ಫೇಸ್‌ಬುಕ್ ವ್ಯವಸ್ಥಾಪಕ ಸ್ಥಾನಕ್ಕೆ 'ಬೇಡಿ' ರಾಜಿನಾಮೆ!..ಸ್ವಾಗತಿಸಿದ ಸಂಸ್ಥೆ!!
ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಫೇಸ್‌ಬುಕ್ನಲ್ಲಿ ಅವರು ಕೇವಲ 15 ತಿಂಗಳ ಕಾರ್ಯನಿರ್ವಹಿಸಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದನ್ನು ಫೇಸ್‌ಬುಕ್ ಸ್ಪಷ್ಟಪಡಿಸಿದೆ.!!
ಇನ್ನು ಉಮಂಗ್ ಬೇಡಿ ರಾಜಿನಾಮೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ ತಾತ್ಕಾಲಿಕವಾಗಿ ಸಂಸ್ಥೆಯ ದಕ್ಷಿಣ ಏಷ್ಯಾದ ಗ್ರಾಹಕ ಮತ್ತು ಮಾಧ್ಯಮ ವಿಭಾಗದ ನಿರ್ದೇಶಕರಾಗಿರುವ ಮತ್ತೋರ್ವ ಭಾರತೀಯ ಸಂದೀಪ್ ಭೂಷಣ್ ಅವರನ್ನು ಹಂಗಾಮಿ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.!!

ಉಮಂಗ್ ಬೇಡಿ ತಮ್ಮದೇ ಸ್ವಂತ ಉದ್ದಿಮೆ ಆರಂಭಿಸುವ ಸಲುವಾಗಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದ್ದು, ರಾಜಿನಾಮೆ ಕುರಿತಾಗಿ ಫೇಸ್‌ಬುಕ್ ಅಭಿನಂದನೆ ಸಲ್ಲಿಸಿದೆ. ಅತ್ಯುತ್ತಮ ತಂಡವನ್ನು ಕಟ್ಟಿದ್ದ ಬೇಡಿ ಅವರು, ಸಂಸ್ಥೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಮತ್ತು ಅವರ ಸೇವೆ ಪ್ರಶಂಸನೀಯವಾಗಿತ್ತು ಎಂದು ಹೇಳಿದೆ.!!

ಈ ಮೊದಲು ಅಡೋಬ್ ಇಂಡಿಯಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಮಂಗ್ ಬೇಡಿ ಅವರು 2016ರ ಜುಲೈ ತಿಂಗಳಲ್ಲಿ ಫೇಸ್ ಬುಕ್ ಸಂಸ್ಥೆಯನ್ನು ಸೇರಿದ್ದರು.ಇದೀಗ ಅವರು ರಾಜಿನಾಮೆ ನೀಡಿದ್ದು, ಅವರ ಮುಂದಿನ ಭವಿಷ್ಯದ ಯೋಜನೆಗೆ ಸಂಸ್ಥೆ ಶುಭ ಹಾರೈಸುತ್ತದೆ ಎಂದು ಫೇಸ್‌ಬುಕ್ ಹೇಳಿದೆ.!!
ಓದಿರಿ: ದುಬಾರಿ ಬೆಲೆಯಲ್ಲಿ ''ಶಿಯೋಮಿ ಎಂಐ ಮಿಕ್ಸ್ 2''!!..ಒಪ್ಪುತ್ತಾರಾ ಭಾರತೀಯರು?


Click it and Unblock the Notifications








