ಹಿಂದಿ ಬೇಡ ನಂತರ ಕನ್ನಡಿಗರಿಂದ ಮತ್ತೊಂದು ಟ್ವಿಟರ್ ಅಭಿಯಾನ

Written By:

ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಕನ್ನಡಿಗರು ನಡೆಸಿದ #HindiBeda ಅಭಿಯಾನದ ನಂತರ ಮತ್ತೊಂದು ಸುತ್ತಿನಲ್ಲಿ ಹಿಂದಿ ಹಾಗೂ ಇಂಗ್ಲೀಷ್ ಹೇರಿಕೆಯನ್ನು ವಿರೋಧಿಸಲು ಸಜ್ಜಾಗಿದ್ದಾರೆ.

ಹಿಂದಿ ಬೇಡ ನಂತರ ಕನ್ನಡಿಗರಿಂದ ಮತ್ತೊಂದು ಟ್ವಿಟರ್ ಅಭಿಯಾನ

ಓದಿರಿ: ಫ್ಲಿಪ್ ಕಾರ್ಟಿನಲ್ಲಿ ಭರ್ಜರಿ ಟಿವಿ ಸೇಲ್: ಶೇ.50% ಹಿಡಿದು 25,000ದ ವರೆಗೆ ಕಡಿತ...!!

ರಾಜ್ಯದ ಗ್ರಾಹಕರಿಗೆ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆಗಳು ಸಿಗದೇ ಆಗುತ್ತಿರುವ ತೊಂದರೆ ಬಗ್ಗೆ ಗಮನ ಸೆಳೆಯುವ ಸಲುವಾಗಿ 'ಕನ್ನಡ ಗ್ರಾಹಕರ ಕೂಟ' ಕನ್ನಡ ಬೇಕು ಎಂಬ ಅಭಿಯಾನವನ್ನು ನಡೆಸಲು ಮಂದಾಗಿದೆ.NammaBankuKannadaBeku ಅಭಿಯಾನ ಆರಂಭವಾಗಿದೆ. 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ಲಭಿಸುತ್ತಿಲ್ಲ

ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ಲಭಿಸುತ್ತಿಲ್ಲ

ಎಲ್ಲ ಬ್ಯಾಂಕುಗಳು ಕಡ್ಡಾಯವಾಗಿ ಆಯಾ ರಾಜ್ಯದ ಭಾಷೆಯಲ್ಲಿ ಸೇವೆ ಒದಗಿಸಬೇಕು ಎಂಬ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಯಮ ಜಾರಿಯಲ್ಲಿದ್ದರೂ ರಾಜ್ಯದ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ಲಭಿಸುತ್ತಿಲ್ಲ.

‘NammaBankuKannadaBeku'

‘NammaBankuKannadaBeku'

ಈ ಹಿನ್ನಲೆಯಲ್ಲಿ ಗ್ರಾಹಕರು ‘NammaBankuKannadaBeku' ಮತ್ತು "BankInMyLanguage" ಹ್ಯಾಷ್ ಟ್ಯಾಗ್ ಬಳಸಿಕೊಂಡು ಬ್ಯಾಂಕ್ ಗಳಲ್ಲಿ ಆದ ಅನುಭವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ಗಮನ ಸೆಳೆಯಲು ಟ್ವಿಟರ್:

ಗಮನ ಸೆಳೆಯಲು ಟ್ವಿಟರ್:

ಎಟಿಎಂ, ಕಿಯೊಸ್ಕ್, ಚಲನ್, ಚೆಕ್‌ಬುಕ್‌, ಅರ್ಜಿ ನಮೂನೆಗಳಲ್ಲಿ ಕನ್ನಡ ಇಲ್ಲದಿರುವ ಬಗ್ಗೆ ಗಮನ ಸೆಳೆಯಲು ಇದು ಸಹಾಯವಾಗಲಿದೆ ಎನ್ನಲಾಗಿದೆ. ಆರ್‌ಬಿಐ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನಹರಿಸಲು ಇದು ಸಹಾಯಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
With over 13000 tweets since last evening, Twitter is abuzz with the trending hashtag #Nammabankukannadabeku. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot