ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮುರಿದುಕೊಂಡ ಶ್ಯೋಮಿ

By Shwetha
|

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶ್ಯೋಮಿ ಭಾರತದಲ್ಲಿ ಹೊಸ ಇ ಕಾಮರ್ಸ್ ಪಾಲುದಾರನಿಗಾಗಿ ಎದುರು ನೋಡುತ್ತಿದ್ದು, ಫ್ಲಿಪ್‌ಕಾರ್ಟ್ ಅನ್ನು ಸ್ಥಾನಾಂತರಿಸಿ ಅದರ ಜಾಗಕ್ಕೆ ಬೇರೊಂದು ಆನ್‌ಲೈನ್ ಪಾಲುದಾರರನ್ನು ಕರೆತರುವ ಉದ್ದೇಶದಲ್ಲಿದೆ.

ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮುರಿದುಕೊಂಡ ಶ್ಯೋಮಿ

ಇನ್ನು ಸುದ್ದಿಗಳ ಪ್ರಕಾರ ಕಂಪೆನಿ ಈ ಕುರಿತಾಗಿ ಸ್ನ್ಯಾಪ್‌ಡೀಲ್ ಜೊತೆಗೆ ಮಾತುಕತೆ ನಡೆಸಿದ್ದು ತನ್ನ ವಿಶೇಷ ಅಂತರ್ಜಾಲ ಪಾಲುದಾರನಾಗಿ ಈ ಸೈಟ್ ಅನ್ನು ನೇಮಿಸುವ ನಿರ್ಧಾರದಲ್ಲಿದೆ.

ಇದನ್ನೂ ಓದಿ: ಇಂಟರ್ನೆಟ್ ಸೌಲಭ್ಯವಿಲ್ಲದೆ ಅಪಾಯದಿಂದ ಪಾರಾಗುವುದು ಹೇಗೆ?

ತನ್ನ ಉತ್ಪನ್ನಗಳು ಇತ್ತೀಚಿನ ದಿನಗಳಲ್ಲಿ ಪಾತಾಳ ಕಾಣುತ್ತಿರುವುದು ಅಲ್ಲದೆ ಫ್ಲಿಪ್‌ಕಾರ್ಟ್ ಈ ವಿಷಯದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದೇ ಇರುವುದು ಶ್ಯೋಮಿಗೆ ಇರಿಸು ಮುರಿಸನ್ನು ಉಂಟು ಮಾಡುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮುರಿದುಕೊಂಡ ಶ್ಯೋಮಿ

ಇದನ್ನೂ ಓದಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

ತಮ್ಮ ಎಮ್ಐ 3 ಸ್ಮಾರ್ಟ್‌ಫೋನ್ ಮೂಲಕ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿರುವ ಶ್ಯೋಮಿ ರೆಡ್ಮೀ 1 ಎಸ್, ರೆಡ್ಮೀ ನೋಟ್ 4ಜಿ, ಎಮ್ಐ 4, ಮತ್ತು ರೆಡ್ಮೀ 2 ಸ್ಮಾರ್ಟ್‌ಫೋನ್‌ಗಳ ಮೂಲಕ ಹೊಸ ಇತಿಹಾಸವನ್ನೇ ಬರೆಯಿತು.

ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದ ಮುರಿದುಕೊಂಡ ಶ್ಯೋಮಿ

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ದೊಡ್ಡ ಆಟಗಾರನೆಂದೇ ಖ್ಯಾತಿವೆತ್ತಿರುವ ಶ್ಯೋಮಿ, ಫ್ಲಿಪ್‌ಕಾರ್ಟ್ ಜೊತೆಗೂಡಿ ಇನ್ನಷ್ಟು ಜಾದೂ ಮಾಡುವ ಸನ್ನಾಹದಲ್ಲಿತ್ತು.

Best Mobiles in India

English summary
It looks like Chinese smartphone maker Xiaomi may be on the lookout for a new e-commerce partner in India, replacing Flipkart as its exclusive retailer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X