ಫೇಸ್‌ಬುಕ್‌ ಮೆಸೇಂಜರ್‌ಗೆ 'ಇನ್‌ಸ್ಟಾಂಟ್ ಗೇಮ್‌' ಅಪ್‌ಡೇಟ್‌: 5 ಕುತೂಹಲಕಾರಿ ಗೇಮ್‌ಗಳು

By Suneel
|

ಫೇಸ್‌ಬುಕ್‌ ತನ್ನ ಮೆಸೇಂಜರ್‌ ಆಪ್‌ನಲ್ಲಿ ಹೆಚ್ಚು ಸಮಯಗಳನ್ನು ಕಳೆಯಲಿ ಎಂದು ಹೊಸ ಅಪ್‌ಡೇಟ್‌ ಅನ್ನು ನೀಡಿದೆ. ಈ ಅಪ್‌ಡೇಟ್‌ ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಬ್ಬರಿಗೂ ಲಭ್ಯ. ಅಂದಹಾಗೆ ಈ ಫೀಚರ್‌ಗಳ ಹೆಸರು 'ಇನ್‌ಸ್ಟಾಂಟ್ ಗೇಮ್ಸ್'.

ಫೇಸ್‌ಬುಕ್‌ ಮೆಸೇಂಜರ್‌ಗೆ 'ಇನ್‌ಸ್ಟಾಂಟ್ ಗೇಮ್‌' ಅಪ್‌ಡೇಟ್‌:5 ಕುತೂಹಲಕಾರಿ ಗೇಮ್

ಫೇಸ್‌ಬುಕ್ ಮೆಸೇಂಜರ್‌ನಲ್ಲಿನ 'Instant Games' ಫೀಚರ್‌ನಿಂದ ಬಳಕೆದಾರರು ಹಲವು ಗೇಮ್‌ಗಳನ್ನು ಆಟವಾಡಬಹುದು. ವಿಶೇಷ ಅಂದ್ರೆ ಈ ಎಲ್ಲಾ ಗೇಮ್‌ಗಳು ಮೆಸೇಂಜರ್‌ ಆಫ್‌ನಲ್ಲೇ ಇರುತ್ತವೆ. ಯಾವುದೇ ಗೇಮ್‌ಗಳನ್ನು ಡೌನ್‌ಲೋಡ್ ಮಾಡುವ ಅವಶ್ಯಕತೆ ಇಲ್ಲ. ಚಾಟ್‌ ಮಾಡುವ ಸಂದರ್ಭದಲ್ಲಿ ಇತರರ ಟೆಕ್ಸ್ಟ್‌ಗಾಗಿ ಕಾಯುವ ವೇಳೆ 17 ಗೇಮ್‌ಗಳಲ್ಲಿ ಯಾವುದಾದರೊಂದನ್ನು ಸೆಲೆಕ್ಟ್ ಮಾಡಿ ಆಟವಾಡಬಹುದು. ಸ್ನೇಹಿತರೊಂದಿಗೆ ಸ್ಪರ್ಧೆ ಏರ್ಪಡಿಸಿ ಹೈ ಸ್ಕೋರ್ ಮಾಡಬಹುದು.

ಫೇಸ್‌ಬುಕ್‌ ಪೇಜ್‌ ಲೈಕ್ ಮಾಡಲು, ಎಲ್ಲಾ ಸ್ನೇಹಿತರನ್ನು ಒಂದೇ ಕ್ಲಿಕ್‌ನಿಂದ ಇನ್‌ವೈಟ್‌ ಮಾಡುವುದು ಹೇಗೆ?

ಈ ಹಿಂದಿನ ಸಾಕರ್ ಮತ್ತು ವಾಲಿಬಾಲ್‌ ರೀತಿಯಲ್ಲಿ ಅಲ್ಲದೇ, ಈಗ ನೇರವಾಗಿ ಗೇಮ್‌ ಅನ್ನು ಆರಂಭಿಸಬಹುದು. ಟೆಕ್ಸ್ಟ್‌ ಟೈಪ್‌ ಮಾಡುವ ಕೆಳಗೆ ಇರುವ ಗೇಮ್‌ ಕಂಟ್ರೋಲರ್ ಐಕಾನ್ ಕ್ಲಿಕ್ ಮಾಡಿ, ಗೇಮ್‌ ಆಯ್ಕೆ ಮಾಡಿ ಆರಂಭಿಸಬಹುದು.

ಮೊದಲೇ ಹೇಳಿದಂತೆ 17 ಕ್ಲಾಸಿಕ್‌ ಗೇಮ್‌ಗಳು ಇದ್ದು, ಇವುಗಳಲ್ಲಿ ಟಾಪ್‌ 5 ಕುತೂಹಲಕಾರಿ ಗೇಮ್‌ಗಳು ಇವೆ. ಅವುಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಪ್ಯಾಕ್‌- ಮ್ಯಾನ್‌ (Pac-Man)

ಪ್ಯಾಕ್‌- ಮ್ಯಾನ್‌ (Pac-Man)

ಫೇಸ್‌ಬುಕ್‌ ಮೆಸೇಂಜರ್ 'ಇನ್‌ಸ್ಟಾಂಟ್ ಗೇಮ್ಸ್‌'ನಲ್ಲಿ ಪ್ಯಾಕ್‌- ಮ್ಯಾನ್‌ (Pac-Man) ಎಂಬ ಕ್ಲಾಸಿಕ್ ಆರ್ಕೇಡ್ ಗೇಮ್‌ ಸಹ ಒಂದು. ಈ ಗೇಮ್‌ ಬಗ್ಗೆ ಹಲವರಿಗೆ ತಿಳಿದಿರಬಹುದು, ತಿಳಿಯದೇ ಸಹ ಇರಬಹುದು. ಪ್ಯಾಕ್‌-ಮ್ಯಾನ್‌ ಡಾಟ್‌ ಅಥವಾ ಹಣ್ಣುಗಳನ್ನು ತಿನ್ನಲು ಹೋಗುತ್ತದೆ. ಗೇಮ್‌ ಆಡುವವರು ಅದನ್ನು ನಿಯಂತ್ರಿಸಬೇಕು.

ಗಲಗ (Galaga)

ಗಲಗ (Galaga)

ಗಲಗ, ಗೋಲ್ಡನ್ ಏಜ್‌ನ ಆರ್ಕೇಡ್‌ ವೀಡಿಯೊ ಗೇಮ್‌. ಪ್ಯಾಕ್‌ ಮ್ಯಾನ್‌ ಹೊರತುಪಡಿಸಿದರೆ ಇದು ಇನ್ನೊಂದು ಕ್ಲಾಸಿಕ್ ಗೇಮ್‌. ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಇರುವ ಗೇಮ್ ವರ್ಟಿಕಲ್ ಸ್ಪೇಸ್ ಶಿಪ್‌ ಶೂಟರ್ ಗೇಮ್‌ ಆಗಿದ್ದು, ನಮ್ಕೊ ಜಪಾನ್ ಪ್ರಕಟಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಪೇಸ್‌ ಇನ್‌ವೇಡರ್ಸ್ (Space Invaders)

ಸ್ಪೇಸ್‌ ಇನ್‌ವೇಡರ್ಸ್ (Space Invaders)

ಸ್ಪೇಸ್ ಇನ್‌ವೇಡರ್ಸ್, ಎರಡು ಆಯಾಮಗಳ ಸ್ಪೇಸ್ ಶೂಟರ್ ಗೇಮ್‌. ಗೇಮ್‌ನ ಮೂಲ ಪರಿಕಲ್ಪನೆ ಎಂದರೆ ಆಕ್ರಮಣಕಾರಿ ಏಲಿಯನ್‌ಗಳನ್ನು ಲೇಸರ್ ಕ್ಯಾನನ್‌ನಿಂದ ಕಿಲ್‌ ಮಾಡುವುದು ಆಗಿದೆ.

 ವರ್ಡ್ಸ್ ವಿತ್ ಫ್ರೆಂಡ್ಸ್: ಫ್ರೆಂಜಿ (Words with Friends: Frenzy )

ವರ್ಡ್ಸ್ ವಿತ್ ಫ್ರೆಂಡ್ಸ್: ಫ್ರೆಂಜಿ (Words with Friends: Frenzy )

ವರ್ಡ್ಸ್ ವಿತ್ ಫ್ರೆಂಡ್ಸ್ ಪ್ರಖ್ಯಾತ ವರ್ಡ್ಸ್ ಗೇಮ್‌ ಆಗಿದ್ದು, ಇದನ್ನು ನ್ಯೂಟಾಯ್ ಅಭಿವೃದ್ದಿಪಡಿಸಿದೆ. ಈ ಗೇಮ್‌ ಪಜಲ್ ಶೈಲಿಯಲ್ಲಿ ಕ್ರಾಸ್‌ವರ್ಡ್ಸ್‌ ಅನ್ನು ನಿರ್ಮಿಸಲು ಅವಕಾಶ ನೀಡುತ್ತಿದೆ.

 ಎಂಡ್‌ಲೆಸ್ ಲೇಕ್ (Endless Lake)

ಎಂಡ್‌ಲೆಸ್ ಲೇಕ್ (Endless Lake)

ಎಂಡ್‌ಲೆಸ್ ಲೇಕ್, ರನ್ನರ್ ಗೇಮ್‌ ಆಗಿದ್ದು, ಹೀರೋಗೆ ಪೂರ್ಣ ಸಮುದ್ರ ದಾಟಲು ಸಹಾಯ ಮಾಡಬೇಕಾಗುತ್ತದೆ. ಇದು ಮನರಂಜನೆ ಕಲೆಯ ದೃಶ್ಯಗಳನ್ನು ಹೊಂದಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Facebook Messenger Gets Instant Gaming: Pac Man, Galaga and Other Interesting Games You Can Play. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X