ಐಫೋನ್ ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಆಪಲ್ ಸಂಸ್ಥೆ.!!

|

ಜನಪ್ರಿಯ ಐಫೋನ್ ತಯಾರಿಕಾ ಸಂಸ್ಥೆ ಆಪಲ್, ತನ್ನ ಗ್ರಾಹಕರಿಗೆ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವುದರ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಹಾಗೂ ವಿಶ್ವದಲ್ಲಿಯೇ ಗ್ರಾಹಕರ ನೆಚ್ಚಿನ ಮೊಬೈಲ್ ಕಂಪನಿಯು ಆಗಿರುವ ಆಪಲ್ ಇದೀಗ ತನ್ನ ಎಲ್ಲಾ ಐಪೊಡ್ ಮತ್ತು ಐಫೋನ್ ಬಳಕೆದಾರರಲ್ಲಿ ಕ್ಷಮೆಯಾಚಿಸಿದೆ.! ಹಾಗಾದರೇ ಯಾವ ಕಾರಣಕ್ಕೆ ಆಪಲ್ ಕ್ಷಮೆಯಾಚಿಸಿದೆ.

ಐಫೋನ್ ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಆಪಲ್ ಸಂಸ್ಥೆ.!!

ಹೌದು, ಆಪಲ್‌ ಸಂಸ್ಥೆಯ ಜನಪ್ರಿಯ 'ಗ್ರೂಪ್‌ ಫೇಸ್‌ಟೈಮ್ ಕರೆ'ಯ ಫೀಚರ್‌ನಲ್ಲಿ ಇತ್ತೀಚಿಗೆ ತಾಂತ್ರಿಕ ಮತ್ತು ಭದ್ರತೆಯ ದೊಡ್ಡ ದೋಷ ಕಾಣಿಸಿಕೊಂಡಿದ್ದು, ಬಳಕೆದಾರರ ಕರೆಗಳಲ್ಲಿ ಅಡಚಣೆ ಉಂಟಾಗಿತ್ತು. ಹೀಗಾಗಿ ಆಪಲ್ ಕಂಪನಿ ತನ್ನ ಬಳಕೆದಾರರಲ್ಲಿ ಕ್ಷಮೆಯಾಚಿಸಿದ್ದು, ಆದ‍ಷ್ಟು ಬೇಗ ಗ್ರೂಪ್‌ ಫೇಸ್‌ಟೈಮ್ ಕರೆ'ಯಲ್ಲಿ ಆಗಿರುವ ಭದ್ರತೆಯ ದೋಷವನ್ನು ಸರಿಪಡಿಸುವುದಾಗಿ ತಿಳಿಸಿದೆ.

ಐಫೋನ್ ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಆಪಲ್ ಸಂಸ್ಥೆ.!!

ಇನ್ನೂ ಆಪಲ್ ಗ್ರೂಪ್‌ ಫೇಸ್‌ಟೈಮ್ ಕರೆಯಲ್ಲಿ ದೋಷ ಕಾಣಿಸಿಕೊಂಡಿದ್ದನ್ನು ಮೊದಲು ಗಮನಿಸಿ ಆಪಲ್‌ ಸಂಸ್ಥೆಗೆ ಮಾಹಿತಿ ನೀಡಿದ 'ಥಾಂಪ್ಸನ್ ಕುಟುಂಬದ 14 ವರ್ಷದ ಬಾಲಕ'ನಿಗೆ ಆಪಲ್ ಸಂಸ್ಥೆ ಧನ್ಯವಾದಗಳನ್ನು ತಿಳಿಸಿದೆ. ಥಾಂಪ್ಸನ್ ಕುಟುಂಬವು ಆಪಲ್‌ನ ಫೇಸ್‌ಟೈಮ್ ಕರೆಯಲ್ಲಿದ್ದಾಗ, ತಾಂತ್ರಿಕ ಮತ್ತು ಭದ್ರತೆಯ ದೋಷ ಕಂಡುಬಂದಿದ್ದನ್ನು ಗಮನಿಸಿದ ಬಾಲಕ ಕೂಡಲೆ ಮಾಹಿತಿ ನೀಡಿದ್ದಾನೆ.

ಐಫೋನ್ ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಆಪಲ್ ಸಂಸ್ಥೆ.!!

ಫೇಸ್‌ಟೈಮ್ ಮೂಲಕ ಕರೆ ಮಾಡಿದಾಗ ಕಾಲ್ ಸ್ವೀಕರಿಸುವ ಮೊದಲೆ ಇನ್ನೊಬ್ಬರ ಸಂಭಾಷಣೆ ಕೇಳಿಸುತ್ತಿತ್ತು. ಈ ದೋಷವನ್ನು ನಮ್ಮ ಇಂಜನಿಯರಗಳ ತಂಡ ಆದಷ್ಟು ಬೇಗ ಸರಿಪಡಿಸುವುದಾಗಿ ಆಪಲ್ ಸಂಸ್ಥೆ ಭರವಸೆ ವ್ಯಕ್ತಪಡಿಸಿದ್ದು, ಅಲ್ಲಿಯವರೆಗೂ ಫೇಸ್‌ಟೈಮ್‌ ಕರೆ ಫೀಚರ್ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಪ್ರಸ್ತತ ಸಾಫ್ಟವೇರ್ ಅಪ್‌ಡೇಟ್‌ ಮಾಡಲಿದ್ದು, ಮುಂದಿನ ವಾರದಲ್ಲಿ ಫೇಸ್‌ಟೈಮ್‌ ಕರೆಯ ಫೀಚರ್ ಬಳಕೆಗೆ ಮುಕ್ತವಾಗಿರಲಿದೆ ಎಂದು ಆಪಲ್ ತಿಳಿಸಿದೆ.

Best Mobiles in India

English summary
Apple has officially apologised to all iPad and iPhone users over the massive security flaw that affected the Group FaceTime calls.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X