ನಿಮ್ಮ ಸ್ಮಾರ್ಟ್‌ಪೋನ್ ಪಿನ್ ಮತ್ತು ಪ್ಯಾಟ್ರನ್ ಅನ್ನು ಸುಲಭವಾಗಿ ಕದಿಯಬಹುದು.!! ಹೇಗೆ ಗೊತ್ತಾ..?

ಪಿನ್ ಕೋಡ್‌ಗಳು ಇಲ್ಲವೇ ಪ್ಯಾಟ್ರನ್‌ಗಳನ್ನು ನಮ್ಮ ಸ್ಮಾರ್ಟ್‌ ಸ್ಮಾರ್ಟ್‌ಪೋನುಗಳ ಸ್ಕ್ರಿನ್ ಲಾಕ್ ಆಗಿ ಬಳಸಿಕೊಳ್ಳುತ್ತೇವೆ.

|

ಇಂದಿನ ದಿನದಲ್ಲಿ ಸ್ಮಾರ್ಟ್‌ಪೋನುಗಳು ತೀರಾ ಅವಶ್ಯವೆನ್ನಿಸುವ ವಸ್ತುಗಳ ಸಾಲಿಗೆ ಸೇರಿಕೊಂಡಿದ್ದು, ಈ ಹಿನ್ನಲೆಯಲ್ಲಿ ಅವುಗಳನ್ನು ಭದ್ರಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವು ಪಿನ್ ಕೋಡ್‌ಗಳು ಇಲ್ಲವೇ ಪ್ಯಾಟ್ರನ್‌ಗಳನ್ನು ನಮ್ಮ ಸ್ಮಾರ್ಟ್‌ ಸ್ಮಾರ್ಟ್‌ಪೋನುಗಳ ಸ್ಕ್ರಿನ್ ಲಾಕ್ ಆಗಿ ಬಳಸಿಕೊಳ್ಳುತ್ತೇವೆ. ಆದರೆ ಇದನ್ನು ಸುಲಭವಾಗಿ ಕದಿಯಬಹುದಂತೆ.

ನಿಮ್ಮ ಸ್ಮಾರ್ಟ್‌ಪೋನ್ ಪಿನ್ ಮತ್ತು ಪ್ಯಾಟ್ರನ್ ಅನ್ನು ಸುಲಭವಾಗಿ ಕದಿಯಬಹುದು.!!

ಓದಿರಿ: ಮಾರ್ಚ್ 15 ರಿಂದ ಮೊಟೊ G5 ಪ್ಲಸ್ ಮಾರಾಟ ಆರಂಭ..!!

ಅಮೇರಿಕಾದ ಸಂಶೋಧಕರು ಈ ಬಗ್ಗೆ ಬೆಳಕು ಚೆಲ್ಲಿದ್ದು, ಸ್ಕ್ರಿನ್ ಲಾಕ್ ಒಪನ್ ಮಾಡಿದ ನಂತರ ಇಲ್ಲಿ ಉಳಿಯುವ ನಮ್ಮ ಕೈಬೆರಳಿನ ಶಾಖದಿಂದ ಪಿನ್‌ಗಳನ್ನು ಕದಿಯಬಹುದಂತೆ. ಥರ್ಮಲ್ ಕ್ಯಾಮೆರಾ ಮೂಲಕ ನಾವು ನೀಡಿರುವ ಪಿನ್ ಇಲ್ಲವೇ ಪ್ಯಾಟ್ರನ್ ಅನ್ನು ನೋಡಬಹುದಾಗಿದೆ. ಆ ಮೂಲಕ ಪಿನ್ ಕದಿಯಬಹುದೆಂದು ಮಾಹಿತಿ ನೀಡಿದ್ದಾರೆ.

ಅತ್ಯಂತ ಸೆಕ್ಯೂರಿಟಿಯನ್ನು ಹೊಂದಿರುವ ಪಾಸ್‌ವರ್ಡ್‌ಗಳಲ್ಲಿ ಪಿನ್ ಮತ್ತು ಪ್ಯಾಟ್ರನ್‌ಗಳು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಆದರೆ ಇವುಗಳನ್ನು ಥರ್ಮಲ್ ಕ್ಯಾಮೆರಾ ಮೂಲಕ ನೋಡಬಹುದಾಗಿದೆ. ಇದು ಹೊಸ ಮಾದರಿಯ ಭದ್ರತ ತೊಡಕಾಗಲಿದೆ ಎನ್ನಲಾಗಿದೆ.

ನಿಮ್ಮ ಸ್ಮಾರ್ಟ್‌ಪೋನ್ ಪಿನ್ ಮತ್ತು ಪ್ಯಾಟ್ರನ್ ಅನ್ನು ಸುಲಭವಾಗಿ ಕದಿಯಬಹುದು.!!

ಓದಿರಿ: ನೋಕಿಯಾ 3310 ಪೋನಿನ ಬೆಲೆ 1 ಲಕ್ಷ ಅಂತೆ..!! ಅಂತದೇನಿದೆ ಇದರಲ್ಲಿ..??

ಈ ಸಂಶೋಧನೆ ತಿಳಿಸಿರುವಂತೆ ಸ್ಕ್ರಿನ್ ಪಿನ್ ಮತ್ತು ಪ್ಯಾಟ್ರನ್ ಲಾಕ್‌ಗಳನ್ನು ತೆಗೆಯಲು ಥರ್ಮಲ್ ಕ್ಯಾಮೆರಾ ಗೂ ಸಿಗದಂತೆ ಮಾಡಲು ಹೊಸ ಮಾದರಿಯ ಸ್ಕ್ರಿನ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Best Mobiles in India

Read more about:
English summary
The heat traces left on the smartphone screen after typing the PIN or swiping a pattern could give away your secret code, warn researchers. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X