ಭಾರತದ ಮೊದಲ 'ಫೇಸ್‌ಬುಕ್ ಲೈವ್' ಆಕ್ಸಿಡೆಂಟ್: ಭೀಕರ ಅಪಘಾತ.!

Written By:

ಅತೀ ವೇಗದ ಚಾಲನೆಯೂ ಜೀವಕ್ಕೆ ಕುತ್ತು ತರಲಿದೆ ಎನ್ನುವುದು ಈ ವಿಡಿಯೋದಿಂದ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಫೇಸ್‌ಬುಕ್ ಲೈವ್ ಭೀಕರ ರಸ್ತೆ ಅಪಘಾತವೊಂದಕ್ಕೆ ಸಾಕ್ಷಿಯಾಗಿದ್ದು, ಮೂವರು ಯುವಕರು ಇಲ್ಲಿ ಪ್ರಾಣ ಬಿಟ್ಟಿದ್ದಾರೆ.

ಭಾರತದ ಮೊದಲ 'ಫೇಸ್‌ಬುಕ್ ಲೈವ್' ಆಕ್ಸಿಡೆಂಟ್: ಭೀಕರ ಅಪಘಾತ.!

ಓದಿರಿ: ನಾಳೆಯೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡಿ: ಇಲ್ಲಾಂದ್ರೆ.?

ಕಾರೊಂದಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಾಗುತ್ತಿದ್ದ ನಾಲ್ವರು ಯುವಕರು ಫೇಸ್‌ಬುಕ್ ಲೈವ್ ಮೂಲಕ ತಾವು ಸಾಗುತ್ತಿರುವ ಹಾದಿಯನ್ನು ಮೊಬೈಲ್ ನಲ್ಲಿ ಬ್ರಾಡ್ ಕಾಸ್ಟ್ ಮಾಡುತ್ತಿದ್ದರು. ಇದಕ್ಕಾಗಿಯೇ ಅತೀವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರೂ ಎನ್ನಲಾಗಿದೆ. ಆದರೆ ದುರದೃಷ್ಟವಶಾತ್ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಓರ್ವ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ದೇಶದ ಮೊದಲ ಫೇಸ್ ಬುಕ್ ಲೈವ್ ಆಕ್ಸಿಡೆಂಟ್ :

ಸದ್ಯ ಭಾರತದಲ್ಲಿ ಆಕ್ಸಿಡೆಂಟ್ ಗೆ ಸಾಕ್ಷಿಯಾದ ಮೊದಲ ಫೇಸ್‌ಬುಕ್ ಲೈವ್ ಎನ್ನುವ ಕುಖ್ಯಾತಿಗೆ ಕಾರಣವಾಗಿರುವ ಈ ವಿಡಿಯೋ ವೈರಲ್ ಆಗಿದೆ. ನಾಲ್ವರು ಯುವಕರು ವೇಗದ ಮೋಜಿಗೆ ಹೋಗಿ ಜೀವ ಬಿಟ್ಟ ವಿಡಿಯೋ ಇದಾಗಿದೆ.

ಶೀನಗರದಲ್ಲಿ ನಡೆದ ಘಟನೆ:

ಶೀನಗರದಲ್ಲಿ ನಡೆದ ಘಟನೆ:

ಈ ಆಕ್ಸಿಡೆಂಟ್ ಶೀ ನಗರದಲ್ಲಿ ನಡೆದಿದೆ ಎನ್ನಲಾಗಿದೆ. ಯುವಕರು ಸಾಗುತ್ತಿದ್ದ ಕಾರು ಮಾರುತಿ 800 ಎಂದು ಗುರುತಿಸಲಾಗಿದ್ದು, ಈ ಕಾರು ಅತೀವೇಗದ ಚಾಲನೆಯ ಕಾರಣ ನಿಯಂತ್ರಣಕ್ಕೆ ಸಿಗದೇ ಡಿವೈಡ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ ಎನ್ನಲಾಗಿದೆ.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಎಚ್ಚರವಾಗಿರಿ:

ಎಚ್ಚರವಾಗಿರಿ:

ಕೇವಲ ಕ್ಷಣಕಾಲದ ಮೋಜಿಗಾಗಿ ಜೀವ ಕಳೆದುಕೊಳ್ಳಲು ಮುಂದಾಗಬೇಡಿ. ಎಚ್ಚರದಿಂದ ವಾಹನ ಚಲಾಯಿಸಿ, ಅಲ್ಲದೇ ವಾಹನ ಚಲಾಯಿಸುವಾಗ ದಯವಿಟ್ಟು ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡಲೇ ಬೇಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The co-driver was doing a “Facebook Live” session while the car was being driven. It shows that none of the occupants, including the driver, were wearing a seat belt. The car was being driven at high-speed with loud music. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot