ನಿಮ್ಮ ಫೇಸ್‌ಬುಕ್ ಖಾತೆ ಸೇಫ್ ಆಗಿರಲು ಈ ಕ್ರಮಗಳನ್ನು ಮರೆಯದೆ ಅನುಸರಿಸಿ.!
ನೂರಾರು ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾತೆಗಳ ಪಾಸ್‌ವರ್ಡ್ ಹೆಚ್ಚು ಭದ್ರತೆ ಹೊಂದಿಲ್ಲವಾಗಿದ್ದು, ಹ್ಯಾಕರಗಳು ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ ಎಂದು ವರದಿಯೊಂದು ತಿಳಿಸಿದೆ. ಹೀಗಾಗಿ ಅಸುರಕ್ಷಿತ ಪಾಸ್‌ವರ್ಡ್ ಇರುವ ಖಾತೆಗಳು ಹ್ಯಾಕ್ ಆಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದರೆ ಕೆಲವು ಸುರಕ್ಷತೆಯ ಕ್ರಮಗಳನ್ನು ಅನುಸರಿಸುವ ಮೂಲಕ ಹ್ಯಾಕ್ ಆಗುವುದನ್ನು ತಡೆಯಬಹುದು.

ಅಧ್ಯಯನ ತಂಡವೊಂದು ಬಳಕೆದಾರ ಖಾತೆಯ ಸುರಕ್ಷತೆಯ ಬಗ್ಗೆ ಎರಡು ಬ್ಯಾಚ್‌ಗಳಲ್ಲಿ ದಾಖಲೆಗಳನ್ನು ಕಲೆಹಾಕಿದ್ದು, 540 ಮಿಲಿಯನ್‌ಗಿಂತಲೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ಖಾತೆಗಳು ಅಭದ್ರತೆ ಆಗಿವೆ ಎಂದಿದ್ದು, ಬಳಕೆದಾರರ ಹೆಸರು, ಐಡಿ, ಕಮೆಟ್ಸ್, ಲೈಕ್ಸ್ ಗಳ ಮಾಹಿತಿಗಳು ದಾಖಲಿಸಲ್ಪಟ್ಟಿವೆ. ಹಾಗೂ 22000 ಪಾಸ್‌ವರ್ಡ್‌ಗಳು ಅಸುಕ್ಷಿತವಾಗಿದ್ದು, ಸೂಕ್ಷ್ಮ ಮಾಹಿತಿಗಳನ್ನು ಸಹ ಹ್ಯಾಕ್ ಮಾಡಬಹುದಾಗಿದೆ ಎನ್ನುವುದನ್ನು ಪೂಲ್ ಆಪ್ ವರದಿ ತಿಳಿಸಿದೆ.

ದಿನನಿತ್ಯ ಬಳಸುವ ಫೇಸ್‌ಬುಕ್‌ನಲ್ಲಿ ಬಹುತೇಕರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಸಹ ಹಂಚಿಕೊಂಡಿರುತ್ತಾರೆ. ಹೀಗಾಗಿ ಫೇಸ್‌ಬುಕ್ ಖಾತೆಯ ಸುರಕ್ಷತೆಯ ಬಗ್ಗೆ ಜಾಗೃತರಾಗಿರುವುದು ಅಗತ್ಯವಾಗಿದೆ. ಹಾಗಾದರೇ ಫೇಸ್‌ಬುಕ್ ಖಾತೆ ಭದ್ರತೆಗೆ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪಾಸ್‌ವರ್ಡ್ ಕಠಿಣವಾಗಿರಲಿ
ಫೇಸ್‌ಬುಕ್ ಖಾತೆ ಸುರಕ್ಷತೆಗೆ ಪಾಸವರ್ಡ್ ರಕ್ಷಣೆ ಅಗತ್ಯ ಅದಕ್ಕಾಗಿ ನಿಮ್ಮ ಫೇಸ್‌ಬುಕ್ ಪಾಸ್‌ವರ್ಡ್ ಅನ್ನು ಆನ್‌ಲೈನ್ ನಲ್ಲಿ ಎಲ್ಲಿಯು ಬಳಸಬೇಡಿ ಮತ್ತು ಪಾಸವರ್ಡ್ ನಿಮ್ಮೊಬ್ಬರಿಗೆ ಮಾತ್ರ ಗೊತ್ತಿರಲಿ, ಇತರರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಹೆಸರಿನಿಂದ ಪಾಸವರ್ಡ್ ರಚಿಸಬೇಡಿ ಸಾಧ್ಯವಾದಷ್ಟು ಪಾಸವರ್ಡ್ ಕಠಿಣವಾಗಿರಲಿ.

ಹೆಚ್ಚಿನ ಸೆಕ್ಯುರಿಟಿ ಆಯ್ಕೆ ಬಳಸಿ
ಫೇಸಬುಕ್ ಖಾತೆಯ ಸುರಕ್ಷತೆಯಾಗಿಡಲು ಕೇವಲ ಪಾಸವರ್ಡ್ ಬಳಸುವ ಜೊತೆಗೆ ಫೇಸ್‌ಬುಕ್‌ನಲ್ಲಿ ಲಭ್ಯವಿರುವ ಇತರೆ ಹೆಚ್ಚಿನ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿಕೊಳ್ಳುವುದರ ಮೂಲಕ ನಿಮ್ಮ ಖಾತೆಯನ್ನು ಸೇಫ್ ಆಗಿ ಇರಿಸಬಹುದಾಗಿದೆ. ಫೇಸ್‌ಬುಕ್ನ ಫೇಸ್‌ಲಾಕ್ ಆಯ್ಕೆ ಬಳಸಬಹುದು.

ಇಮೇಲ್ ಸೇಫ್ ಆಗಿರಲಿ
ಫೇಸ್‌ಬುಕ್ ಖಾತೆಗೆ ಬಳಸಿರುವ ನಿಮ್ಮ ಇಮೇಲ್ ಹ್ಯಾಕ್ ಆದರೆ, ಆ ಮೂಲಕ ಫೇಸ್‌ಬುಕ್ ಖಾತೆಯು ಅಸುರಕ್ಷತ ಆಗುವ ಸಾಧ್ಯತೆಗಳು ಸಹ ಇರುತ್ತವೆ. ಹೀಗಾಗಿ ಫೇಸ್‌ಬುಕ್ ಖಾತೆಗೆ ಬಳಸಿರುವ ಇಮೇಲ್ ಸುರಕ್ಷಿತವಾಗಿದೆಯಾ ಎಂಬುದನ್ನು ದೃಢಪಡಿಸಿಕೊಳ್ಳುತ್ತಿರಿ. ಆಗಾಗ ಪಾಸವರ್ಡ್ ಬದಲಿಸುತ್ತಿರಿ.

ಲಾಗ್ ಔಟ್ ಮಾಡಿ
ಫೇಸ್‌ಬುಕ್ ಖಾತೆಯನ್ನು ಸ್ಮಾರ್ಟ್‌ಫೋನಿನಲ್ಲಿ ಯಾವಾಗಲೂ ಲಾಗ್‌ಇನ್ ಆಗಿಯೇ ಇರುತ್ತದೆ. ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ನಲ್ಲಿಯೂ ಲಾಗ್‌ಇನ್ ಆಗಿರುತ್ತಿರಿ ಮತ್ತು ಕೆಲವೊಮ್ಮೆ ಇತರರ ಡಿವೈಸ್‌ಗಳಲ್ಲಿಯೂ ಸಹ ಲಾಗ್‌ಇನ್ ಆಗಿರುತ್ತಿರಿ ಆ ವೇಳೆ ಫೇಸ್‌ಬುಕ್ ಖಾತೆಯನ್ನು ಸರಿಯಾಗಿ ಲಾಗ್‌ಔಟ್ ಮಾಡುವುದನ್ನು ಮರೆಯಬಾರದು.

ಆಯಂಟಿ ವೈರಸ್ ಬಳಸಿ
ನೀವು ಫೇಸ್‌ಬುಕ್ ಬಳಸುವ ಡಿವೈಸ್‌ಗಳಲ್ಲಿ ಆಯಂಟಿ ವೈರಸ್ ಇದ್ದರೇ ಉತ್ತಮ. ಇದು ವೈರಸ್‌ಗಳಿಂದ ಮತ್ತು ಹ್ಯಾಕ್ ಆಗುವುದನ್ನು ತಡೆಯಲು ಸಹಕಾರಿಯಾಗಲಿದೆ. ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಡಿವೈಸ್‌ಗಳಿಗೂ ಅತ್ಯುತ್ತಮ ಆಯಂಟಿ ವೈರಸ್ ಇನ್‌ಸ್ಟಾಲ್ ಮಾಡಿಕೊಳ್ಳಿರಿ.

ಡೌನ್‌ಲೋಡ್ ಮಾಡುವಾಗ ಎಚ್ಚರ
ಆನ್‌ಲೈನನಲ್ಲಿ ನೀವೆನಾದರು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವಾಗ ನಿಮ್ಮ ಇಮೇಲ್ ಐಡಿ, ಪಾಸವರ್ಡ್, ಫೇಸ್‌ಬುಕ್ ಐಡಿಗೆ ಲಿಂಕ್ ಮಾಡಿ ಎನ್ನುವ ಆಯ್ಕೆಗಳು ಕಂಡು ಬಂದರೇ ಎಚ್ಚರಿಕೆಯಿಂದ ಮುಂದುವರೆಯಿರಿ. ಇತರೆ ವೆಬ್‌ಸೈಟ್‌ಗಳಲ್ಲಿ ನಿಮ್ಮ ಖಾತೆಯನ್ನು ಲಿಂಕ್ ಮಾಡುವುದು ಅಸುರಕ್ಷಿತ ನಡೆಯಾಗುತ್ತದೆ.


Click it and Unblock the Notifications