 ಪಿಕ್ಸೆಲ್ ಎಚ್‌ಡಿ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಉಳ್ಳ ಎಜಿಸಿ ಡ್ರಾಗನ್‌ಟ್ರೇಲ್ ಗ್ಲಾಸ್‌ನೊಂದಿಗೆ ಬಂದಿದೆ. ರೆಡ್ಮೀ 2 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410, 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ 1ಜಿಬಿ RAM ನೊಂದಿಗೆ ಬಂದಿದೆ. ಇನ್ನು ಫೋನ್‌ನ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು 5.75 ಜಿಬಿ ಬಳಕೆದಾರರಿಗೆ ಲಭ್ಯವಾಗಲಿದೆ.
ಓದಿರಿ: ಆಪಲ್ ಅನ್ನು ಹಿಂದಿಕ್ಕಿ ಟೆಕ್ ಪುಟದಲ್ಲಿ ಇತಿಹಾಸ ಬರೆದ ಶ್ಯೋಮಿ

ಇನ್ನು ಫೋನ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದ್ದು ಮುಂಭಾಗದಲ್ಲಿ 2ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಶ್ಯೋಮಿ ರೆಡ್ಮೀ 2 ಬ್ಯಾಟರಿ 2,200 mAh ಆಗಿದೆ.


Click it and Unblock the Notifications








