Home
Social media

58.3 ಕೋಟಿ ನಕಲಿ ಖಾತೆಗಳನ್ನು ಡಿಲೀಟ್ ಮಾಡಿತು ಫೇಸ್‌ಬುಕ್!!

ಹಿಂಸಾತ್ಮಕ ಚಿತ್ರಗಳು, ಭಯೋತ್ಪಾದನೆ ಹಾಗೂ ದ್ವೇಷ ಹರಡುವ ಬರಹಗಳೂ ಮತ್ತು ವಿಡಿಯೊಗಳು ಇರುವ ಫೇಸ್‌ಬುಕ್ ಖಾತೆಗಳನ್ನು ಫೇಸ್‌ಬುಕ್ ಡಿಲೀಟ್ ಮಾಡುತ್ತಿದೆ.

By Bhaskar N J

ಹಿಂಸಾತ್ಮಕ ಚಿತ್ರಗಳು, ಭಯೋತ್ಪಾದನೆ ಹಾಗೂ ದ್ವೇಷ ಹರಡುವ ಬರಹಗಳೂ ಮತ್ತು ವಿಡಿಯೊಗಳು ಇರುವ ಫೇಸ್‌ಬುಕ್ ಖಾತೆಗಳನ್ನು ಫೇಸ್‌ಬುಕ್ ಡಿಲೀಟ್ ಮಾಡುತ್ತಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ 58.3 ಕೋಟಿ ನಕಲಿ ಖಾತೆಗಳನ್ನು ಫೇಸ್‌ಬುಕ್‌ ಮುಚ್ಚಿದೆ ಎಂದು ಫೇಸ್‌ಬುಕ್‌ ಆಡಳಿತ ಮಂಡಳಿ ತಿಳಿಸಿದೆ.

ನಕಲಿ ಖಾತೆಗಳ ಮೂಲಕ ಸಮಾಜದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಗಮನಿಸಿ ಈ ಕ್ರಮಕೈಗೊಂಡಿರುವುದಾಗಿ ಫೇಸ್‌ಬುಕ್‌ ಆಡಳಿತ ಮಂಡಳಿ ಹೇಳಿದೆ. 'ಪ್ರತಿ ದಿನ ಲಕ್ಷಾಂತರ ನಕಲಿ ಖಾತೆ ತೆರೆಯುವ ಪ್ರಯತ್ನಗಳನ್ನು ತಡೆಯುತ್ತಿದ್ದೇವೆ. ಈಗಾಗಲೇ ಹಲವಾರು ನಕಲಿ ಖಾತೆಗಳನ್ನು ಅಳಿಸಿ ಹಾಕಿದ್ದೇವೆ' ಎಂದು ಆಡಳಿತ ಮಂಡಳಿ ತಿಳಿಸಿದೆ.

58.3 ಕೋಟಿ ನಕಲಿ ಖಾತೆಗಳನ್ನು ಡಿಲೀಟ್ ಮಾಡಿತು ಫೇಸ್‌ಬುಕ್!!

ಲೈಂಗಿಕ ದೌರ್ಜನ್ಯ, ಭಯೋತ್ಪಾದನೆ, ಕ್ರೌರ್ಯ ಒಳಗೊಂಡ 3 ಕೋಟಿ ಪೋಸ್ಟ್‌ ಬಗ್ಗೆ ಫೇಸ್‌ಬುಕ್‌ಗೆ ಮಾಹಿತಿ ದೊರೆತಿದೆ. ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ 34 ಲಕ್ಷ ಹಿಂಸಾತ್ಮಕ ಗ್ರಾಫಿಕ್ಸ್‌ಗಳು ಪತ್ತೆಯಾಗಿವೆ. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ನಕಲಿ ಖಾತೆಗಳಲ್ಲಿ ಈ ರೀತಿಯ ಪ್ರಮಾಣ ಹೆಚ್ಚಾಗಿದೆ ಎಂದು ಫೇಸ್‌ಬುಕ್ ಹೇಳಿದೆ.

ಕೇಂಬ್ರಿಜ್ ಅನಾಲಿಟಿಕಾ ಅಕ್ರಮವಾಗಿ ಬಳಕೆದಾರರ ಮಾಹಿತಿ ಬಳಸಿದ ಹಗರಣದ ನಂತರ ವೈಯಕ್ತಿಕ ಖಾತೆಯ ಪಾರದರ್ಶಕತೆಗೆ ಸಂಸ್ಥೆ ಕ್ರಮ ವಹಿಸಿದೆ. ಫೇಸ್‌ಬುಕ್‌ ಜಾಲತಾಣ ಬಳಸಿಕೊಂಡು ಖಾತೆದಾರರ ವೈಯಕ್ತಿಕ ಮಾಹಿತಿ ಪಡೆದುಕೊಂಡ 200 ಆಪ್‌ಗಳ ಜತೆ ವ್ಯವಹಾರ ಮುರಿದುಕೊಂಡಿದ್ದೇವೆ ಎಂದು ಆಡಳಿತ ಮಂಡಳಿ ತಿಳಿಸಿದೆ.

58.3 ಕೋಟಿ ನಕಲಿ ಖಾತೆಗಳನ್ನು ಡಿಲೀಟ್ ಮಾಡಿತು ಫೇಸ್‌ಬುಕ್!!

'ನಕಲಿ ಖಾತೆಗಳನ್ನು ಶೇಕಡಾ 100ರಷ್ಟು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಶೀಘ್ರವೇ ನಕಲಿ ಖಾತೆಗಳಿಂದ ಫೇಸ್‌ಬುಕ್ ಜಾಲತಾಣ ಬಹುತೇಕ ಮುಕ್ತಿ ಹೊಂದಲಿದೆ ಎಂದು ಫೇಸ್‌ಬುಕ್ ಆಡಳಿತ ಮಂಡಳಿ ತಿಳಿಸಿದೆ. ಆದರೆ, ಫೇಸ್‌ಬುಕ್ ಯಾವ ಯಾವ ದೇಶದಲ್ಲಿ ಎಷ್ಟೆಷ್ಟು ಫೇಕ್ ಖಾತೆಗಳನ್ನು ಡಿಲೀಟ್ ಮಾಡಿರುವ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲ.

ಓದಿರಿ: 2021ರ ವೇಳೆಗೆ ಜಿಯೋ ಹೇಗಿರಬೇಕು ಎಂದು ಈಗಲೇ ಡಿಸೈಡ್!..ಅಂಬಾನಿ ಪ್ಲಾನ್‌ಗಳಿವು!!

Best Mobiles in India

English summary
That's more than a quarter of Facebook's 2.2 billion monthly active users.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+