Home
Social media

ಪ್ರಂಪಚದಲ್ಲೇ ಹೆಚ್ಚು ಬಳಸುವ ಸೋಶಿಯಲ್ ಮೀಡಿಯಾ ಯಾವುದು ಗೊತ್ತಾ? ವಾಟ್ಸ್‌ಆಪ್‌ಗೆ ಮೂರನೇ ಸ್ಥಾನ..!

By Srinidhi

ಇಂದು ಸಾಮಾಜಿಕ ಜಾಲತಾಣಗಳು ಜಾಗತಿಕವಾಗಿ ತಮ್ಮ ಪ್ರಭಾವವನ್ನು ಹೊಂದಿದ್ದು, ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ಬೆಳೆದುನಿಂತಿದೆ. ಇಂಟರ್‌ನೆಟ್ ಬಳಕೆಯ ಬಗ್ಗೆ ಅರಿವಿದ್ದ ಪ್ರತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಯನ್ನು ಹೊಂದಿರುತ್ತಾರೆ ಎನ್ನುವುದು ತಿಳಿದಿರುವ ವಿಚಾರ.

ಹೆಚ್ಚು ಬಳಸುವ ಸೋಶಿಯಲ್ ಮೀಡಿಯಾ ಯಾವುದು ಗೊತ್ತಾ? ವಾಟ್ಸ್‌ಆಪ್‌ಗೆ ಮೂರನೇ ಸ್ಥಾನ..

ಈ ಹಿನ್ನಲೆಯಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಯಾವುದು, ಅದರ ಬಳಕೆದಾರರ ಸಂಖ್ಯೆ ಎಷ್ಟು ಎನ್ನುವ ಮಾಹಿತಿಯನ್ನು ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ. ಈ ಸಾಮಾಜಿಕ ಜಾಲತಾಣಗಳಲ್ಲಿ ಕಡೆ ಪಕ್ಷ ಐದನ್ನು ಈಗಲು ನೀವು ಬಳಸುತ್ತಿರುತ್ತೀರಾ ಎನ್ನಲಾಗಿದೆ.

6ನೇ ಸ್ಥಾನದಲ್ಲಿ ಇಸ್ಟಾಗ್ರಾಮ್:

6ನೇ ಸ್ಥಾನದಲ್ಲಿ ಇಸ್ಟಾಗ್ರಾಮ್:

ಅತೀ ಹೆಚ್ಚು ಮಂದಿ ಫೋಟೋ ಶೇರಿಂಗ್ ಗಾಗಿ ಬಳಕೆ ಮಾಡಿಕೊಳ್ಳುತ್ತಿರುವ ಆಪ್ ಇದಾಗಿದ್ದು, 813 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ವಿಚಾಟ್‌ಗೆ 5ನೇ ಸ್ಥಾನ:

ವಿಚಾಟ್‌ಗೆ 5ನೇ ಸ್ಥಾನ:

ಚೀನಾದ ವಾಟ್ಸ್‌ಆಪ್ ಎನ್ನಲಾಗಿರುವ ವಿಚಾಟ್ ಮಾರುಕಟ್ಟೆಯಲ್ಲಿ 980 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಅತೀ ಹೆಚ್ಚು ಬಳಕೆದಾರರು ಚೀನಾದವರಾಗಿದ್ದಾರೆ.

4ನೇ ಸ್ಥಾನದಲ್ಲಿ ಫೇಸ್ ಬುಕ್ ಮೆಸೆಂಜರ್:

4ನೇ ಸ್ಥಾನದಲ್ಲಿ ಫೇಸ್ ಬುಕ್ ಮೆಸೆಂಜರ್:

ಇದಲ್ಲದೇ 4ನೇ ಸ್ಥಾನದಲ್ಲಿ ಫೇಸ್‌ಬುಕ್ ಮೆಸೆಂಜರ್ ಕಾಣಿಸಿಕೊಂಡಿದ್ದು, ಸುಮಾರು 1.3 ಬಿಲಿಯನ್ ಬಳಕೆದಾರರು ಈ ಫೇಸ್ ಬುಕ್ ಮೆಸೆಂಜರ್ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ವಾಟ್ಸ್‌ಆಪ್ ಮೂರನೇ ಸ್ಥಾನದಲ್ಲಿ:

ವಾಟ್ಸ್‌ಆಪ್ ಮೂರನೇ ಸ್ಥಾನದಲ್ಲಿ:

ವಾಟ್ಸ್‌ಆಪ್ ಇಲ್ಲದ ಸ್ಮಾರ್ಟ್‌ಫೋನ್ ಇಲ್ಲ ಎನ್ನಬಹುದಾಗಿದ್ದು, ವಿಶ್ವದಲ್ಲಿ 1.5 ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

2ನೇ ಸ್ಥಾನದಲ್ಲಿ ಯೂಟ್ಯೂಬ್;

2ನೇ ಸ್ಥಾನದಲ್ಲಿ ಯೂಟ್ಯೂಬ್;

ಅತೀ ಹೆಚ್ಚು ಮಂದಿ ವಿಡಿಯೋ ನೋಡುವ ಸಲುವಾಗಿ ಬಳಕೆ ಮಾಡುವ ತಾಣ ಇದ್ದಾಗಿದ್ದು, 1.5 ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಜಾಲತಾಣಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ನಂಬರ್ ಒನ್ ಫೇಸ್‌ಬುಕ್:

ನಂಬರ್ ಒನ್ ಫೇಸ್‌ಬುಕ್:

ಹೇಳುವುದೇ ಬೇಡ. ವಿಶ್ವದ ನಂಬರ್ ಒನ್ ಸಾಮಾಜಿಕ ಜಾಲತಾಣದಲ್ಲಿ ಫೇಸ್‌ಬುಕ್ಕಿಗೆ ಮೊದಲ ಸ್ಥಾನವು ದೊರೆತ್ತಿದ್ದು, ವಿಶ್ವದಾದ್ಯಂತ ಸುಮಾರು 2.2 ಬಿಲಿಯನ್ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.

ಓದಿರಿ: ಹೊಸ ಸ್ಮಾರ್ಟ್‌ಫೋನಿನಲ್ಲಿ FB- ವಾಟ್ಸ್‌ಆಪ್‌ಗೂ ಮುನ್ನ ಇನ್‌ಸ್ಟಾಲ್ ಮಾಡಲೇಬೇಕಾದ ಆಪ್‌ಗಳು..!

Best Mobiles in India

English summary
Most popular social networks worldwide. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+