ಶೀಘ್ರವೇ ಫೇಸ್‌ಬುಕ್ ಮೇಸೆಂಜರ್ ಆಪ್‌ನಲ್ಲೇ ಡೇಟಿಂಗ್ ಮಾಡಿ..!!
ಟಿಂಡರ್ ಡೇಟಿಂಗ್ ಆಪ್ ಮಾದರಿಯಲ್ಲಿ ಬದಲಾಯಿಸಲು ಮುಂದಾಗಿದ್ದು, ಮೇಸೆಂಜರ್ ನಲ್ಲಿಯೇ ಡೇಟಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲು ಸಿದ್ಧವಾಗಿದೆ.
ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಇತ್ತೀಚೆಗೆ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಗಳನ್ನು ನೀಡಲು ಮುಂದಾಗಿದೆ. ಅಲ್ಲದೇ ಹೆಚ್ಚು ಖ್ಯಾತಿ ಪಡೆದುಕೊಂಡ ಆಪ್‌ಗಳಿಂದ ಆಯ್ಕೆಗಳನ್ನು ಎರವಲು ಪಡೆದುಕೊಂಡು ತನ್ನ ಆಪ್‌ಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ವಿಚಾರ ತಿಳಿದಿರುವುದೆ.

ಓದಿರಿ: BSNL ನೆಟ್‌ವರ್ಕ್ ಸಿಗಲ್ಲ ಎನ್ನಬೇಡಿ: ಜಿಯೋದಲ್ಲೂ ಇಲ್ಲದ ವೇಗದ ಡೇಟಾಕ್ಕಾಗಿ ಶೀಘ್ರವೇ 5G ಲಾಂಚ್..!
ಇದೆ ಮಾದರಿಯಲ್ಲಿ ಈ ಬಾರಿ ಫೇಸ್‌ಬುಕ್ ತನ್ ಮೇಸೆಂಜರ್ ಆಪ್‌ಅನ್ನು ಟಿಂಡರ್ ಡೇಟಿಂಗ್ ಆಪ್ ಮಾದರಿಯಲ್ಲಿ ಬದಲಾಯಿಸಲು ಮುಂದಾಗಿದ್ದು, ಮೇಸೆಂಜರ್ ನಲ್ಲಿಯೇ ಡೇಟಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲು ಸಿದ್ಧವಾಗಿದೆ. ಇದಕ್ಕಾಗಿ ಕೊಂಚ ಬದಲಾವಣೆಯನ್ನು ಮಾಡಿಕೊಳ್ಳಲು ಮುಂದಾಗಿದೆ.

ಟಿಂಡರ್ ಮಾದರಿ:
ಟಿಂಡರ್ ಆಪ್ ಯುವ ಜೋಡಿಗಳು ಡೇಟಿಂಗ್ ಮಾಡುವ ಸಲುವಾಗಿಯೇ ಇರುವ ಆಪ್ ಆಗಿದೆ. ಇದೇ ಮಾದರಿಯಲ್ಲಿ ಕಾರ್ಯರ್ವಹಿಸುವಂತೆ ಫೇಸ್‌ಬುಕ್ ಮೇಸೆಂಜರ್ ಆಪ್ ಅನ್ನು ಡಿಸೈನ್ ಮಾಡುವ ಕಾರ್ಯವು ನಡೆಯುತ್ತಿದೆ.

ಡೇಟಿಂಗ್ ಮಾಡಿ:
ಫೇಸ್‌ಬುಕ್ ಮೇಸೆಂಜರ್ ಆಪ್ ನಲ್ಲಿಯೇ ನೀವು ಯಾರೊಂದಿಗಾದರೂ ಡೇಟ್ ಮಾಡಬಹುದು. ನೀವು ಡೇಟಿಂಗೆ ರಿಕ್ವೇಸ್ಟ್ ಕಳುಹಿಸಬಹುದು ಮತ್ತು ಸ್ವೀಕರಿಸಿದ ರಿಕ್ವೆಸ್ಟ್ ಅನ್ನು ನೀವು ಬೇಕಿದ್ದರೇ ಒಪ್ಪಿಕೊಳ್ಳಬಹುದು ಇಲ್ಲವಾದರೆ ರಿಜೆಕ್ಟ್ ಮಾಡಬಹುದು.


ಟೆಸ್ಟಿಂಗ್ ಜಾರಿಯಲ್ಲಿದೆ:
ಈಗಾಗಲೇ ಈ ಹೊಸ ಆಯ್ಕೆಯನ್ನು ಫೇಸ್‌ಬುಕ್ ಟೆಸ್ಟಿಂಗ್ ಜಾರಿಯಲ್ಲಿದೆ. ಶೀಘ್ರವೇ ಈ ಸೇವೆಯನ್ನು ಸಾಮಾನ್ಯರಿಗೆ ಮುಕ್ತವಾಗಲಿದೆ. ಈಗಾಗಲೇ ಚಾಪ್ ಸ್ನಾಟ್ ನಿಂದ ಕಾಪಿ ಮಾಡುತ್ತಿದ್ದ ಫೇಸ್‌ಬುಕ್ ಈ ಬಾರಿ ಟಿಂಡರ್ ನಿಂದ ಆಯ್ಕೆಯನ್ನು ಕದಿಯಲು ಮುಂದಾಗಿದೆ.


Click it and Unblock the Notifications








