ಶೀಘ್ರದಲ್ಲಿ ಫೇಸ್‌ಬುಕ್‌ ಬಳಕೆದಾರರು ತಮ್ಮ ಪೋಸ್ಟ್‌ನಿಂದ ಹಣ ಗಳಿಸಬಹುದು!!

By Suneel
|

ಫೇಸ್‌ಬುಕ್‌ ಬಳಕೆದಾರರು ಅತಿ ಶೀಘ್ರದಲ್ಲಿ ತಮ್ಮ ಪೋಸ್ಟ್‌ಗಳಿಂದ ಲಾಭಗಳಿಸಬಹುದು. ಫೇಸ್‌ಬುಕ್‌ ಹೊಸ ಫೀಚರ್‌ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಅಭಿವೃದ್ದಿಗೊಳಿಸುತ್ತಿದ್ದು, ಈ ಫೀಚರ್‌ನಿಂದ ಬಳಕೆದಾರರು ಸಹ ತಮ್ಮ ಪೋಸ್ಟ್‌ಗಳಿಂದ ಹಣಗಳಿಸಬಹುದಂತೆ. ಅಂದಹಾಗೆ ಎಂತಹ ಪೋಸ್ಟ್‌ಗಳಿಂದ ಹಣಗಳಿಸಬಹುದು, ಆ ಫೀಚರ್‌ ಯಾವುದು ಎಂದು ತಿಳಿಯಲು ಲೇಖನದ ಸ್ಲೈಡ್‌ಗಳನ್ನು ಓದಿರಿ.

ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್

ಫೇಸ್‌ಬುಕ್‌ ಬಳಕೆದಾರರು

ಫೇಸ್‌ಬುಕ್‌ ಬಳಕೆದಾರರು

ಫೇಸ್‌ಬುಕ್‌ ಬಳಕೆದಾರರ ಸಮೀಕ್ಷೆಯೊಂದು ನಡೆಯುತ್ತಿದ್ದು, ಫೇಸ್‌ಬುಕ್ ಬಳಕೆದಾರರು ಹಲವು ವಿಧಾನಗಳ ಮೂಲಕ ಹಣ ಸಂಪಾದನೆ ಮಾಡಬಹುದು. ಆದರೆ ಇದುವರೆಗೆ ಹೇಗೆ ಎಂದು ಖಚಿತಗೊಂಡಿಲ್ಲ. ಹಣ ಸಂಪಾದನೆ ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡ್‌ ಓದಿ.

ಪೋಸ್ಟ್‌ಗಳಿಂದ ಲಾಭ

ಪೋಸ್ಟ್‌ಗಳಿಂದ ಲಾಭ

ಫೇಸ್‌ಬುಕ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಪೋಸ್ಟ್‌ನ ಜಾಹಿರಾತಿನಿಂದ ಫೇಸ್‌ಬುಕ್‌ ಸಂಪಾದನೆ ಮಾಡುವ ಲಾಭದಲ್ಲಿ ಪೋಸ್ಟ್‌ ಮಾಡುವವರು ಸಹ ಹಣಗಳಿಸಬಹುದಾಗಿದೆ ಎನ್ನಲಾಗುತ್ತಿದೆ.

ಸಾಧಾರಣ ಪೋಸ್ಟ್‌ಗಳಲ್ಲ

ಸಾಧಾರಣ ಪೋಸ್ಟ್‌ಗಳಲ್ಲ

ಅಂದಹಾಗೆ ಬಹುಸಂಖ್ಯಾತರು ದಿನನಿತ್ಯ ಮತ್ತು ಆಗಾಗ ಮಾಡುವ ತಮ್ಮ ಸಾಧಾರಣ ಸ್ಟೇಟಸ್‌ ಅಪ್‌ಲೋಡ್‌ ಪೋಸ್ಟ್‌ಗಳಿಂದ ಹಣ ಸಂಪಾದನೆ ಎಂದುಕೊಂಡಿದ್ದರೆ ಅದು ತಪ್ಪು. ಫೇಸ್‌ಬುಕ್‌ನಿಂದ ಹಣ ಬರುವುದು ಕೆಲವು ಪ್ರಾಜೆಕ್ಟ್‌ಗಳಿಂದ ಹಾಗೂ ಒಂದು ಕಾರಣದಿಂದ ಹಣ ಸಂಗ್ರಹಿಸುವಂತಹ ಪೋಸ್ಟ್‌ಗಳಿಂದ. ಹಾಗೂ ವಾಣಿಜ್ಯ ಮಾರುಕಟ್ಟೆಗೆ ಉತ್ತಮ ವೇದಿಕೆ ಒದಗಿಸುವಂತಹ ಪೋಸ್ಟ್‌ಗಳಿಂದ.

"Tipping Jar"

ಈ ಚಿತ್ರದಲ್ಲಿ ಇರುವ ಹಲವು ಆಯ್ಕೆಗಳ ಪೋಸ್ಟ್‌ಗಳಿಂದ ನೀವು ಫೇಸ್‌ಬುಕ್‌ನಲ್ಲಿ ಹಣ ಸಂಪಾದನೆ ಮಾಡಬಹುದು. "Tipping Jar" ಆಯ್ಕೆಯು ಅಭಿಮಾನಿಗಳಿಂದ ಹಣ ಸಂಗ್ರಹವಾಗುವ ಒಂದು ವೇದಿಕೆಯಾಗಿದೆ.

ಪರಿಶೀಲಿಸಿದ ಬಳಕೆದಾರರು

ಪರಿಶೀಲಿಸಿದ ಬಳಕೆದಾರರು

ಫೇಸ್‌ಬುಕ್‌ನಿಂದ ಹಣ ಸಂಪಾದಿಸುವ ಈ ಬಗ್ಗೆ ಹಲವು ಕುತೂಹಲಗಳು ಈಗಾಗಲೇ ಹಲವರಲ್ಲಿ ಮೂಡಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಹೇಗೆ ಎಂಬುದು ತಿಳಿದುಬಂದಿಲ್ಲ. ಫೇಸ್‌ಬುಕ್‌ ಕಂಪನಿ ಈ ಫೀಚರ್‌ ಅನ್ನು ಕೆಲವು ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ನೀಡಿದೆಯೋ ಅಥವಾ ಪತ್ರಿಯೊಬ್ಬರಿಗೂ ನೀಡುತ್ತಿದೆಯೋ ಎಂಬುದನ್ನು ನಿಖರವಾಗಿ ಹೇಳಲು ಇದುವರೆಗೆ ಸಾಧ್ಯವಾಗಿಲ್ಲ.

ಸಮೀಕ್ಷೆ ಹೇಳಿದ್ದೇನು?

ಸಮೀಕ್ಷೆ ಹೇಳಿದ್ದೇನು?

"ಸಮೀಕ್ಷೆಯಲ್ಲಿ ಫೇಸ್‌ಬುಕ್‌ ಬಳಕೆದಾರರಿಗೆ "Call to action" ಬಟನ್‌ ಆಸಕ್ತಿ ಬಗ್ಗೆ ಕೇಳಿದ್ದು, ಫಾಲೋವರ್‌ಗಳು ಡೋನೇಶನ್‌ ತರುತ್ತಾರೆಯೇ ಮತ್ತು "ಪ್ರಾಯೋಜಿತ ಮಾರುಕಟ್ಟೆ" ಬಳಕೆದಾರರು ಮತ್ತು ಜಾಹಿರಾತುದಾರರ ನಡುವೆ ಹೊಂದಿಕೆ ಬಗ್ಗೆ ಕೇಳಲಾಗಿದೆ. ಶೀಘ್ರವಾಗಿ ಸೂಕ್ತ ದೀರ್ಘಕಾಲದ ಹಣಗಳಿಕೆಯ ಮಾದರಿ ತಯಾರಿಕೆಗಾಗಿ ಪಾಲುದಾರರಲ್ಲಿ(Partners) ಪ್ರತಿಕ್ರಿಯೆ ಕೇಳಲಾಗುತ್ತಿದೆ", ಎಂದು ಫೇಸ್‌ಬುಕ್‌ ಅಧಿಕಾರಿ ಹೇಳಿದ್ದಾರೆ.

ಯೂಟ್ಯೂಬ್‌ ಲಾಭ ಹಂಚಿಕೆ

ಯೂಟ್ಯೂಬ್‌ ಲಾಭ ಹಂಚಿಕೆ

ಅಂದಹಾಗೆ ಯೂಟ್ಯೂಬ್‌ 2007 ರಿಂದಲೇ ಲಾಭ ಹಂಚಿಕೆಯ ಪ್ರೋಗ್ರಾಮ್‌ ಅನ್ನು ಪ್ರಾರಂಭಿಸಿದ್ದು, ಕೆಲವು ಪರಿಶೀಲಿಸಿದ ಬಳಕೆದಾರರಿಗೆ ಲಾಭ ನೀಡುತ್ತಿದೆ. ಪ್ರಸ್ತುತದಲ್ಲಿ "Twitch" ಪ್ರಖ್ಯಾತ ಗೇಮ್‌ ಸ್ಟ್ರೀಮಿಂಗ್ ವೇದಿಕೆ ತನ್ನ ಪಾಲುದಾರರಿಗೆ ಸಬ್‌ಸ್ಕ್ರಿಪ್‌ಶನ್‌ ಮತ್ತು ವಾಣಿಜ್ಯ ಮಾರುಕಟ್ಟೆಯಿಂದ ಲಾಭ ಹಂಚುತ್ತಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಲಾಲುಪ್ರಸಾದ್ ಯಾದವ್‌'ರವರ ಫೇಸ್‌ಬುಕ್‌ ಹ್ಯಾಕ್‌ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದ ಲಾಲುಪ್ರಸಾದ್ ಯಾದವ್‌'ರವರ ಫೇಸ್‌ಬುಕ್‌ ಹ್ಯಾಕ್‌

ಪ್ರಪಂಚ ಅಂತ್ಯಗೊಳ್ಳುವುದು ಹೇಗೆ ಗೊತ್ತೇ?ಪ್ರಪಂಚ ಅಂತ್ಯಗೊಳ್ಳುವುದು ಹೇಗೆ ಗೊತ್ತೇ?

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
Facebook might soon let you earn money from your posts. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X