Home
Social media

ಹೆಲಿಕಾಪ್ಟರನಲ್ಲಿ ಫುಡ್‌ ಹೋಮ್ ಡೆಲಿವರಿ!.ಅಚ್ಚರಿಯ ವೈರಲ್ ವಿಡಿಯೊ!

ಪ್ರಸ್ತುತ ಆನ್‌ಲೈನ್‌ ಸರ್ವೀಸ್‌ ಹೆಚ್ಚಿನ ಜನಪ್ರಿಯತೆ ಗಳಿಸಿಕೊಳ್ಳುತ್ತಲೇ ಸಾಗಿದ್ದು, ಪ್ರತಿ ವಸ್ತು ಖರೀದಿಗೂ ಆನ್‌ಲೈನ್‌ ಶಾಪಿಂಗ್ ಮೋರೆ ಹೋಗುವಂತಾಗಿದೆ. ಅವುಗಳಲ್ಲಿಗ 'ಫುಡ್‌' ಹೋಮ್ ಡೆಲವರಿ ಆಪ್‌ಗಳು ಮೆಟ್ರೋ ಸಿಟಿಗಳು ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ಭಾರೀ ಡಿಮ್ಯಾಂಡ್ ಪಡೆದುಕೊಳ್ಳುತ್ತಿವೆ. ಆದರೆ ಇಲ್ಲೊಂದು ಫುಡ್‌ ಸರ್ವೀಸ್‌ ಆಪ್‌ ನೀವು ಊಹಿಸಿರದ ರೀತಿಯಲ್ಲಿ ಹೋಮ್‌ ಡೆಲವರಿ ಆರಂಭಿಸಲಿದೆ.

ಹೆಲಿಕಾಪ್ಟರನಲ್ಲಿ ಫುಡ್‌ ಹೋಮ್ ಡೆಲಿವರಿ!.ಅಚ್ಚರಿಯ ವೈರಲ್ ವಿಡಿಯೊ!

ಹೌದು. ಆನ್‌ಲೈನ್‌ ಮೂಲಕ ಫುಡ್‌ ಆರ್ಡರ್‌ ಮಾಡಿದರೇ ಬೈಕ್‌ನಲ್ಲಿ ನಿಮ್ಮ ಫುಡ್‌ ಅನ್ನು ತಂದು ತಲುಪಿಸುವುದು ಕಾಮನ್‌, ಆದರೆ ಮಲೇಷ್ಯಾದಲ್ಲಿರುವ 'ಗ್ರ್ಯಾಬ್‌ಫುಡ್‌' ಹೋಮ್‌ ಡೆಲವರಿ ಸರ್ವೀಸ್‌ನವರು ಹೆಲಿಪೆಟ್ಟರ್ ಮೂಲಕ ಫುಡ್‌ ಡೆಲವರಿ ನೀಡಲು ಮುಂದಾಗಿದ್ದು, ಈ ಸೇವೆ ಇದೇ ಏಪ್ರಿಲ್ 1 ರಂದು (ಇಂದು) ಆರಂಭವಾಗಲಿದೆ ಎನ್ನಲಾಗುತ್ತಿದೆ. ಅಚ್ಚರಿ ಎನಿಸಿದರೇ ಈ ಕೆಳಗೆ ಲಿಂಕ್ ಮಾಡಿರುವ ವಿಡಿಯೊವನ್ನು ಒಮ್ಮೆ ನೋಡಿ.

ಹೆಲಿಕಾಪ್ಟರನಲ್ಲಿ ಫುಡ್‌ ಹೋಮ್ ಡೆಲಿವರಿ!.ಅಚ್ಚರಿಯ ವೈರಲ್ ವಿಡಿಯೊ!

ಗ್ರ್ಯಾಬ್‌ಫುಡ್‌ ಕಾಪ್ಟರ್ ಹೆಸರಿನಿಂದ ಈ ಡೆಲಿವರಿ ಸೇವೆಯನ್ನು ಆರಂಭಿಸಲಿದೆ ಎನ್ನುವ ಕಂಪನಿಯ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್‌ ಆಗಿ ಹರಿದಾಡುತ್ತಿದೆ. ಗ್ರ್ಯಾಬ್‌ಫುಡ್‌ ಹೋಮ್ ಫೇಸ್‌ಬುಕ್‌ನ ಪೇಜ್‌ನಲ್ಲಿಯೂ ಈ ವಿಡಿಯೊ ಶೇರ್ ಮಾಡಿದ್ದು, ಕಂಪನಿಯ ಡೆಲಿವರಿ ಬಾಯ್‌ ಫುಡ್‌ ಅನ್ನು ತೆಗೆದುಕೊಂಡು ಬಂದು ಗ್ರಾಹಕರಿಗೆ ತಲುಪಿಸುವ ಈ ವಿಡಿಯೊ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಹೆಲಿಕಾಪ್ಟರನಲ್ಲಿ ಫುಡ್‌ ಹೋಮ್ ಡೆಲಿವರಿ!.ಅಚ್ಚರಿಯ ವೈರಲ್ ವಿಡಿಯೊ!

ಸಿಂಗಪುರನಲ್ಲಿರುವ ಪ್ರಸಿದ್ಧ ಹೊಟೇಲ್‌ಗಳ ಫುಡ್‌ ಮೆನು ಆಯ್ಕೆ ಕಂಪನಿಯ ಆಪ್‌ನಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಇದರೊಂದಿಗೆ ಮಲೇಷ್ಯಾ ಶೈಲಿಯ ಫುಡ್‌ಗಳನ್ನು ಸಹ ಗ್ರಾಹಕರು ಆನ್‌ಲೈನಿನಲ್ಲಿ ಆರ್ಡರ್‌ ಮಾಡಬಹುದಾಗಿದೆ. ಮಲೇಷ್ಯಾದಲ್ಲಿರುವ ಗ್ರ್ಯಾಬ್‌ಫುಡ್‌ ಸರ್ವೀಸ್ ಕಂಪನಿಯ ಡೆಲಿವರಿ ಬಾಯ್‌ ಹೆಲಿಕಾಪ್ಟರ ಮೂಲಕ ಬಂದು ನಿಮ್ಮ ಆರ್ಡರ್‌ ಅನ್ನು ಪಲುಪಿಸುತ್ತಾರಂತೆ.

ಮಲೇಷ್ಯಾದಲ್ಲಿ ಗ್ರ್ಯಾಬ್‌ಫುಡ್‌ ಹೆಲಿಕಾಪ್ಟರ ಮೂಲಕ ಫುಡ್‌ ಹೋಮ್ ಡೆಲಿವರಿ ಆರಂಭವಾಗಲಿದೆ ಎನ್ನುವ ವೈರಲ್‌ ವಿಡಿಯೋ ನೋಡುಗರನ್ನು ಸಿಕ್ಕಾಪಟ್ಟೆ ನಗಿಸಿದೆ. ಅಂದಹಾಗೇ ನೆನಪಿರಲಿ, ಕಂಪನಿ ಹೆಲಿಕಾಪ್ಟರ ಫುಡ್‌ ಹೋಮ್ ಡೆಲಿವರಿ ಸೇವೆಯನ್ನು ಏಪ್ರಿಲ್ 1 ರಂದು ಆರಂಭಿಸಲಿದೆ ಎಂದಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Best Mobiles in India

English summary
Grab Malaysia is taking its food delivery service to a whole new level by introducing GrabFoodCopter. Yes, a food delivery service via helicopter.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+