Just In
Don't Miss
- Movies
ಹಾಲಿವುಡ್ ಚಿತ್ರದಲ್ಲಿ ಮಿಂಚುತ್ತಿರುವ ಮಲೆನಾಡ ಪ್ರತಿಭೆ
- News
ಹೊಸ ವರ್ಷಕ್ಕೆ ಈ ಬಾರಿ ಚಿತ್ರದುರ್ಗದಲ್ಲಿ ಸೊಪ್ಪಿನ ಕಡಲೆ ಸಿಗೋದು ಡೌಟು
- Sports
ಪಂತ್ ಮತ್ತೆ ವಿಫಲ ಸ್ಥಾನ, ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ
- Lifestyle
ಬಿಳಿ ಕಾಳುಮೆಣಸಿನಲ್ಲಿರುವ ಆರೋಗ್ಯಕರ ಗುಣಗಳಿವು
- Education
Bank Of Maharashtra Recruitment 2019: 300 ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಶಿಯೋಮಿಯಿಂದ ಹೊಸ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಅನಾವರಣ!
ಚೀನಾದ ಮೂಲಕದ ಶಿಯೋಮಿ ಕಂಪನಿಯು ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ವಲಯಗಳಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯಿಸಿ ಗ್ರಾಹಕರ ಸ್ನೇಹಿ ಆಗಿ ಗುರುತಿಸಿಕೊಂಡಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಹೈ ಎಂಡ್ ಕ್ಯಾಮೆರಾ ಮತ್ತು ಬಿಗ್ ಬ್ಯಾಟರಿ ಲೈಫ್ ಫೀಚರ್‌ಗಳ ಮೂಲಕ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮುಂದುವರಿದಿರುವ ಕಂಪನಿಯು ಇದೀಗ ಪವರ್‌ಫುಲ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿದೆ.

ಹೌದು, ಶಿಯೋಮಿ ಕಂಪನಿಯು ಇದೀಗ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದ್ದು, ಅದಕ್ಕಾಗಿ 'ಮಿ ಚಾರ್ಜ್ ಟರ್ಬೋ' ಚಾರ್ಜಿಂಗ್ ತಂತ್ರಜ್ಞಾನವನ್ನು ಘೋಷಿಸಿದೆ. ಈ ತಂತ್ರಜ್ಞಾನವು 30W ಸಾಮರ್ಥ್ಯದ ಶಕ್ತಿಯನ್ನು ಒಳಗೊಂಡಿದ್ದು, 4,000mAh ಸಾಮರ್ಥ್ಯದ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಕೇವಲ 25 ನಿಮಿಷದಲ್ಲಿ ಶೇ.50% ನಷ್ಟು ಬ್ಯಾಟರಿ ಬಲ ತುಂಬಲಿದೆ.
ಓದಿರಿ : ಜಿಯೋ ಫೈಬರ್ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!

ಶಿಯೋಮಿಯ 'ಮಿ ಚಾರ್ಜ್ ಟರ್ಬೋ' ತಂತ್ರಜ್ಞಾನವು 4,000mAh ಬ್ಯಾಟರಿ ಬಲದ ಸ್ಮಾರ್ಟ್‌ಫೋನ್ ಅನ್ನು ಪೂರ್ಣ ಭರ್ತಿ ಮಾಡಲು 70ನಿಮಿಷ ಕಾಲಾವಧಿಯನ್ನು ತೆಗೆದುಕೊಳ್ಳಲಿದೆ. ಹಾಗೆಯೇ ಶಿಯೋಮಿಯು ವಾಯರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಪರಿಚಯಿಸುವ ತಯಾರಿಯಲ್ಲಿದ್ದು, ಇದು ಸಹ 'ಮಿ ಚಾರ್ಜ್ ಟರ್ಬೋ' ತಂತ್ರಜ್ಞಾನವನ್ನು ಒಳಗೊಂಡಿರಲಿದೆ. ಬಹುತೇಕ ಫೋರ್ಟೆಬಲ್ ಚಾರ್ಜಿಂಗ್ 20W ಸಾಮರ್ಥ್ಯವನ್ನು ಹೊಂದಿರುತ್ತವೆ.

ಈ ಹೊಸ ತಂತ್ರಜ್ಞಾನದಲ್ಲಿ 5 ಲೆಯರ್ ಒಳಗೊಂಡ ನ್ಯಾನೋ ಕ್ರಿಸ್ಟಲ್ ರಿಸಿವರ್ ಕಾಯಿಲ್ ಅನ್ನು ಬಳಸಲಾಗಿದ್ದು, ಚಾರ್ಜಿಂಗ್ ಎಫಿಶಿಯನ್ಸಿಯು ಶೇ.98% ಆಗಿದೆ. ಕಂಪನಿಯು ಮುಂಬರುವ ಶಿಯೋಮಿ 9 ಪ್ರೊ 5G ಸ್ಮಾರ್ಟ್‌ಫೋನ್‌ನಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ನೀಡಲಾಗುತ್ತದೆ. ಹೊಸ ತಂತ್ರಜ್ಞಾನ ಫಾಸ್ಟ್ ಚಾರ್ಜರ್‌ನಲ್ಲಿಯೇ ಲಭ್ಯವಾಗುತ್ತಾ ಅಥವಾ ಪ್ರತ್ಯೇಕವಾಗಿ ಖರೀದಿಸಬೇಕಾ ಎನ್ನುವುದು ಸ್ಪಷ್ಟವಿಲ್ಲ.

ಕಂಪನಿಯು ಈಗಾಗಲೇ 40W ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನದ ಕೆಲಸವು ಪ್ರೊಗ್ರೆಸ್ ಹಂತದಲ್ಲಿದೆ. ಹಾಗೆಯೇ ಈ ಹಿಂದೆ ಕಂಪನಿಯು 100w ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಪರಿಚಯಿಸುವುದಾಗಿ ತಿಳಿಸಿತ್ತು. ಆದರೆ ಅದಕ್ಕೂ ಮೊದಲೇ ಮಿ ಚಾರ್ಜ್ ಟರ್ಬೋ ತಂತ್ರಜ್ಞಾನ ಅನಾವರಣವಾಗಲಿದೆ. ಮುಂಬರುವ ಸ್ಮಾರ್ಟ್‌ಫೋನ್‌ಗಳ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಮತ್ತಷ್ಟು ಶಕ್ತಿಯುತವಾಗಲಿದೆ.
ಓದಿರಿ : ಫೋನಿನಲ್ಲಿ ನೆಟ್ ಇಲ್ಲದಿದ್ದರೂ, ನೆಟ್ಟಗೆ ದಾರಿ ತೋರಿಸೊ ಆಪ್ಸ್!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090