ಸಣ್ಣ ಪ್ಲಾಸ್ಟಿಕ್ ಕವರ್‌ನಿಂದ ಇಷ್ಟೆಲ್ಲ: ವೈರಲ್ ಫೋಟೋ ನೋಡಿದ್ರೆ ಕಣ್ಣಲ್ಲಿ ನೀರು..!
ಇಂದು ಇಂಟರ್ನೆಟ್ ಅನ್ನು ಜಾಲಾಡಿದರೆ ಹಲವು ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ. ಇದೇ ಮಾದರಿಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹಲವು ವಿಚಾರಗಳು ವೈರಲ್ ಆಗುತ್ತವೆ. ಇದೇ ಮಾದರಿಯಲ್ಲಿ ಸದ್ಯ ಪ್ಲಾಸ್ಟಿಕ್ ನಿಂದ ಉಂಟಾಗುತ್ತಿರುವ ಘೋರ ಪರಿಣಾಮವಗಳನ್ನು ಮನಮುಟ್ಟುವಂತೆ ತೋರಿಸುವ ಪೋಟೋಗಳು ಆನ್‌ಲೈನಿನಲ್ಲಿ ವೈರಲ್ ಆಗುತ್ತಿದೆ. ಈ ಕುರಿತ ಮಾಹಿತಿ ಮುಂದಿದೆ.

ಓದಿರಿ: ಟೆಲಿಕಾಂಗೆ ಶಾಕ್ ಕೊಟ್ಟ ಜಿಯೋ: ಮತ್ತೆ ಮೂರು ತಿಂಗಳು ಉಚಿತ ಸೇವೆ...!
ನಾವು ಎಸೆಯುವ ಒಂದು ಸಣ್ಣ ಪ್ಲಾಸ್ಟಿಕ್ ಕವರ್ ಪ್ರಾಣಿ-ಪಕ್ಷಿಗಳ ಪ್ರಾಣಕ್ಕೆ ಹೇಗೆ ತೊಂದರೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಈ ಫೋಟೋಗಳಲ್ಲಿ ಸೆರೆಹಿಡಿಯಲಾಗಿದೆ. ಇವುಗಳನ್ನು ಒಮ್ಮೆಯಾದರು ನೋಡಿದರೆ ನಾಳೆಯಿಂದ ನೀವು ಎಲ್ಲೆಂದರೆ ಅಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ಮಾಡುವುದಿಲ್ಲ. ಹೆಚ್ಚಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವುದಿಲ್ಲ.

ಪ್ಲಾಸ್ಟಿಕ್ ಸುತ್ತಕೊಂಡ ಕೊಕ್ಕರೆ:
ಪಾಪಾ ಈ ಕೊಕ್ಕರೆ ಸ್ಥಿತಿ ನೋಡಿ, ತಾನು ಮಾಡದ ತಪ್ಪಿಗೆ ಬಲಿಯಾಗಿದೆ, ಸುತ್ತಿಕೊಂಡಿರುವ ಕವರ್ ಅನ್ನು ತೆಗೆಯಲಾಗದ ಪರಿಸ್ಥಿತಿ ಇಲ್ಲಿದೆ.

ಅರ್ಧಕ್ಕೆ ಸಿಕ್ಕಿಕೊಂಡ ಆಮೆ:
ಭಾರೀ ಗಾತ್ರಕ್ಕೆ ಬೆಳೆಯಬೇಕಿದ ಅಮೆಯ ಸ್ಥಿತಿ ನೋಡಿ ಹೇಗಿದೆ. ಇದಕ್ಕೆ ಕಾರಣ ನಾವು ನೀವೇ ಎನ್ನುವುದು ಬೇಸರದ ಸಂಗತಿ.

ಬಲೆಗೆ ಸಿಕ್ಕ ಸಿಲ್:
ತನ್ನ ಪಾಡಿಗೆ ತಾನು ಈಜುತ್ತ ಸಾಗಬೇಕಿದ್ದ ಪ್ರಾಣಿಗೆ ಕೊರಳಿಗೆ ಉರುಳಿನಂತೆ ಸುತ್ತಿರುವ ಪ್ಲಾಸ್ಟಿಕ್ ಭೂತ.

ಹೊಟ್ಟೆ ತುಂಬ ಪ್ಲಾಸ್ಟಿಕ್:
ಬಣ್ಣ ಬಣ್ಣದಿಂದ ಕಾಣವು ಪ್ಲಾಸ್ಟಿಕ್ ಚೂರನ್ನು ಆಹಾರ ಎಂದು ಅರಿಸಿ ತಿಂದ ಪಕ್ಷಿಯ ಹೊಟ್ಟೆ ತುಂಬ ಪ್ಲಾಸ್ಟಿಕ್ ತುಂಡು.

ತಪ್ಪು ಯಾರದ್ದು..?
ಯಾರೋ ಎಸೆದ ಪ್ಲಾಸ್ಟಿಕ್ ಮದ್ಯ ವರ್ಷಗಳಿಂದ ಸಿಲುಕಿ ತನ್ನ ದೇಹದ ಚಹರೆಯನ್ನೇ ಬದಲಾಯಿಸಿಕೊಂಡ ಆಮೆ..! ಇಲ್ಲಿ ತಪ್ಪು ಯಾರದ್ದು..?

ನೀವೇ ಹೇಳಿ:
ಮೈ ಮೇಲೆ ಇಷ್ಟು ಗಾಢವಾದ ಮಲಿನತೆತನ್ನು ಹೊಂದಿರುವುದು ಯಾವ ಪ್ರಾಣಿ ಎಂದು ನೀವೇ ಹೇಳಿ.

ಮರ ಎಲ್ಲಿದೆ..?
ಮನೆಯ ಮರ ಎಂದುಕೊಂಡಿರುವ ಪ್ರಾಣಿಗೆ ಮರವೇ ಇಲ್ಲದಿದ್ದರೇ ಮನೆ ಎಲ್ಲಿಂದ ಬರುವುದು..? ತನ್ನ ಮನೆ ಕಟ್ಟಿಕೊಳ್ಳಲು ಇನ್ನೊಬ್ಬರಿಗೆ ಮನೆಯೇ ಇಲ್ಲದಂತೆ ಮಾಡಿದರೆ ಹೇಗೆ..?

ಕೊಟ್ಟಿದ್ದು ನಮಗೆ:
ನಾವು ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರದ ಒಡಲು ಸೇರಿಸಿದರೆ ಸಮುದ್ರ ತನಗೆ ಸೇರದನ್ನು ಮತ್ತೆ ನಮಗೆ ವಾಪಾಸ್ ನೀಡುತ್ತದೆ ಎನ್ನುವುದಕ್ಕೆ ಸಾಕ್ಷಿ.

ಎಲ್ಲಾ ನಮ್ಮದೆ:
ಒಂದು ಕಡೆ ಪ್ಲಾಸ್ಟಿಕ್ ಮತ್ತೊಂದು ಕಡೆ ವಾಯು ಮಾಲಿನ್ಯ. ಎಲ್ಲಾ ನಮ್ಮದೆ ತಪ್ಪು ಇನ್ಯಾರದ್ದು ಅಲ್ಲ.

ಪಾಪ:
ತಿನ್ನೊ ಪದಾರ್ಥ ಅಂತ ಬಾಯಿ ಹಾಕಿದ್ರೆ ಆದೂ ಪ್ಲಾಸ್ಟಿಕ್, ಅಲ್ಲದೇ ಅದೇ ಮೂತಿಗೆ ಕಚ್ಚಿಕೊಂಡರೆ ಪಾಪಾ ತಿನ್ನುವುದಾದರು ಹೇಗೆ..?

ಉರುಳು:
ಪ್ಲಾಸ್ಟಿಕ್ ದಾರ ಗಟ್ಟಿ ಎಂದರೆ ಸಿಕ್ಕಿಕೊಂಡ ಪ್ರಾಣಿಯ ಕತ್ತನೇ ಸೀಳುವಷ್ಟು ಗಟ್ಟಿಯಾಗಿದೆ.

ಹೊಳೆ ಅಲ್ಲ:
ದೂರದಿಂದ ನೋಡಿ ಇದನ್ನು ಹೊಳೆ ಅಂದ್ಕೋ ಬೇಡಿ. ಇದು ಪ್ಲಾಸ್ಟಿಕ್ ಹಾವಳಿಯಿಂದ ಹಾಳಾಗಿರುವ ಪ್ರದೇಶದ ಒಂದು ಚಿತ್ರ.

ಸಾಕ್ಷಿ:
ಕೇಲವ ಪ್ರಾಣಿಗಳಲ್ಲ ನದಿ, ಕರೆ, ಕಾಲುವೇ ಎಲ್ಲ ಕಡೆಗಳಲ್ಲಿಯೂ ಪ್ಲಾಸ್ಟಿಕ್ ಹಬ್ಬುತ್ತಿರುವುದಕ್ಕೆ ಸಾಕ್ಷಿ.

ನಿಮ್ಮ ಹಳೇ ಕಂಪ್ಯೂಟರ್:
ಮನೆ ಕ್ಲಿನ್ ಆಗಿರಲಿ ಅಂತ ಹಳೇ ಕಂಪ್ಯೂಟರ್ ಎಸೆದರೆ ಅದು ಎಲ್ಲಿ ಹೋಗುತ್ತೆ ಅಂತ ಗೊತ್ತಾ..? ಇಲ್ಲಿದೇ ನೋಡಿ ರಾಶಿ.

ಮೊಟ್ಟೆ ಎಲ್ಲಿಟ್ಟಿದೆ ನೋಡಿ:
ಪಾಪಾ ಅದಕ್ಕೇನು ಗೊತ್ತೊ ಪ್ಲಾಸ್ಟಿಕ್ ಇಂದಲೇ ತನ್ನ ಜೀವ ಹೋಗ್ತಿದೆ ಅಂತ, ಗೊತಿದ್ರೆ ತನ್ನ ಮಕ್ಕಳಿಗೆ ಅದೇ ಪ್ಲಾಸ್ಟಿಕ್ ಮೇಲೆ ಜನ್ಮ ನೀಡುತ್ತಿರ್ಲಿಲ್ಲ.


Click it and Unblock the Notifications








