TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತದ ಟೆಲಿಕಾಂ ಪ್ರಪಂಚವನ್ನೇ ತನ್ನ ಕೈ ತೆಕ್ಕೆಯಲ್ಲಿ ಹಾಕಿಕೊಂಡಿರುವ ರಿಲಾಯನ್ಸ್ ಜಿಯೋ ಭವಿಷ್ಯದಲ್ಲಿಯೂ ತಾನೇ ಟೆಲಿಕಾಂ ದಿಗ್ಗಜನಾಗಿರುವ ಹಂಬಲದಲ್ಲಿದೆ. ತನ್ನ ಕನಸಿನ ಕೂಸು 'ಜಿಯೋ' ಬಗ್ಗೆ ಮಾಲಿಕ ಮುಖೇಶ್ ಅಂಬಾನಿ ಅವರು ಈಗಾಗಲೇ ಭಾರೀ ಭವಿಷ್ಯದ ಪ್ಲಾನ್‌ಗಳನ್ನು ಹಾಕಿಕೊಂಡಿರುವ ಸುದ್ದಿ ಇದೀಗ ವೃರಲ್ ಆಗಿದೆ.!
ಹೌದು, ಹುಟ್ಟಿದ ಎರಡು ವರ್ಷಗಳಲ್ಲಿಯೇ ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ಆಳುತ್ತಿರುವ ಜಿಯೋವನ್ನು ಭವಿಷ್ಯದಲ್ಲಿ ಮತ್ತಷ್ಟು ಮೇಲಕ್ಕೇರಿಸಲು ಮಾಲಿಕ ಮುಖೇಶ್ ಅಂಬಾನಿ ಅವರು ಟೊಂಕಕಟ್ಟಿ ನಿಂತಿದ್ದಾರೆ. ಜಿಯೋ ಟೆಲಿಕಾಂ ಅನ್ನು ಭವಿಷ್ಯದಲ್ಲಿಯೂ ದಿಗ್ಗಜನಾಗಿರಿಸಲು ಏನೆಲ್ಲಾ ಮಾಡಬೇಕು ಎಂಬುದನ್ನು ಮುಖೇಶ್ ಅಂಬಾನಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇಂದಿನ ಮಾರುಕಟ್ಟೆಗೆ ತಕ್ಕಂತೆ ಜಿಯೋ ಸೇವೆಗಳನ್ನು ನೀಡುತ್ತಿದೆ. ಆದರೆ, ಭವಿಷ್ಯದಲ್ಲಿ ಜಿಯೋ ಮತ್ತಷ್ಟು ಸೇವೆಗಳನ್ನು ಒದಗಿಸಬೇಕಿದೆ ಎಂಬುದನ್ನು ಅಂಬಾನಿ ಅರಿತು 2021ರ ವೇಳೆಗೆ ಜಿಯೋವಿನ ಭವಿಷ್ಯ ಹೇಗಿರಬೇಕು ಎಂಬುದನ್ನು ಡಿಸೈಡ್ ಮಾಡಿದ್ದಾರೆ. ಹಾಗಾದರೆ, ಅಂಬಾನಿ ಹೊಂದಿರುವ ಜಿಯೋವಿನ ಭವಿಷ್ಯದ ಪ್ಲಾನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.
ಭಾರತದ ಶೇ 99 ಜನಸಂಖ್ಯೆಗೆ ನೆಟ್‌ವರ್ಕ್ ಸೇವೆ!!
ಮುಂದಿನ ಕೆಲವೇ ತಿಂಗಳಿನಲ್ಲಿ ಭಾರತದ ಪ್ರತಿ ಹಳ್ಳಿಯಲ್ಲಿಯೂ ಜಿಯೋ ನೆಟ್‌ವರ್ಕ್ ಸ್ಥಾಪಿಸುವುದು ಜಿಯೋವಿನ ಮೊದಲ ಗುರಿಯಾಗಿದೆ. ಈಗಾಗಲೇ ಸಿಸ್ಕೊ ಕಂಪೆನಿ ಜೊತೆ ಕೈ ಜೋಡಿಸಿರುವ ಜಿಯೋ, 2021 ರ ವೇಳೆಗೆ ದೇಶದ ಜನಸಂಖ್ಯೆಯ ಶೇಕಡ 99 ಪರ್ಸೆಂಟ್ ಜನರಿಗೆ ಜಿಯೋ ಸೇವೆ ತಲುಪುವಂತೆ ಮಾಡಲು ನಿರ್ಧರಿಸಿದೆ.!
2021ಕ್ಕೆ 50 ಪರ್ಸೆಂಟ್ ಟೆಲಿಕಾಂ ಮಾರುಕಟ್ಟೆ ವಶ!
4G ತಂತ್ರಜ್ಞಾನದ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಸೇವೆಗಳನ್ನು ನೀಡಿದ ರಿಲಾಯನ್ಸ್ ಜಿಯೋ ಈಗಾಗಲೇ 15 ಕೋಟಿ ಗ್ರಾಹಕರನ್ನು ಹೊಂದಿದೆ. ಹಾಗಾಗಿ, 2021 ರ ವೇಳೆಗೆ ಭಾರತದ ಶೇಕಡ 50 ಪರ್ಸೆಂಟ್ ಟೆಲಿಕಾಂ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಬೇಕು ಎಂದು ಜಿಯೋ ಗುರಿಯನ್ನು ಹಾಕಿಕೊಂಡಿದೆ ಎಂದು ವರದಿಯಾಗಿದೆ.
ಫೈಬರ್ ನೆಟ್‌ವರ್ಕ್!
ಅತ್ಯಂತ ವೇಗದ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುವ ಸಲುವಾಗಿ ಜಿಯೋ ಫೈಬರ್ ನೆಟ್ವರ್ಕ್ ಜಾಲವನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಮುಂದಾಗಿದೆ. ಫೈಬರ್ ನೆಟ್ವರ್ಕ್ ಜಾಲವನ್ನು ವಿಸ್ತರಿಸುವ ಸಲುವಾಗಿ ರಿಲಯನ್ಸ್ ಜಿಯೋ 60,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
5G ತರಲಿದೆ ಜಿಯೋ!
4G ತಂತ್ರಜ್ಞಾನವನ್ನು ಮೊದಲು ಅಳವಡಿಸಿಕೊಂಡು ಇತರೆ ಟೆಲಿಕಾಂ ಕಂಪೆನಿಗಳಿಗೆ ಟಾಂಗ್ ನೀಡಿದ ಜಿಯೋ ಭವಿಷ್ಯದ ತಂತ್ರಜ್ಞಾನ ಅಳವಡಿಕೆಯಲ್ಲಿಯೂ ಹಿಂದೆ ಬಿದ್ದಿಲ್ಲ. ಹಾಗಾಗಿ, ಹಲವು ಕಂಪೆನಿಗಳ ಜೊತೆಗೂಡಿ ಜಿಯೋ 5G ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. 5G ತಂತ್ರಜ್ಞಾನ ತರಲು ಸ್ಯಾಮ್‌ಸಂಗ್ ಜೊತೆ ಜಿಯೋ ಕೈಜೋಡಿಸಿದೆ.
ಭವಿಷ್ಯದಲ್ಲಿಯೂ ಕಡಿಮೆ ದರ!!
ಪ್ರಸ್ತುತ ಸಮಯದಲ್ಲಿ ಜಿಯೋ ಆಡಿಸಿದಂತೆ ಇತರೆ ಟೆಲಿಕಾಂಗಳು ಆಡುತ್ತಿರಬಹುದು. ಆದರೆ, ಭವಿಷ್ಯದಲ್ಲಿ 4G ವೋಲ್ಟ್‌ಗಿಂತಲೂ ಹೆಚ್ಚಿನ ತಂತ್ರಜ್ಞಾನ ಬಂದರೆ ಇತರೆ ಟೆಲಿಕಾಂಗಳು ಸಹ ಕಡಿಮೆ ಬೆಲೆಯಲ್ಲಿ ಸೇವೆಗಳನ್ನು ನೀಡಲಿವೆ ಎಂದು ಜಿಯೋ ತಿಳಿದಿದೆ. ಹಾಗಾಗಿ, ಭವಿಷ್ಯದಲ್ಲಿಯೂ ಕಡಿಮೆ ದರದಲ್ಲಿಯೇ ಸೇವೆಗಳನ್ನು ಒದಗಿಸಲು ಜಿಯೋ ಎಲ್ಲಾ ರೀತಿಯಲ್ಲಿಯೂ ಸಜ್ಜಾಗಿದೆ.