ಮತ್ತೊಂದು ಸ್ಪೋಟಕ ಸುದ್ದಿ: ಜಿಯೋ ಉಚಿತ ಆಂಡ್ರಾಯ್ಡ್‌ಫೋನ್ ತಯಾರಿಕೆ ಆರಂಭ..! ಬಿಡುಗಡೆ ದಿನಾಂಕ ಫಿಕ್ಸ್..!

Written By:

ಜಿಯೋ ಈಗಾಗಲೇ ಉಚಿತವಾಗಿ 4G ಫೀಚರ್ ಫೋನ್ ಜಿಯೋ ಫೋನ್‌ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವುದು ತಿಳಿದಿರುವ ವಿಚಾರ. ಗುಣಮಟ್ಟ ಮತ್ತು ಆಯ್ಕೆಗಳ ವಿಚಾರದಲ್ಲಿ ಸ್ಮಾರ್ಟ್‌ಫೋನ್ ನಾಚಿಸುವಂತಿದ್ದ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಬಿಸಿ ದೊಸೆಯಂತೆ ಸೇಲ್ ಆಗಿತ್ತು. ಈ ಹಿನ್ನಲೆಯಲ್ಲಿ ಮತ್ತೇ ಜಿಯೋ ಫೋನ್ ಬಿಡುಗಡೆ ಮಾಡುವ ಬದಲು ಮುಖೇಶ್ ಅಂಬಾನಿ ಮತ್ತೊಂದು ಪ್ಲಾನ್ ಮಾಡಿದ್ದಾರೆ.

ಮತ್ತೊಂದು ಸ್ಪೋಟಕ ಸುದ್ದಿ: ಜಿಯೋ ಉಚಿತ ಆಂಡ್ರಾಯ್ಡ್‌ಫೋನ್ ತಯಾರಿಕೆ ಆರಂಭ..!

ಓದಿರಿ: ಟಾಪ್ 3 ಸೂಪರ್ ಕಂಪ್ಯೂಟರ್‌ಗಳಲ್ಲಿ ಅಮೆರಿಕಗೆ ಸ್ಥಾನವಿಲ್ಲ: ಪ್ರಥಮ ಸ್ಥಾನ ಏಪ್ಯಾಗೆ, ಯಾವ ದೇಶ ಗೊತ್ತಾ..?

ಈಗಾಗಲೇ ಜಿಯೋ ಉಚಿತವಾಗಿ ಆಂಡ್ರಾಯ್ಡ್‌ಫೋನ್‌ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಈಗಾಗಲೇ ತಿಳಿಸಲಾಗಿತ್ತು. ಆದರೆ ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಜಿಯೋ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಅಧಿಕೃತವಾಗಿ ತಯಾರಿಕೆಯನ್ನು ಆರಂಭಿಸಿದ್ದು, ಜನವರಿ 26 ರಂದು ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
10 ಮಿಲಿಯನ್‌ ಸ್ಮಾರ್ಟ್‌ಫೋನ್ ತಯಾರಿಕೆ:

10 ಮಿಲಿಯನ್‌ ಸ್ಮಾರ್ಟ್‌ಫೋನ್ ತಯಾರಿಕೆ:

ಈಗಾಗಲೇ 10 ಮಿಲಿಯನ್ ಜಿಯೋ ಸ್ಮಾರ್ಟ್‌ಫೋನ್ ತಯಾರಿಕೆ ಆರಂಭವಾಗಿದ್ದು, ಡಿಸೆಂಬರ್ ಮಧ್ಯದ ವೇಳೆಗೆ ಭಾರತಕ್ಕೆ ಆಗಮಿಸಲಿದ್ದು, ಜನವರಿ ಮದ್ಯಭಾಗದಲ್ಲಿ ಬಿಡುಗಡೆಗೊಂಡು ಮಾರಾಟವಾಗಲಿದೆ ಎನ್ನಲಾಗಿದೆ.

ಸೆಪೆರ್ಡಮ್ ಕಂಪನಿ ತಯಾರಿಕೆ:

ಸೆಪೆರ್ಡಮ್ ಕಂಪನಿ ತಯಾರಿಕೆ:

ಜಿಯೋ ಸ್ಮಾರ್ಟ್‌ಫೋನ್ ಗಳನ್ನು ಪ್ರೋಸೆಸರ್ ತಯಾರಿಕೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಸೆಪೆರ್ಡಮ್ ಕಂಪನಿ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಸ್ವತಃ ಕಂಪನಿಯ ಮಾಲೀಕರೇ ಈ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಏರ್‌ಟೆಲ್ ವಿರುದ್ಧವಾಗಿ:

ಏರ್‌ಟೆಲ್ ವಿರುದ್ಧವಾಗಿ:

ಜಿಯೋ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ನಂತರದಲ್ಲಿ ಏರ್‌ಟೆಲ್ ಕಡಿಮೆ ಬೆಲೆಗೆ ವಿವಿಧ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಸ್ಮಾರ್ಟ್‌ಫೋನ್‌ಗಳನ್ನು ಅತೀ ಕಡಿಮೆ ಬೆಲೆಗೆ ಬಿಡುಗಡೆ ಮಾಡಿತ್ತು. ಇದಕ್ಕೆ ಎದುರಾಗಿ ಜಿಯೋ ಉಚಿತ ಫೋನ್ ನೀಡಲಿದೆ.

ಉತ್ತಮ ಗುಣಮಟ್ಟ:

ಉತ್ತಮ ಗುಣಮಟ್ಟ:

ಜಿಯೋ ಫೋನ್‌ ನಂತರ ದಲ್ಲಿ ಕಾಣಿಸಿಕೊಳ್ಳುತ್ತಿರುವ ಜಿಯೋ ಸ್ಮಾರ್ಟ್‌ಫೋನ್ ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಉತ್ತಮವಾದ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಅತೀ ಕಡಿಮೆ ಠೇವಣಿ:

ಅತೀ ಕಡಿಮೆ ಠೇವಣಿ:

ಜಿಯೋ ಫೋನ್ ಮಾದರಿಯಲ್ಲಿ ಜಿಯೋ ಆಂಡ್ರಾಯ್ಡ್ ಪೋನಿಗೂ ಗ್ರಾಹಕರು ಕಡಿಮೆ ಮೊತ್ತದ ಹಣವನ್ನು ಠೇವಣಿ ಇರಿಸಬೇಕಾಗಿದೆ. ನಂತರ ಇದನ್ನು ಹಿಂಪಡೆಯಬಹುದು, ಇಲ್ಲವೇ ಕ್ಯಾಷ್ ಬ್ಯಾಕ್ ಆಫರ್ ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Working on an Entry-Level 4G Smartphone. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot