ಫೇಸ್‌ಬುಕ್ ಒಳಗೆ ಬರಲಿದೆ ವಾಟ್ಸ್‌ಆಪ್ ಶಾರ್ಟ್‌ಕಟ್!!
, ಶೀಘ್ರದಲ್ಲಿಯೇ ಫೇಸ್‌ಬುಕ್ ಆಪ್‌ನಲ್ಲಿ ವಾಟ್ಸ್‌ಆಪ್ ಕಾಣಿಸಿಕೊಳ್ಳಬಹುದಾಗಿದೆ.!!
ಜನರ ಸಮಯವನ್ನು ತಾನೆ ನುಂಗಿಹಾಕಲು ಒಂದಿಲ್ಲೊಂದು ಫೀಚರ್ ತರಲುವ ಫೇಸ್‌ಬುಕ್ ಇದೀಗ ಮತ್ತೊಂದು ಬಹುದೊಡ್ಡ ಬದಲಾವಣೆ ತರಲು ಮುಂದಾಗಿದೆ.! ಹೌದು, ತನ್ನದೇ ಒಡೆತನದ ಪ್ರಖ್ಯಾತ ಮೆಸೇಂಜಿಗ್ ಆಪ್ ವಾಟ್ಸ್‌ಆಪ್ ಅನ್ನು ಸಹ ಫೇಸ್‌ಬುಕ್ ಆಪ್‌ನಲ್ಲಿಯೇ ತರಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ.!!
ದಿ ನೆಕ್ಟ್ ವೆಬ್ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿ ಹಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಫೇಸ್‌ಬುಕ್ ಆಪ್‌ನಲ್ಲಿ ಶಾರ್ಟ್‌ಕಟ್ ಆಯ್ಕೆಯಂತೆ ವಾಟ್ಸ್‌ಆಪ್ ಅನ್ನು ಬಳಕೆ ಮಾಡಲಾಗುತ್ತದೆ ಎಂದು ಹೇಳಿವೆ.! ಹಾಗಾಗಿ, ಶೀಘ್ರದಲ್ಲಿಯೇ ಫೇಸ್‌ಬುಕ್ ಆಪ್‌ನಲ್ಲಿ ವಾಟ್ಸ್‌ಆಪ್ ಕಾಣಿಸಿಕೊಳ್ಳಬಹುದಾಗಿದೆ.!!

ಫೇಸ್‌ಬುಕ್ ಈ ಫೀಚರ್ ಅನ್ನು ಟೆಸ್ಟ್ ಮಾಡುತ್ತಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್‌ಬುಕ್ ಆಪ್‌ನಲ್ಲಿ ವಾಟ್ಸ್‌ಆಪ್ ಶಾರ್ಟ್‌ಕಟ್ ಆಯ್ಕೆ ಮೊದಲು ಸಿಗಲಿದೆ ಎನ್ನಲಾಗಿದೆ.!! ಅಚ್ಚರಿ ವಿಷಯ ಎಂದರೆ ಕೆಲ ಬಳಕೆದಾರರು ಸಹ ಈ ಟೆಸ್ಟಿಂಗ್ ಆಯ್ಕೆಯ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.!!

ಜನರ ಸಮಯವನ್ನೆ ತನ್ನ ಬಂಡವಾಳ ಮತ್ತು ಹಣ ಮಾಡಿಕೊಂಡಿರುವ ಫೇಸ್‌ಬುಕ್, ಗ್ರಾಹಕರು ಯಾವಾಗಲೂ ಫೆಸ್‌ಬುಕ್‌ನಲ್ಲಿಯೇ ಕಾಲ ಕಳೆಯುವಂತೆ ಮಾಡಲು ಪ್ರಯತ್ನಿಸಿದೆ.!! ಇದರಿಂದ ಫೇಸ್‌ಬುಕ್ ಮತ್ತು ವಾಟ್ಸ್‌ಆಪ್ ಬಳಕೆದಾರರೀರ್ವರಿಗೂ ಸಹಾಯವಾಗುತ್ತದೆ ಕೂಡ.!!
ಓದಿರಿ: ಏನದು ಬ್ಲೂ ವೇಲ್ ಗೇಮ್?.ನಾನು ಆಡಿ ನೋಡುತ್ತೇನೆ ಎಂದವ ಈಗ ಬೇರೆ ಸಂಕಷ್ಟದಲ್ಲಿ!!


Click it and Unblock the Notifications








