Home
Social media

ಬ್ಲೂ ವೇಲ್ ಮಾದರಿಯಲ್ಲಿ ಟ್ವಿಟರ್ ಕಿಲ್ಲರ್: ಆತ್ಮಹತ್ಯೆಗೆ ಪ್ರಚೋದನೆ ಮಾಡುವುದು ಇತನ ಕಾರ್ಯ...!

By Srinidhi

ಸಾಮಾಜಿಕ ಜಾಲತಾಣಗಳು ವಿನೋದಕ್ಕೆ, ಸಮಯ ಕಳೆಯುವುದಕ್ಕೆ, ಕಾಲುಎಳೆಯುವುದಕ್ಕೆ, ತೆಗಳುವುದಕ್ಕೆ, ಹೋಗಳುವುದಕ್ಕೆ, ಸಂತೋಷ-ದುಃಖ ಹಂಚಿಕೊಳ್ಳುವುದಕ್ಕೆ ಸೇರಿದಂತೆ ಹಲವು ವಿಷಯಗಳನ್ನು ಶೇರ್ ಮಾಡಿಕೊಳ್ಳಲು ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚು ಅನ್ನಬಹುದು. ಆದರೆ ಇಲ್ಲೋಬ್ಬ ವಿಚಿತ್ರ ವ್ಯಕ್ತಿಯೂ ಟ್ವಿಟರ್‌ನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದಾನೆ ಎನ್ನಲಾಗಿದೆ.

ಬ್ಲೂ ವೇಲ್ ಮಾದರಿಯಲ್ಲಿ ಟ್ವಿಟರ್ ಕಿಲ್ಲರ್

ಓದಿರಿ: ಮತ್ತೊಂದು ಸ್ಪೋಟಕ ಸುದ್ದಿ: ಜಿಯೋ ಉಚಿತ ಆಂಡ್ರಾಯ್ಡ್‌ಫೋನ್ ತಯಾರಿಕೆ ಆರಂಭ..! ಬಿಡುಗಡೆ ದಿನಾಂಕ ಫಿಕ್ಸ್..!

ಜಪಾನಿನಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ಪ್ರಯೋದನೆ ಮಾಡಿದ್ದ ತಕಹಿರೊ ಶಿರೈಶಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಟ್ವಿಟರ್ ಮೂಲಕ ಹಲವು ಮಂದಿಗೆ ಆತ್ಮಹತ್ಯೆಗೆ ಪ್ರಚೋದಿಸುತ್ತಿದ್ದ ಎಂದು ತಿಳಿದು ಬಂದಿದೆ.

 ಬ್ಲೂ ವೇಲ್ ಮಾದರಿ:

ಬ್ಲೂ ವೇಲ್ ಮಾದರಿ:

ಕುಖ್ಯಾತ ಗೇಮ್ ಬ್ಲೂ ವೇಲ್ ಮಾದರಿಯಲ್ಲಿ ಈತ ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಯೋದನೆ ಮಾಡುತ್ತಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಸಹಕಾರ:

ಆತ್ಮಹತ್ಯೆಗೆ ಸಹಕಾರ:

ಸೋಶಿಯಲ್ ಮೀಡಿಯಾದಲ್ಲಿ ಆತ್ಮಹತ್ಯಗೆ ಶರಣಾಗುವುದಾಗಿ ಸ್ಟೆಟಸ್ ಹಾಕಿದ್ದ ಯುವತಿಗೆ ಆತ್ಮಹತ್ಯೆಗೆ ಸಹಕರಿಸುವುದಾಗಿ ತಿಳಿಸಿದ್ದ ಎನ್ನಲಾಗಿದ್ದು, ಈ ಸಂಬಂಧ ವಿಚಾರಣೆ ನಡೆಸಿದಾಗ ಇದುವರೆಗೂ ಹಲವಾರು ಮಂದಿ ಆತ್ಮಹತ್ಯೆಗೆ ಶರಣಾಗಲು ಪ್ರಚೋದಕನಾಗಿದ್ದ ಎನ್ನಲಾಗಿದೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಯುವಕರೇ ಟಾರ್ಗೇಟ್:

ಯುವಕರೇ ಟಾರ್ಗೇಟ್:

ಸುಮಾರು 15ರಿಂದ 26 ವರ್ಷ ವಯಸ್ಸಿನೊಳಗಿನ ಯುವ ವಯಸ್ಕರನ್ನು ಟ್ವಿಟರ್‌ ಮೂಲಕ ಸೆಳೆದು ಆತ್ಮಹತ್ಯೆಗೆ ಸಹಕರಿಸುವುದಾಗಿ ಪ್ರಯೋದಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದ ಎನ್ನಲಾಗಿದೆ.

20 ಸಾವಿರ ಮಂದಿ ಆತ್ಮಹತ್ಯೆ:

20 ಸಾವಿರ ಮಂದಿ ಆತ್ಮಹತ್ಯೆ:

ಈಗಾಗಲೇ ಜಪಾನ್‌ನಲ್ಲಿ ಆತ್ಮ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಆತ್ಮಹತ್ಯೆ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜಪಾನ್‌ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಜಪಾನ್‌ನಲ್ಲಿ ಪ್ರತಿವರ್ಷ 20 ಸಾವಿರಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Best Mobiles in India

English summary
Japan's 'Twitter killer': Serial killer. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+