ಸೋಶಿಯಲ್ ಮೀಡಿಯಾ ಹಬ್: ಯೂ ಟರ್ನ್ ಹೊಡೆದ ಕೇಂದ್ರ ಸರ್ಕಾರ!

|

ಸಾಮಾಜಿಕ ಜಾಲತಾಣಗಳಿಗೆ ನಿಯಂತ್ರಣ ಹೇರುವ ಪ್ರಸ್ತಾಪಿತ ಸೋಶಿಯಲ್ ಮೀಡಿಯಾ ಹಬ್ ಅಧಿಸೂಚನೆಯನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಇಂದು ಅಫಿಡವಿಟ್ ಸಲ್ಲಿಸಿದೆ. ಈ ಮೂಲಕ ಜಾಲತಾಣಗಳ ಚಟುವಟಿಕೆಗಳನ್ನು ನಿರ್ವಹಿಸುವ ತನ್ನ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಸರ್ಕಾರ ಯೂ ಟರ್ನ್ ಹೊಡೆದಿದೆ.

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಎದುರು ಕೇಂದ್ರ ಸರ್ಕಾರದ ಪರ ಇಂದು ಹಾಜರಾದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಅಧಿಸೂಚನೆ ಹಿಂಪಡೆಯುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ತದನಂತರ ಕೇಂದ್ರದ ಸೋಶಿಯಲ್ ಮೀಡಿಯಾ ಹಬ್ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಇತ್ಯರ್ಥಗೊಳಿಸಿಸಲಾಗಿದೆ.

ಸೋಶಿಯಲ್ ಮೀಡಿಯಾ ಹಬ್: ಯೂ ಟರ್ನ್ ಹೊಡೆದ ಕೇಂದ್ರ ಸರ್ಕಾರ!

ಸೋಶಿಯಲ್ ಮೀಡಿಯಾ ಹಬ್ ನೀತಿಯನ್ನು ಸರ್ಕಾರ ಸಂಪೂರ್ಣವಾಗಿ ಪುನರ್ ವಿಮರ್ಶಿಸಲಿದೆ ಎಂದು ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ವೇಣುಗೋಪಾಲ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಚಟುವಟಿಕೆಗಳನ್ನು ನಿರ್ವಹಿಸುವ ಉಪಕರಣವಾಗಿ ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಸೋಶಿಯಲ್ ಮೀಡಿಯಾ ಹಬ್ ನೀತಿ, ಸಾಮಾಜಿಕ ಜಾಲತಾಣ ಉಪಯೋಗಿಸುತ್ತಿರುವವರ ಮೇಲೆ ನಿಗಾ ಇಡಲು ಬಳಸಿಕೊಳ್ಳುವ ಹುನ್ನಾರ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಶಾಸಕ ಮಾಹ್ವಾ ಮೊಯಿತ್ರಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಂತರದ ಬೆಳವಣಿಗೆಗಳಲ್ಲಿ ಸರ್ಕಾರ ಇಂದು ಕೋರ್ಟ್‌ಗೆ ಹಾಜರಾಗಿ ಯೂ ಟರ್ನ್ ಹೊಡೆದಿದೆ.

ಸೋಶಿಯಲ್ ಮೀಡಿಯಾ ಹಬ್: ಯೂ ಟರ್ನ್ ಹೊಡೆದ ಕೇಂದ್ರ ಸರ್ಕಾರ!

ಸೋಶಿಯಲ್ ಮೀಡಿಯಾ ಹಬ್ ರಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಪ್ರಸ್ತಾಪದ ಬಗ್ಗೆ ಈ ಮೊದಲು ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿತ್ತು. ಜನರ ವಾಟ್ಸ್‌ಆಪ್ ಸಂದೇಶಗಳನ್ನು ಸಂಗ್ರಹಿಸಲು ಇಂತಹ ಕೇಂದ್ರ ಸ್ಥಾಪಿಸಲಾಗುತ್ತಿದೆಯೇ?, ಕಣ್ಗಾವಲು ರಾಜ್ಯ ನಿರ್ಮಿಸಲಾಗುತ್ತಿದೆಯೇ ಎಂದು ಕೇಳಿ ಸೋಶಿಯಲ್ ಮೀಡಿಯಾ ಹಬ್ ಬಗ್ಗೆ ಪ್ರಶ್ನಿಸಿತ್ತು.

ಓದಿರಿ: 6499 ರೂ.ಗಳಲ್ಲಿ ಇಂತಹ ಫೀಚರ್ಸ್ ಹೊಂದಿರುವ ಏಕೈಕ ಸ್ಮಾರ್ಟ್‌ಪೋನ್ ಇದು!!

Best Mobiles in India

English summary
Govt withdraws ‘social media hub’ plan after SC’s surveillance state remark. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X