Home
Social media

ಫೇಸ್‌ಬುಕ್ ಇದ್ದರೆ ವಯಸ್ಸಾದವರಿಗೆ ಒಂಟಿತನ ಕಾಡಲ್ಲವಂತೆ!!

By Bhaskar N J

ಅದೇನು ಯಾವಾಗಲೂ ಮೊಬೈಲ್ ಹಿಡಿದು ಫೇಸ್‌ಬುಕ್‌ನಲ್ಲಿಯೇ ಮುಳುಗಿರುತ್ತೀಯ ಎಂದು ಯುವಜನತರಯನ್ನು ದೂಷಿಸುವ ಅಜ್ಜ-ಅಜ್ಜಿಯಂದಿರಿಗೆ ಫೇಸ್‌ಬುಕ್‌ನಿಂದ ಭಾರೀ ಲಾಭವಿದೆಯಂತೆ. ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ವೃದ್ಧರಿಗೆ ಒಂಟಿ ಕಾಡುವುದು ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಹೌದು, ಈಗಿನ ಯುವಕ ಯುವತಿಯರಿಗೆ ಫೇಸ್‌ಬುಕ್ ಬಿಟ್ಟು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಎದುರಾಗಿರುವಾಗ, ವಯಸ್ಸಾದವರ ಒಂಟಿತನವನ್ನು ಕಡಿಮೆ ಮಾಡುವುದರಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ದಿ ಜರ್ನಲ್ ನ್ಯೂ ಮೀಡಿಯಾ ಹಾಗೂ ಸೊಸೈಟಿ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿದುಬಂದಿದೆ.

ಫೇಸ್‌ಬುಕ್ ಇದ್ದರೆ ವಯಸ್ಸಾದವರಿಗೆ ಒಂಟಿತನ ಕಾಡಲ್ಲವಂತೆ!!

ಫೇಸ್‌ಬುಕ್ ನಂತಹ ಸಾಮಾಜಿಕ ಜಾಲತಾಣಗಳು ಒಂಟಿತನ ನೀಗಿಸುವಲ್ಲಿ ಸಹಕಾರಿಯಾಗುತ್ತವೆ. ಪ್ರಮುಖವಾಗಿ ವೃದ್ಧರಲ್ಲಿ ಒಂಟಿತನ ನೀಗಿಸುವುದಕ್ಕೆ ಇಂತಹ ಸಾಮಾಜಿಕ ಜಾಲತಾಣಗಳು ಸಹಕಾರಿಯಾಗುತ್ತವೆ ಎಂದು ಧ್ಯಯನ ವರದಿಯಲ್ಲಿ ಅಮೆರಿಕದ ಪೆನ್ಸಲ್ವೇನಿಯಾ ವಿಶ್ವವಿದ್ಯಾನಿಲಯದ ಫ್ರೊಫೆಸರ್ ಆಗಿರುವ ಎಸ್ ಶ್ಯಾಮ್ ಸುಂದರ್ ಅವರು ಹೇಳಿದ್ದಾರೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಅಧ್ಯಯನದ ಮೇಳೆ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 200 ಜನರಿಗೆ ಒಂದು ವರ್ಷ ಫೇಸ್ ಬುಕ್ ಅನ್ನು ಬಳಕೆ ಮಾಡುವಂತೆ ಸೂಚಿಸಲಾಗಿತ್ತು. ಈ ಅವಧಿಯಲ್ಲಿ ವೃದ್ಧರು ಬಳಸಿದ್ದ ಫೇಸ್ ಬುಕ್ ಟೂಲ್ ಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಈ ವರದಿಯನ್ನು ತಯಾರಿಸಲಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಫೇಸ್‌ಬುಕ್ ಇದ್ದರೆ ವಯಸ್ಸಾದವರಿಗೆ ಒಂಟಿತನ ಕಾಡಲ್ಲವಂತೆ!!

ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಬಹುತೇಕ ವೃದ್ಧರು ತಾವು ಹೇಳಬೇಕೆಂದಿರುವುದನ್ನು ಫೇಸ್‌ಬುಕ್ ಮೂಲಕ ಹಂಚಿಕೊಳ್ಳುತ್ತಿದ್ದರು. ಅದಕ್ಕೆ ಬರುತ್ತಿದ್ದ ಪ್ರತಿಕ್ರಿಯೆಗಳು ವೃದ್ಧರಲ್ಲಿ ಸಾಮಾಜಿಕ ಸಂವಹನದ ಭಾವವನ್ನು ಮೂಡಿಸುತ್ತಿದ್ದವು. ಇದು ವೃದ್ಧರಿಗೆ ಒಂಟಿ ಕಾಡುವುದು ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಿದೆ.

ಓದಿರಿ: ವಾಟ್ಸ್‌ಆಪ್​ ಹ್ಯಾಂಗ್​ ಮಾಡುತ್ತಿವೆ ಚೆಂಡು, ಕಪ್ಪು ಚುಕ್ಕಿ, ಅಳುವ ಎಮೊಜಿ!!..ಕಾರಣ ಏನು ಗೊತ್ತಾ?

Best Mobiles in India

English summary
According to a study Facebook is considered the most popular social network among older adults.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+