ಭಾರತೀಯ ರಾಜಕೀಯ ಪಕ್ಷಗಳಿಗೆ ಎಚ್ಚರಿಗೆ ಕೊಟ್ಟ 'ವಾಟ್ಸಪ್'.!!

|

ಜನಪ್ರಿಯ ಮೆಸೇಜಿಂಗ್ ಆಪ್‌ ವಾಟ್ಸಪ್ ಭಾರತೀಯ ರಾಜಕೀಯ ಪಕ್ಷಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ! ಹೌದು, ಪ್ರಸ್ತುತ ಭಾರತೀಯ ರಾಜಕೀಯ ಪಕ್ಷಗಳು ವಾಟ್ಸಪ್ ಮೆಸ್ಸೆಜಿನ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳ ವಾಟ್ಸಪ್ ಅಕೌಂಟ್‌ಗಳನ್ನು ಬ್ಯಾನ್ ಮಾಡಲಾಗುವುದು ಎಂದು ವಾಟ್ಸಪ್ ಎಚ್ಚರಿಸಿದೆ.

ಭಾರತೀಯ ರಾಜಕೀಯ ಪಕ್ಷಗಳಿಗೆ ಎಚ್ಚರಿಗೆ ಕೊಟ್ಟ 'ವಾಟ್ಸಪ್'.!!

ಹೌದು, ಭಾರತದಲ್ಲಿ ಭಾರೀ ಜನಮನ್ನಣೆಗಳಿಸಿರುವ ವಾಟ್ಸಪ್ ಅನ್ನು ಇಲ್ಲಿಯ ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳ ರಾಜಕೀಯ ಪ್ರಚಾರಕ್ಕಾಗಿ ಬಳಸುತ್ತಿರುವುದಕ್ಕೆ ವಾಟ್ಸಪ್ ಅಕ್ಷೇಪ ವ್ಯಕ್ತಪಡಿಸಿದ್ದು, ಹಾಗೇನಾದರೂ ಮುಂದುವರೆದರೇ ಅಂಥಹ ಅಕೌಂಟ್‌ಗಳನ್ನು ಸಂಸ್ಥೆಯೇ ಬ್ಯಾನ್ ಮಾಡುವುದಾಗಿ ತಿಳಿಸಿದೆ. ಈಗಾಗಲೇ ವಾಟ್ಸಪ್ ದುರ್ಬಳಿಕೆ ತಡೆಗೆ ಸಂಸ್ಥೆಯು ಹಲವಾರು ಬದಲಾವಣೆಯ ಫೀಚರ್ಸ್‌ಗಳನ್ನು ಅಳವಡಿಸಿರುವುದನ್ನು ಸಹ ನೆನಪಿಸಿದೆ.

ಭಾರತೀಯ ರಾಜಕೀಯ ಪಕ್ಷಗಳಿಗೆ ಎಚ್ಚರಿಗೆ ಕೊಟ್ಟ 'ವಾಟ್ಸಪ್'.!!

ವಾಟ್ಸಪ್ ಮೆಸೆಜಿಂಗ್ ರಾಜಕೀಯ ಪಕ್ಷಗಳ ಪ್ರಚಾರ ಪ್ರಸಾರ ಮಾಡುವ ಮಾಡುವ ವೇದಿಕೆಯಲ್ಲ. ಅಲ್ಲದೇ ಬಲ್ಕ್ ಮೆಸ್ಸೆಜ್‌ಗಳನ್ನು ಕಳುಹಿಸುವ ತಾಣವು ಇದಲ್ಲಾ. ಈ ಕುರಿತು ಈಗಾಗಲೇ ಕೆಲ ತಿಂಗಳುಗಳ ಹಿಂದಿನಿಂದಲೂ ಹಲವು ಬಾರಿ ಆಕ್ಷೇಪವನ್ನು ಹೊರಹಾಕಿದ್ದಾಗಿದೆ ಆದರೆ ಎಚ್ಚೆತ್ತುಕೊಂಡಿಲ್ಲ. ಇಂಥಹ ನಡವಳಿಕೆಗಳು ಮುಂದುವರೆದರೇ ವಾಟ್ಸಪ್ ಅಂಥಹ ಅಕೌಂಟ್‌ಗಳನ್ನು ಬ್ಯಾನ್ ಮಾಡಲಿದೆ ಎಂದು ವಾಟ್ಸಪ್‌ನ ಸಂವಹನ ವಿಭಾಗದ ಮುಖ್ಯಸ್ಥ ಕಾರ್ಲ್ ವೂಗ್ ಅವರು ಹೇಳಿದ್ದಾರೆ.

ಭಾರತೀಯ ರಾಜಕೀಯ ಪಕ್ಷಗಳಿಗೆ ಎಚ್ಚರಿಗೆ ಕೊಟ್ಟ 'ವಾಟ್ಸಪ್'.!!

ವಾಟ್ಸಪ್‌ನಲ್ಲಿ ದುರ್ಬಳಿಕೆಯನ್ನು ತಡೆಗಟ್ಟವ ಸಲುವಾಗಿ ಬಲ್ಕ್ ಮೆಸ್ಸೆಜ್‌ಗಳನ್ನು ಕಳುಹಿಸುವುದಕ್ಕೆ ಬ್ರೇಕ್ ಹಾಕುವುದು ವಾಟ್ಸಪ್‌ನ ಪ್ರಮುಖ ಕಾರ್ಯವಾಗಿದ್ದು, ಅಲ್ಲದೇ ಲೋಕಸಭಾ ಚುನಾವಣೆ ಹತ್ತಿರವಿರುವುದರಿಂದ, ಭಾರತೀಯ ಚುನಾವಣಾ ಆಯೋಗವು ಚುನಾವಣೆ ಸಿದ್ಧತೆಯಲ್ಲಿ ತೊಡಗಿದೆ. ಹೀಗಾಗಿ ವಾಟ್ಸಪ್ ಅನ್ನು ಪ್ರಚಾರಕ್ಕಾಗಿ ಬಳೆಸಿಕೊಳ್ಳುವ ಪಕ್ಷದ ಅಕೌಂಟ್‌ಗಳನ್ನು ಅಗತ್ಯ ಬಿದ್ದರೆ ಬ್ಯಾನ್ ಮಾಡುವುದಾಗಿ ತಿಳಿಸಲಾಗಿದೆ.

ಭಾರತೀಯ ರಾಜಕೀಯ ಪಕ್ಷಗಳಿಗೆ ಎಚ್ಚರಿಗೆ ಕೊಟ್ಟ 'ವಾಟ್ಸಪ್'.!!

ಭಾರತವು ಅತೀ ಹೆಚ್ಚು ವಾಟ್ಸಪ್‌ ಬಳಕೆದಾರರನ್ನು ಹೊಂದಿದ್ದು, ತಿಂಗಳಲ್ಲಿ 230 ಮಿಲಿಯನ್ ಸಕ್ರಿಯ ಬಳಕೆದಾರರು ವಾಟ್ಸಪ್‌ ಉಪಯೋಗಿಸುತ್ತಾರೆ. ಮೊದಲು ಒಂದು ಸಂದೇಶವನ್ನು ಅನಿಯಮಿತ ಗುಂಪುಗಳಿಗೆ ಅಥವಾ ವ್ಯಕ್ತಿಗಳಿಗೆ ಏಕಕಾಲಕ್ಕೆ ಕಳುಹಿಸುವ ಸೌಲಭ್ಯವಿತ್ತು. ಅದರಿಂದ ದುರ್ಬಳಿಕೆಗಳು ಹೆಚ್ಚಾಗುತ್ತಿರುವನ್ನು ತಿಳಿದು ಏಕಕಾಲಕ್ಕೆ ಕೇವಲ ಐದು ಸಂದೇಶಗಳನ್ನು ಮಾತ್ರ ಕಳುಹಿಸುವ ಹೊಸ ಫೀಚರ್‌ಅನ್ನು ಅಳವಡಿಸಿತು.

Best Mobiles in India

English summary
WhatsApp has been at the centre of controversy in India since last year after false messages spread on its platform sparked a number of mob lynchings. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X