Home
Social media

ಸ್ನ್ಯಾಪ್‌ಚಾಟ್ ಖರೀದಿಗೆ ಗೂಗಲ್ ಮತ್ತು ಫೇಸ್‌ಬುಕ್ ನಡುವೆ ಬಿಗ್‌ಫೈಟ್!! ಏಕೆ ಗೊತ್ತಾ?

300 ಕೋಟಿ ಡಾಲರ್ ಆಫರ್ ನೀಡಿದ್ದ ಫೇಸ್‌ಬುಕ್‌ಗೆ ಸೆಡ್ಡು ಹೊಡೆದಿರುವ ಗೂಗಲ್ ಇದೀಗ ಸ್ನ್ಯಾಪ್‌ಚಾಟ್‌ ಖರೀದಿಸಲು 3000 ಕೋಟಿ ಆಫರ್ ನೀಡಿದೆ.!!

By Bhaskar N J

2011ರಲ್ಲಿ ಮಾರುಕಟ್ಟೆ ಪ್ರವೇಶಿಸಿರುವ 'ಸ್ನ್ಯಾಪ್‌ಚಾಟ್‌' ಬಳಕೆದಾರರ ದೃಷ್ಟಿಯಿಂದ ಫೇಸ್‌ಬುಕ್‌ನಷ್ಟು ದೊಡ್ಡದಲ್ಲದಿದ್ದರೂ ಅತ್ಯಂತ ಕಡಿಮೆ ಅವಧಿಯಲ್ಲೇ 16 ಕೋಟಿ ಬಳಕೆದಾರರನ್ನು ಸಂಪಾದಿಸಿದ ಹೆಗ್ಗಳಿಕೆ ಹೊಂದಿದೆ. ಹಾಗಾಗಿಯೇ, ಇದೀಗ ದೊಡ್ಡ ದೊಡ್ಡ ಕಂಪೆನಿಗಳು ಸ್ನ್ಯಾಪ್‌ಚಾಟ್‌ ಖರೀದಿಸಲು ಭಾರಿ ಪೈಪೋಟಿಯನ್ನು ನೀಡುತ್ತಿವೆ.!!

ಹೌದು, ಸ್ನ್ಯಾಪ್‌ಚಾಟ್‌ ಖರೀದಿಸಲು ಈ ಮೊದಲು 300 ಕೋಟಿ ಡಾಲರ್ ಆಫರ್ ನೀಡಿದ್ದ ಫೇಸ್‌ಬುಕ್‌ಗೆ ಸೆಡ್ಡು ಹೊಡೆದಿರುವ ಗೂಗಲ್ ಇದೀಗ ಸ್ನ್ಯಾಪ್‌ಚಾಟ್‌ ಖರೀದಿಸಲು 3000 ಕೋಟಿ ಆಫರ್ ನೀಡಿದೆ.!! ಮಾತುಕತೆ ಕೊನೆಯ ಹಂತದಲ್ಲಿದ್ದು, ಸ್ನ್ಯಾಪ್‌ಚಾಟ್‌ ಗೂಗಲ್ ತೆಕ್ಕೆಗೆ ಬೀಳುವ ಸಾಧ್ಯತೆ ಇದೆ.! ಹಾಗಾದರೆ, ಸ್ನ್ಯಾಪ್‌ಚಾಟ್‌ ಖರೀದಿಸಲು ಈ ಎರಡು ಕಂಪೆನಿಗಳು ಪೈಪೋಟಿ ಹೊಂದಿರುವುದೇಕೆ? ಸ್ನ್ಯಾಪ್‌ಚಾಟ್‌ ಏಕೆ ವಿಭಿನ್ನ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇದು ಪ್ರಾಡೆಕ್ಟ್ ಬ್ಯುಸಿನೆಸ್!!

ಇದು ಪ್ರಾಡೆಕ್ಟ್ ಬ್ಯುಸಿನೆಸ್!!

ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವ ಕಂಪೆನಿ ಪ್ರಾಡೆಕ್ಟ್ ಹೆಚ್ಚು ಫೀಚರ್ಸ್ ಹೊಂದಿರುತ್ತದೆ. ಯಾವ ಕಂಪೆನಿ ಅಭಿವೃದ್ಧಿಪಡಿಸಿದ ವಿನ್ಯಾಸಗಳು ಅಥವಾ ಪ್ರೋಗ್ರಾಂಗಳು ಹೆಚ್ಚು ಹೆಸರಾಗಿರುತ್ತವೆ. ಅವುಗಳಿಗೆ ಬೆಲೆ ಜಾಸ್ತಿ.! ಹಾಗಾಗಿಯೇ ಗೂಗಲ್, ಫೇಸ್‌ಬುಕ್ ಕಂಪೆನಿಗಳು ಇಂದು ಸ್ನ್ಯಾಪ್‌ಚಾಟ್‌ ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ.!!

‘ಸ್ನ್ಯಾಪ್‌ಚಾಟ್‌’ಗೆ ಏಕಿಷ್ಟು ಬೇಡಿಕೆ.!!

‘ಸ್ನ್ಯಾಪ್‌ಚಾಟ್‌’ಗೆ ಏಕಿಷ್ಟು ಬೇಡಿಕೆ.!!

ಸದಾ ಹೊಸತನವನ್ನು ಬಯಸುವ ಗ್ರಾಹಕರಿಗೆ ಸ್ನ್ಯಾಪ್‌ಚಾಟ್‌ ಉತ್ತಮ ಸೇವೆಯನ್ನು ನೀಡಿ ಹೆಸರಾಗುತ್ತಿದೆ.!! ಭವಿಷ್ಯದಲ್ಲಿ ವಾಟ್ಸ್‌ಆಪ್‌ಗೆ ಸೆಡ್ಡುಹೊಡೆಯುವ ಏಕೈಕ ಮೆಸೇಂಜರ್ ಆಪ್ ಎಂದು ಈ ಆಪ್ ಹೆಸರು ಮಾಡಿದ್ದು, ಹಾಗಾಗಿ, ಸ್ನ್ಯಾಪ್‌ಚಾಟ್‌ ಆಪ್‌ಗೆ ಭಾರಿ ಬೇಡಿಕೆ ಇದೆ.!!

ಇದು ಗ್ರೇಟ್ ಇಂಡಿಯನ್‌ ಅಮೇಜಾನ್ ಸೇಲ್!!..ಏನೆಲ್ಲಾ ಆಫರ್?
ಗೂಗಲ್ VS ಫೇಸ್‌ಬುಕ್!!

ಗೂಗಲ್ VS ಫೇಸ್‌ಬುಕ್!!

ವಾಟ್ಸ್‌ಆಪ್‌ನಂತಹ ಬಹುದೊಡ್ಡ ಮೆಸೇಂಜಿಂಗ್ ಆಪ್ ಫೇಸ್‌ಬುಕ್ ಒಡೆನದಲ್ಲಿದ್ದರೂ ಸ್ನ್ಯಾಪ್‌ಚಾಟ್‌ ಖರೀದಿಸಲು ಫೇಸ್‌ಬುಕ್ ಮುಂದಾಗಿದೆ.! ತನ್ನ ಪ್ರತಿಸ್ಪರ್ಧಿಗಳನ್ನು ಹಣಿಸಲು ಶ್ರೀಮಂತ ಸಂಸ್ಥೆ ಫೇಸ್‌ಬುಕ್‌ಗೆ ಇದೇ ದಾರಿ ಉತ್ತಮ.! ಆದರೆ, ಸರ್ಚ್ ಎಂಜಿನ್ ದೈತ್ಯ ಗೂಗಲ್‌ ಫೇಸ್‌ಬುಕ್‌ಗೆ ಸೆಡ್ಡುಹೊಡೆಯಲು ಸ್ನ್ಯಾಪ್‌ಚಾಟ್‌ ಖರೀದಿಸಿ ಬೆಳೆಸುವ ಹುಮ್ಮಸಿನಲ್ಲಿದೆ.!!

ಖರೀದಿಗೆ ಏಕಿಷ್ಟು ಒಲವು?

ಖರೀದಿಗೆ ಏಕಿಷ್ಟು ಒಲವು?

ಮಾರುಕಟ್ಟೆ ವಿಸ್ತರಿಸಲು ಹೊಸ ಸೌಲಭ್ಯ, ಪ್ರೋಗ್ರಾಂಗಳನ್ನು ಅಭಿವೃದ್ಧಿಪಡಿಸುವುದಕ್ಕಿಂತ ಮತ್ತು ಅದಕ್ಕಾಗಿ ಭಾರಿ ಬಂಡವಾಳ ಸುರಿಯುವುದಕ್ಕಿಂತಲೂ, ಇನ್ನೊಬ್ಬರ ಬಳಿ ಇರುವ ತಂತ್ರಜ್ಞಾನ ಅಥವಾ ಸೌಲಭ್ಯವನ್ನು ತನ್ನ ಬಳಿಯೂ ಹೊಂದುವುದು ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ಅಷ್ಟೇ ಮುಖ್ಯ ಎನ್ನುವುದನ್ನು ದೊಡ್ಡ ಕಂಪೆನಿಗಳು ಕಂಡುಕೊಂಡಿದೆ.

ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್ ಖರೀದಿ ಆಗಿದ್ದು ಇದಕ್ಕೆ.!!

ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್ ಖರೀದಿ ಆಗಿದ್ದು ಇದಕ್ಕೆ.!!

ಇವತ್ತು ಫೇಸ್‌ಬುಕ್ ಒಡೆತನದಲ್ಲಿ ಬೆಳೆದುನಿಂತಿರುವ ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್ ಆಪ್‌ಗಳೂ ಕೂಡ ಫೇಸ್‌ಬುಕ್ ಬಲೆಯಲ್ಲಿ ಬಿದ್ದದ್ದು ಹೀಗೆ.!! ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್ ಆಪ್‌ಗಳು ಜನಪ್ರಿಯ ಉತ್ತುಂಗಕ್ಕೆ ಏರಿದ ಸಮಯದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಬಲವಾಗಿ ಬೇರೂರಲು ಮತ್ತು ಪ್ರತಿಸ್ಪರ್ಧಿಗಳು ತಲೆಎತ್ತದಂತೆ ಮಾಡಲು ಫೇಸ್‌ಬುಕ್‌ ಸ್ಥಾಪಕ ಜುಕರ್‌ಬರ್ಗ್ ಮಾಡಿದ ಪ್ಲಾನ್ ಇದು.!!

ಸ್ನ್ಯಾಪ್‌ಚಾಟ್‌ ವಿಶೇಷತೆ ಏನು?

ಸ್ನ್ಯಾಪ್‌ಚಾಟ್‌ ವಿಶೇಷತೆ ಏನು?

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಗಳು ಹುಟ್ಟುಹಾಕಿದ ಸ್ನ್ಯಾಪ್‌ಚಾಟ್‌ ಚಿತ್ರಗಳ ಮೂಲಕ ನಡೆಸುವ ಸಂವಹನಕ್ಕೆ ಹೆಸರುವಾಸಿಯಾಗಿದೆ. ಮೈ ಸ್ಟೋರಿ' ಮತ್ತು ‘ಡಿಸ್ಕವರ್‌' ಎಂಬ ಸೌಲಭ್ಯಕ್ಕೆ ಯುವಜನತೆ ಮಾರುಹೋಗಿದ್ದು, ಆಗ್ಮಟೆಡ್‌ ರಿಯಾಲಿಟಿ ಆಧರಿಸಿದ ಹೊಸ ತಂತ್ರಜ್ಞಾನವನ್ನೂ ಪರಿಚಯಿಸಿದೆ.!!

ಕಳ್ಳತನದ ಆರೋಪ ಫೇಸ್‌ಬುಕ್‌ ಮೇಲೆ!!

ಕಳ್ಳತನದ ಆರೋಪ ಫೇಸ್‌ಬುಕ್‌ ಮೇಲೆ!!

‘ಸ್ನ್ಯಾಪ್‌ಚಾಟ್‌' ವಿಡಿಯೊ ಮೆಸೇಜಿಂಗ್‌ ಮೊಬೈಲ್‌ ಅಪ್ಲಿಕೇಷನ್‌ನಲ್ಲಿರುವ ‘ಲೈವ್‌ ಸ್ಟೋರಿ' ಸೌಲಭ್ಯವನ್ನು ಫೇಸ್‌ಬುಕ್‌ ತನ್ನ ಮೊಬೈಲ್‌ ಮೆಸೆಂಜರ್‌ ಅಪ್ಲಿಕೇಷನ್‌ನಲ್ಲೂ ಯಥಾವತ್ತಾಗಿ ಅಳವಡಿಸಿಕೊಂಡಿದೆ. ಸ್ನ್ಯಾಪ್‌ಚಾಟ್‌ನಿಂದ ಹಲವು ಸೌಲಭ್ಯವನ್ನು ಫೇಸ್‌ಬುಕ್ ನಕಲು ಮಾಡಿರುವುದು ಸ್ಪಷ್ಟವಾಗಿದೆ.!!

ಓದಿರಿ:ಭಾರತದ ಟಾಪ್ 10 ಶ್ರೀಮಂತರು ಯಾರು?..ಅವರ ಆಸ್ತಿ ಎಷ್ಟು ಗೊತ್ತಾ? ಇಲ್ಲಿ ನೋಡಿ!!

Best Mobiles in India

English summary
Snap spokesperson told Business Insider that, as far as formal discussions go, "these rumors are false." Google declined to comment.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+