ಆಪಲ್‌ ಉತ್ಪನ್ನಗಳನ್ನು ಖರೀದಿಸಲು ಮತ್ತೆ ಇಂಥಾ ಅವಕಾಶ ಸಿಗಲ್ಲ!.ಆಪಲ್ ಫೆಸ್ಟ್ ಶುರು.!

|

ವಿಶ್ವದ ಜನಪ್ರಿಯ ಟೆಕ್ ಸಂಸ್ಥೆ ಆಪಲ್ ಉತ್ಪನ್ನಗಳನ್ನು ಹೊಂದಲು ಎಲ್ಲರೂ ಬಯಸುತ್ತಾರೆ ಅದರಲ್ಲೂ ಗ್ರಾಹಕರಿಗೆ ಐಫೋನ್ ಅಂದ್ರೆ ಫೇವರೆಟ್‌ ಆಗಿರುತ್ತದೆ. ಇದೀಗ ಆಪಲ್ ಕಂಪನಿಯ ಉತ್ಪನ್ನಗಳನ್ನು ಖರೀದಿಸಲು ಸರಿಯಾದ ಸಮಯ ಕೂಡಿ ಬಂದಿದ್ದು, ಪ್ರಮುಖ ಇ ಕಾಮರ್ಸ್‌ ಜಾಲತಾಣ ಅಮೆಜಾನ್ ಅದಕ್ಕೆ ವೇದಿಕೆ ಕಲ್ಪಿಸಿದೆ. ಅಮೆಜಾನ್ 'ಆಪಲ್‌ ಫೆಸ್ಟ್'‌ ಮೇಳವನ್ನು ಆಯೋಜಿಸಿದ್ದು, ಭಾರೀ ಡಿಸ್ಕೌಂಟ್‌ ನೀಡುತ್ತಿದೆ.

ಆಪಲ್‌ ಉತ್ಪನ್ನಗಳನ್ನು ಖರೀದಿಸಲು ಮತ್ತೆ ಇಂಥಾ ಅವಕಾಶ ಸಿಗಲ್ಲ!.ಆಪಲ್ ಫೆಸ್ಟ್.!

ಹೌದು, ಅಮೆಜಾನ್ ಆಪಲ್‌ ಫೆಸ್ಟ್‌ ಹೆಸರಿನಡಿ ಆಪಲ್ ಕಂಪನಿಯ ಉತ್ಪನ್ನಗಳ ಮೇಲೆ ರಿಯಾಯಿತಿಯ ಮಾರಟವನ್ನು ಆರಂಭಿಸಿದ್ದು, ಇದೇ ಮಾರ್ಚ್ 22ರಿಂದ ಆರಂಭವಾಗಿರುವ ಆಪಲ್‌ ಫೆಸ್ಟ್‌ ಮೇಳವು ಇದೇ ಮಾರ್ಚ್‌ 28ರ ವರೆಗೂ ಇರಲಿದೆ. ಐಫೋನ್‌ನಿಂದ ಹಿಡಿದು ಐಫೋಡ್‌ವರೆಗೂ ಆಪಲ್‌ನ ಎಲ್ಲ ಉತ್ಪನ್ನಗಳ ಮೇಲು ಭರ್ಜರಿ ಡಿಸ್ಕೌಂಟ್ ಕೊಡುಗೆಗಳು ದೊರೆಯಲಿದ್ದು, ಆಪಲ್‌ ಫೆಸ್ಟ್‌ ಗ್ರಾಹಕರನ್ನು ಸೆಳೆಯುತ್ತಿದೆ.

ಆಪಲ್‌ ಉತ್ಪನ್ನಗಳನ್ನು ಖರೀದಿಸಲು ಮತ್ತೆ ಇಂಥಾ ಅವಕಾಶ ಸಿಗಲ್ಲ!.ಆಪಲ್ ಫೆಸ್ಟ್.!

ಐಫೋನ್‌ ಎಕ್ಸ್, ಐಫೋನ್‌ 6ಎಸ್‌, ಐಫೋನ್ ಎಕ್ಸ್‌ಆರ್‌, ಸೇರಿದಂತೆ ನೂತನ ಐಫೋಡ್‌ಗಳ ಮೇಲೆ ಭಾರಿ ಕ್ಯಾಶ್‌ ಡಿಸ್ಕೌಂಟ್‌ ನೀಡಲಾಗುತ್ತಿದೆ. ಇದರೊಂದಿಗೆ ಬ್ಯಾಂಕ್ ಆಫರ್‌ಗಳು ಸಹ ಗ್ರಾಹಕರಿಗೆ ಲಭ್ಯವಾಗಲಿದ್ದು, ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಸಹ ಇರಲಿವೆ. ಹಾಗಾದರೇ ಅಮೆಜಾನ್‌ 'ಆಪಲ್‌ ಫೆಸ್ಟ್‌'ನಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಬ್ಯಾಂಕ್‌ ಆಫರ್‌

ಬ್ಯಾಂಕ್‌ ಆಫರ್‌

ಅಮೆಜಾನ್ ಆಪಲ್‌ ಫೆಸ್ಟ್‌ನಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದ್ದು, ಬ್ಯಾಂಕಿನ್ ಡೇಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಸಿ ಖರೀದಿಸುವ ಗ್ರಾಹಕರಿಗೆ ಶೇ.5 ಡಿಸ್ಕೌಂಟ್‌ ನೀಡುತ್ತಿದೆ. ಇದರೊಂದಿಗೆ ಇಎಮ್‌ಐ ಸೌಲಭ್ಯವನ್ನು ದೊರಕಿಸಿದೆ.

ಐಫೋನ್ 6ಎಸ್‌

ಐಫೋನ್ 6ಎಸ್‌

ಆಪಲ್‌ ಐಫೋನ್ 6ಎಸ್‌ ಬೆಲೆಯು 29,900ರೂ.ಗಳು ಇದ್ದು, ಆಪಲ್‌ ಫೆಸ್ಟ್‌ ಆಫರ್‌ ಮೇಳದಲ್ಲಿ 27,999ರೂ.ಗಳಿಗೆ ದೊರೆಯಲಿದೆ. ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಬ್ಯಾಂಕ್‌ಗಳ ಡೇಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಸಿ ಖರೀದಿಸಿದರೇ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವು ಲಭ್ಯವಿದ್ದು, ಪ್ರತಿ ತಿಂಗಳ ಇಎಮ್‌ಐ 4,666ರೂ.ಗಳು ಇರಲಿವೆ ಎನ್ನಲಾಗಿದೆ.

ಐಫೋನ್ X (64 GB)

ಐಫೋನ್ X (64 GB)

ಆಪಲ್ ಐಫೋನ್ X (64 GB) ಬೆಲೆಯು 91,900ರೂ.ಗಳು ಆಗಿದ್ದು, ಮೇಳದ ಆಫರ್‌ನಲ್ಲಿ 24,990 ರೂ.ಗಳಗೆ ದೊರೆಯಲಿದೆ. ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಬ್ಯಾಂಕ್‌ಗಳ ಡೇಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಸಿ ಖರೀದಿಸಿದರೇ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವು ಲಭ್ಯವಿದ್ದು, ಪ್ರತಿ ತಿಂಗಳ 8,222ರೂ.ಗಳ ಇಎಮ್‌ಐ ಇರಲಿವೆ ಎನ್ನಲಾಗಿದೆ.

ಆಪಲ್‌ ಐಫೋಡ್ (6th Gen)

ಆಪಲ್‌ ಐಫೋಡ್ (6th Gen)

ಆಪಲ್‌ ಐಫೋಡ್ (6th Gen) ಬೆಲೆಯು 28,000ರೂ.ಗಳು ಆಗಿದ್ದು, ಆಪಲ್‌ ಮೇಳದ ಆಫರ್‌ನಲ್ಲಿ 73,999ರೂ.ಗಳಗೆ ದೊರೆಯಲಿದೆ. ಪ್ರಮುಖ ಬ್ಯಾಂಕ್‌ಗಳು ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ನೀಡಿದ್ದು, ಜೊತೆಗೆ ಬಜಾಜ್ ಫಿನ್‌ಕಾರ್ಪ್ ಸಹ ಇಎಮ್‌ಐ ಆಯ್ಕೆ ನೀಡಿದೆ.

ಆಪಲ್‌ ವಾಚ್‌ ಸಿರೀಸ್ 3

ಆಪಲ್‌ ವಾಚ್‌ ಸಿರೀಸ್ 3

ಆಪಲ್ ವಾಚ್ ಸಿರೀಸ್ 3 ಆಪಲ್‌ ಫೆಸ್ಟ್‌ ಮೇಳದಲ್ಲಿ 23,990ರೂ.ಗಳ ಬೆಲೆಯಲ್ಲಿ ದೊರೆಯಲಿದ್ದು, ಆ ವಾಚ್‌ನ ಎಮ್‌ಆರ್‌ಪಿ ಬೆಲೆಯು 28,900ರೂ.ಗಳ ಆಗಿದೆ. ಇದರೊಂದಿಗೆ ಪ್ರಮುಖ ಬ್ಯಾಂಕ್‌ಗಳು ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ನೀಡಿದ್ದು, ಜೊತೆಗೆ ಬಜಾಜ್ ಫಿನ್‌ಕಾರ್ಪ್ ಸಹ ಇಎಮ್‌ಐ ಆಯ್ಕೆ ನೀಡಿದೆ.

ಆಪಲ್ ಮ್ಯಾಕ್‌ಬುಕ್ ಪ್ರೋ

ಆಪಲ್ ಮ್ಯಾಕ್‌ಬುಕ್ ಪ್ರೋ

13 ಇಂಚಿನ ರೇಟಿನಾ ಡಿಸ್‌ಪ್ಲೇಯನ್ನು ಹೊಂದಿರುವ, 8GB RAM ಮತ್ತು 128GB ಆಂತರಿಕ ಸಾಮರ್ಥ್ಯದ ಆಪಲ್ ಮ್ಯಾಕ್‌ಬುಕ್ ಪ್ರೋ ಎಮ್‌ಆರ್‌ಪಿ ದರವು 1,19,900 ಆಗಿದ್ದು, ಆಪಲ್‌ ಫೆಸ್ಟ್‌ ಮೇಳದಲ್ಲಿ 1,04,900ರೂ.ಗಳಿಗೆ ದೊರೆಯಲಿದೆ. ಇದರೊಟ್ಟಿಗೆ ಪ್ರಮುಖ ಬ್ಯಾಂಕ್‌ಗಳು ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ನೀಡಿದ್ದು, ಜೊತೆಗೆ ಬಜಾಜ್ ಫಿನ್‌ಕಾರ್ಪ್ ಸಹ ಇಎಮ್‌ಐ ಆಯ್ಕೆ ನೀಡಿದೆ.

ಆಪಲ್  ಬಿಟ್ಸ್‌ ಸೊಲೊ 3

ಆಪಲ್ ಬಿಟ್ಸ್‌ ಸೊಲೊ 3

ಆಪಲ್ ಬಿಟ್ಸ್‌ ಸೊಲೊ 3 ಹೆಸರಿನ ಹೆಡ್‌ಫೋನ್ ಎಮ್‌ಆರ್‌ಪಿ ದರವು 23,800ರೂ.ಗಳ ಆಗಿದ್ದು, ರಿಯಾಯಿತಿ ಕೊಡುಗೆಯಲ್ಲಿ 18,499ರೂ.ಗಳಿಗೆ ದೊರೆಯಲಿದೆ. ಪ್ರಮುಖ ಬ್ಯಾಂಕ್‌ಗಳು ನೋ ಕಾಸ್ಟ್‌ ಇಎಮ್‌ಐ ಸೌಲಭ್ಯವನ್ನು ನೀಡಿದ್ದು, ಜೊತೆಗೆ ಬಜಾಜ್ ಫಿನ್‌ಕಾರ್ಪ್ ಸಹ ಇಎಮ್‌ಐ ಆಯ್ಕೆ ನೀಡಿದೆ.

Best Mobiles in India

English summary
Amazon Apple Fest is offering huge online discounts on iPhone X, iPhone 6S, iPads, and more along with no cost EMIs on a host of Apple products. Here are the best deals from Amazon Apple Fest.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X