ಸಾಹಿತ್ಯ ಪ್ರಶಸ್ತಿ ಪಡೆದ ಈ ಕೃತಿ ಮೊಬೈಲ್‌ನಲ್ಲಿ ಬರೆದು ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ್ದು!!

|

ಸಕಲ ಸೌಲಭ್ಯವಿದ್ದರೂ ಕೊರತೆಗಳನ್ನೇ ಎತ್ತಿ ತೋರಿಸುವ ಜನರೇ ಹೆಚ್ಚು. ಆದರೆ, ಅಂಥವರ ಮಧ್ಯೆ ಸಾಧಿಸುವ ಇಚ್ಚಾಶಕ್ತಿ ಇದ್ದರೇ, ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಬಂಧನದ ನಡುವೆ ಬದುಕುತ್ತಿರುವ ವ್ಯಕ್ತಿಯೋರ್ವ ತೋರಿಸಿಕೊಟ್ಟಿದ್ದಾನೆ. ದ್ವೀಪವೊಂದರಲ್ಲಿ ಬದುಕುತ್ತಿರುವ ಆತ ಸ್ಮಾರ್ಟ್‌ಫೋನ್‌ನಲ್ಲಿಯೇ ಕೃತಿಯೊಂದನ್ನು ರಚಿಸಿ ಹೆಸರಾಗಿದ್ದಾನೆ. ಅದಕ್ಕೆ ಕಾರಣ ಈಗ ಆ ಕೃತಿ ಆಸ್ಟ್ರೇಲಿಯಾದ ಅತ್ತುನ್ನತ ಸಾಹಿತ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.!

 ಸಾಹಿತ್ಯ ಪ್ರಶಸ್ತಿ ಪಡೆದ ಈ ಕೃತಿ  ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ್ದು!!

ಹೌದು, ಪಪುವಾ ನ್ಯೂಗಿನಿ ಎಂಬ ದ್ವೀಪ ಒಂದರಲ್ಲಿ ಬಂಧೀಖಾನೆಯಲ್ಲಿರುವ 'ಬೆಹರೊಜ್ ಬೂಚಾನಿ' ಎಂಬ ವ್ಯಕ್ತಿ ಇಂತಹದೊಂದು ಸಾಧನೆ ಮಾಡಿದ್ದಾನೆ. ಆತ ಸ್ಮಾರ್ಟ್‌ಪೊನಿನಲ್ಲಿ ಬರೆದು ವಾಟ್ಸ್ಆಪ್‌ನಲ್ಲಿ ಕಳಿಸಿದ 'ನೋ ಫ್ರೇಂಡ್ಸ್ ಬಟ್‌ದ ಮೌಂಟೆನ್ಸ್' ಎಂಬ ಕೃತಿ ಇದೀಗ ಆಸ್ಟ್ರೇಲಿಯಾದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದೆ. ಈ ವಿಕ್ಟೋರಿಯನ್ ಸಾಹಿತ್ಯ ಪ್ರಶಸ್ತಿಯು 73,390 ಡಾಲರ್ ಬಹುಮಾನವನ್ನು ಒಳಗೊಂಡಿದೆ.

 ಸಾಹಿತ್ಯ ಪ್ರಶಸ್ತಿ ಪಡೆದ ಈ ಕೃತಿ  ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ್ದು!!

2019ರ ಆಸ್ಟ್ರೇಲಿಯಾದ ವಿಕ್ಟೋರಿಯನ್ ಸಾಹಿತ್ಯ ಪ್ರಶಸ್ತಿಯ ವೀಜೇತರ ಹೆಸರನ್ನು ಜನೆವರಿ 31 ರಂದು ಘೋಷಿಸಲಾಗಿದ್ದು, ಈಗಲೂ ಬಂಧಿಖಾನೆಯಲ್ಲೇ ಇರುವ 'ಬೆಹರೊಜ್ ಬೂಚಾನಿ' ವಿಜೇತನಾಗಿದ್ದಾನೆ. ಆತ ಬಂಧೀಖಾನೆಯಲ್ಲಿ ತಾನು ಸೇರಿದಂತೆ ಅಲ್ಲಿನ ಜನರು ಅನುಭವಿಸುತ್ತಿರುವ ಕಷ್ಟಗಳನ್ನು, ಅಲ್ಲಿನ ವಾತಾವರಣವನ್ನು ಮತ್ತು ನೋವನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಈಗ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಸಿಕ್ಕಿದರೂ ಸಹ ಆತ ನೋವಿನಲ್ಲೇ ಇದ್ದಾನೆ.

 ಸಾಹಿತ್ಯ ಪ್ರಶಸ್ತಿ ಪಡೆದ ಈ ಕೃತಿ  ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ್ದು!!

ಬಂಧೀಖಾನೆಯಲ್ಲಿ ಇವರೊಟ್ಟಿಗೆ ಸುಮಾರು ನೂರು ಜನ ನಿರಾಶ್ರಿತರಿದ್ದು, ನನ್ನ ಸುತ್ತಲಿರುವ ಈ ಮುಗ್ಧ ಜನರ ನೋವುಗಳನ್ನು ನೋಡುತ್ತಿದ್ದೆನೆ, ಹೀಗಾಗಿ ನನ್ನ ಕೃತಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಹೆಚ್ಚು ಸಂತಸ ವ್ಯಕ್ತಪಡಿಸಲು ಆಗದು ಎಂದು ಬೂಚಾನಿ ಸಂದೇಶದ ಮೂಲಕ ತಿಳಿಸಿದ್ದಾನೆ. ಆದರೆ ನನ್ನನ್ನು ಬಂಧೀಮಾಡಿದ ದೇಶದಿಂದಲೇ ಪ್ರಶಸ್ತಿ ಪಡೆದಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದಾನೆ.

 ಸಾಹಿತ್ಯ ಪ್ರಶಸ್ತಿ ಪಡೆದ ಈ ಕೃತಿ  ವಾಟ್ಸ್‌ಆಪ್‌ನಲ್ಲಿ ಕಳುಹಿಸಿದ್ದು!!

ಬೆಹರೊಜ್ ಬೂಚಾನಿ ಬಂಧೀಖಾನೆಯಲ್ಲಿದ್ದುಕೊಂಡು ಅಲ್ಲಿಯ ಗಾರ್ಡ್‌ಗಳ ಕಣ್ತಪ್ಪಿಸಿ ಸ್ಮಾರ್ಟ್‌ಫೋನ್‌ ಮೂಲಕ ಫಾರ್ಸಿ ಭಾಷೆಯಲ್ಲಿ ಕೃತಿಯನ್ನು ರಚಿಸಿದ್ದರು ಮತ್ತು ಅದನ್ನು ಆಸ್ಟ್ರೇಲಿಯಾದ ಒಬ್ಬ ಅನುವಾದಕರಿಗೆ ವಾಟ್ಸ್‌ಆಪ್‌ ಮೂಲಕ ಕಳುಹಿಸಿಕೊಟ್ಟಿದ್ದರು. ಆರು ವರ್ಷದ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದಾಗ, ನಿರಾಶ್ರಿತರ ದೋಣಿ ವಶಪಡಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಮಾನುಸ್ ದ್ವೀಪ್ದಲ್ಲಿ ಬೂಚಾನಿಯವರನ್ನು ಬಂಧಿಸಲಾಗಿತ್ತು.

Most Read Articles
Best Mobiles in India

English summary
Behrouz Boochani, an Iranian Kurd, wrote No Friend But the Mountains: Writing from Manus Prison by text message from inside a detention centre.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X