Home
Social media

ಅಮೆಜಾನ್ 'ಗ್ರೇಟ್‌ ಇಂಡಿಯನ್ ಸೇಲ್' ಮೇಳಕ್ಕೆ ಕ್ಷಣಗಣನೆ!

ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್‌ಗಳನ್ನು ನೀಡುತ್ತಾ ಬಂದಿದ್ದು, ಇದೀಗ ಅಮೆಜಾನ್ ಆಯೋಜಿಸಿರುವ ಮೂರು ದಿನಗಳ 'ಗ್ರೇಟ್ ಇಂಡಿಯನ್ ಸೇಲ್' ಮೇಳದ ಸುದ್ದಿ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಈ ಮೇಳದಲ್ಲಿ ಗ್ಯಾಜೆಟ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿರುವುದು ಗ್ರಾಹಕರ ಕೂತುಹಲವನ್ನು ಹೆಚ್ಚಿಸುತ್ತಿದೆ.

ಅಮೆಜಾನ್ 'ಗ್ರೇಟ್‌ ಇಂಡಿಯನ್ ಸೇಲ್' ಮೇಳಕ್ಕೆ ಕ್ಷಣಗಣನೆ!

ನಾಳೆಯಿಂದ(ಜ,20) ಆರಂಭವಾಗುವ ಈ ವರ್ಷದ ಅಮೆಜಾನ್ ಗ್ರೇಟ್‌ ಇಂಡಿಯನ್ ಸೇಲ್ ಮೇಳದಲ್ಲಿ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಇನ್ನೂ ಅನೇಕ ಉತ್ಪನ್ನಗಳಿಗೆ ಭಾರಿ ಅತ್ಯುತ್ತಮ ಕೊಡುಗೆಗಳನ್ನು ನೀಡಲಾಗುತ್ತಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವ ಪಡೆದವರಿಗೆ ಇಂದು(ಜ.19) ಮಧ್ಯಾಹ್ನ 12 ಗಂಟೆಯಿಂದಲೇ ಆನ್‌ಲೈನ್‌ ಮೇಳದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ.

ಅಮೆಜಾನ್ 'ಗ್ರೇಟ್‌ ಇಂಡಿಯನ್ ಸೇಲ್' ಮೇಳಕ್ಕೆ ಕ್ಷಣಗಣನೆ!

ಈಗಾಗಲೇ ಆನ್‌ಲೈನ್‌ ಶಾಪಿಂಗ್ ಪ್ರಿಯರು ಈ ಮೇಳದಲ್ಲಿ ಭಾಗವಹಿಸಲು ಕಾತರರಾಗಿದ್ದಾರೆ. ಹಾಗಾದರೇ ಅಮೆಜಾನಿನ ಗ್ರೇಟ್ ಇಂಡಿಯನ್ ಸೇಲ್ ಮೇಳದಲ್ಲಿ ಭರ್ಜರಿ ಡಿಸ್ಕೌಂಟ್ ಹೊಂದಿರಬಹುದಾದ ಉತ್ಪನ್ನಗಳು ಯಾವವು ಮತ್ತು ಪ್ರಮುಖ ಬ್ಯಾಂಕ್‌ಗಳ ಆಫರ್ ಏನೀರಲಿದೆ? ಈ ಕೆಳಗೆ ಕೆಲವು ಉತ್ತಮ ರಿಯಾಯಿತಿವುಳ್ಳ ಉತ್ಪನ್ನಗಳ ಮಾಹಿತಿ ನೀಡಲಾಗಿದ್ದು, ಅವುಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

TCL ಅಂಡ್ರಾಯ್ಡ್ ಟಿವಿ ಕೊಡುಗೆ

TCL ಅಂಡ್ರಾಯ್ಡ್ ಟಿವಿ ಕೊಡುಗೆ

ಅಮೆಜಾನ್ ಸೇಲ್ ಮೇಳದಲ್ಲಿ ಟಿಸಿಎಲ್ ಕಂಪನಿಯ 65 ಇಂಚಿನ 4K ಆಂಡ್ರಾಯ್ಡ್ ಟಿವಿಯು 78,990.00 ರೂಪಾಯಿಗಳಿಗೆ ದೊರೆಯಲಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಇಎಮ್ಐ ಸೌಲಭ್ಯ ಸಹ ನೀಡಲಾಗುತ್ತಿದ್ದು, ಅಮೆಜಾನ್ ಪ್ರೈಮ್ ಸದಸ್ಯರಿಗೆ ಟಿಸಿಎಲ್ ಆಂಡ್ರಾಯ್ಡ್ ಟಿವಿಯು 74,990ರೂ.ಗಳಿಗೆ ಲಭ್ಯವಾಗುವುದು ಎನ್ನಲಾಗುತ್ತಿದೆ. ಜತೆಗೆ 10000ರೂ.ವರೆಗೂ ಕ್ಯಾಶ್ ಬ್ಯಾಕ್ ನೀಡಲಾಗುವುದು ಎಂಬ ಮಾಹಿತಿ ಅಮೆಜಾನ್ ಜಾಹಿರಾತಿನಲ್ಲಿ ನೀಡಿದೆ.

ಸ್ಮಾರ್ಟ್‌ಫೋನ್‌ ಆಫರ್

ಸ್ಮಾರ್ಟ್‌ಫೋನ್‌ ಆಫರ್

ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ 8, ಒನ್‌ಪ್ಲಸ್ 6T, ರೆಡ್‌ ಮಿ Y2, ಹಾನರ್ ನೋವಾ 3i, ಸೇರಿದಂತೆ ಇನ್ನೂ ಹಲವು ಸ್ಮಾರ್ಟ್‌ಫೋನ್‌ಗಳಿಗೆ ನೋ ಕಾಸ್ಟ್ ಇಎಮ್ಐ, ಹಾಗೂ ಕ್ಯಾಶ್ ಬ್ಯಾಕ್‌ ನಂತಹ ಅತ್ಯುತ್ತಮ ಕೊಡುಗೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ವಿಶೇಷ ರಿಯಾಯಿತಿಯೊಂದಿಗೆ ಒಂದು ದಿನ ಮೊದಲೇ ಮೇಳದಲ್ಲಿ ಭಾಗವಹಿಸುವ ಅವಕಾಶ ವಿದೆ.

HDFC ಡಿಸ್ಕೌಂಟ್

HDFC ಡಿಸ್ಕೌಂಟ್

ಗ್ರೇಟ್ ಇಂಡಿಯನ್ ಸೇಲ್ ಮೇಳದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿಸುವ ಗ್ರಾಹಕರಿಗೆ ವಿಶೇಷ ಶೇ.10% ವರೆಗೂ ಇನ್‌ಸ್ಟಂಟ್ ರಿಯಾಯಿತಿಯ ಕೊಡುಗೆ ದೊರೆಯಲಿವೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ನೋ ಕಾಸ್ಟ್ ಇಎಮ್ಐ ಆಯ್ಕೆಯ ಸೌಲಭ್ಯ ಸಹ ನೀಡಲಾಗುತ್ತಿದೆ.

ವಾಟರ್ ಪ್ಯೂರಿಫೈಯರ್‌ಗಳ ಮೇಲೆ ಭಾರಿ ಕೊಡುಗೆ

ವಾಟರ್ ಪ್ಯೂರಿಫೈಯರ್‌ಗಳ ಮೇಲೆ ಭಾರಿ ಕೊಡುಗೆ

ಅಮೆಜಾನ್ ಸೇಲ್ ಮೇಳದಲ್ಲಿ ವಾಟರ್‌ ಪ್ಯೂರಿಫೈಯರ್‌ಗಳ ಮೇಲೆ ಶೇ. 40% ವರೆಗೂ ವಿಶೇಷ ರಿಯಾಯಿತಿಗಳು ಗ್ರಾಹಕರಿಗೆ ದೊರೆಯಲಿವೆ ಎನ್ನಲಾಗುತ್ತಿದೆ. ಕೆಂಟ್ ಕಂಪನಿಯ ವಾಟರ್ ಪ್ಯೂರಿಫೈಯರ್‌ ಸೇರಿದಂತೆ ಪ್ರಮುಖ ವಾಟರ್‌ ಪ್ಯೂರಿಫೈಯರ್‌ಗಳ ಮೇಲೆ ಕೊಡುಗೆಗಳು ಇರಲಿವೆ ಎಂದು ಹೇಳಲಾಗುತ್ತಿದೆ.

ಇತರೆ ಉತ್ಪನ್ನಗಳ ಆಫರ್

ಇತರೆ ಉತ್ಪನ್ನಗಳ ಆಫರ್

ಸ್ಯಾಮ್ಸ್ಂಗ್ ಗೇರ್ ಸ್ಮಾರ್ಟ್‌ವಾಚ್, ಪ್ರಮುಖ ಕಂಪನಿಯ ವಾಷಿಂಗ್ ಮಷಿನ್, ಫಿಲಿಪ್ಸ್ ಟ್ರಿಮ್ಮರ್ ಉತ್ಪನ್ನಗಳು ಒಳಗೊಂಡಂತೆ ಇನ್ನೂ ಅನೇಕ ಗ್ಯಾಜೆಟ್ ಉತ್ಪನ್ನಗಳ ಮೇಲೆ ಕ್ಯಾಶ್ ಡಿಸ್ಕೌಂಟ್, ನೋ ಕಾಸ್ಟ್‌ ಇಎಮ್ಐ, ಮತ್ತು ಕ್ಯಾಶ್ ಬ್ಯಾಕ್‌ ನಂತಹ ವಿಶೇಷ ಕೊಡುಗೆಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Amazon Prime members will get early access starting 12pm IST on Saturday, January 19. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+