ಇನ್‌ಸ್ಟಾಗ್ರಾಮ್‌ನಲ್ಲೂ ಮೋದಿ ಹವಾ: ಇನ್‌ಸ್ಟಾಗ್ರಾಮ್‌ನಲ್ಲಿ ನಂ. 1 ನಾಯಕ
ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿಯೂ ಮೋದಿ ಹಿಂಬಾಲಕರ ಸಂಖ್ಯೆ ಹೆಚ್ಚಾಗಿಯೇ ಇದೆ ಎನ್ನಲಾಗಿದೆ. ಇದೀಗ ಪ್ರಧಾನಿ ಮೋದಿ ಅವರ ಹವಾ ಇನ್‌ಸ್ಟಾಗ್ರಾಮ್ ಕಡೆಗೆ ತಿರುಗಿದ್ದು, ಹೆಚ್ಚು ಮಂದಿ ಹಿಂಬಾಲಕರನ್ನು ಹೊಂದಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಂದು ಹೊಸ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್‌ಸ್ಟಾಗ್ರಾಮ್ನಲ್ಲಿ ಹೆಚ್ಚು ಮಂದಿ ಹಿಂಬಾಲಕರನ್ನು ಹೊಂದಿರುವ ವಿಶ್ವದ ನಂ.1 ನಾಯಕ ಎನ್ನಿಸಿಕೊಂಡಿದ್ದಾರೆ.

ಓದಿರಿ: ವಿಮಾನದಲ್ಲಿ ಉಚಿತವಾಗಿ ಗ್ಯಾಲೆಕ್ಸಿ ನೋಟ್ 8 ಹಂಚಿದ ಸ್ಯಾಮ್‌ಸಂಗ್: ಯಾಕೆ..?
ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿಯೂ ಮೋದಿ ಹಿಂಬಾಲಕರ ಸಂಖ್ಯೆ ಹೆಚ್ಚಾಗಿಯೇ ಇದೆ ಎನ್ನಲಾಗಿದೆ. ಇದೀಗ ಪ್ರಧಾನಿ ಮೋದಿ ಅವರ ಹವಾ ಇನ್‌ಸ್ಟಾಗ್ರಾಮ್ ಕಡೆಗೆ ತಿರುಗಿದ್ದು, ಹೆಚ್ಚು ಮಂದಿ ಹಿಂಬಾಲಕರನ್ನು ಹೊಂದಿದ್ದಾರೆ ಎನ್ನಲಾಗಿದೆ.

ಕೋಟಿ ಮೀರಿದ ಹಿಂಬಾಲಕರ ಸಂಖ್ಯೆ:
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಇನ್‌ಸ್ಟಾಗ್ರಾಮ್ ಖಾತೆಯ ಹಿಂಬಾಲಕರ ಸಂಖ್ಯೆ1 ಕೋಟಿಯನ್ನು ದಾಟಿದೆ ಎನ್ನಲಾಗಿದೆ. ಟ್ವಿಟರ್ ನಲ್ಲಿ 35.8 ಮಿಲಿಯನ್ ಮಂದಿ ಮೋದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.

2014ರಲ್ಲಿ ಇನ್‌ಸ್ಟಾಗ್ರಾಮ್ ಗೆ ಕಾಲಿಟ್ಟ ಮೋದಿ.
ಇನ್‌ಸ್ಟಾಗ್ರಾಮ್ ಗೆ ಮೋದಿ ಕಾಲಿಟ್ಟಿದ್ದು ನವೆಂಬರ್ 12, 2014ರಂದು. ನಾಲ್ಕು ವರ್ಷಗಳ ಅವಧಿಯಲ್ಲಿ ಹಿಂಬಾಲಕರ ಸಂಖ್ಯೆ ಕೋಟಿ ದಾಟಿದೆ ಎನ್ನಲಾಗಿದೆ.

ಮೋದಿ ಯಾರನ್ನು ಫಾಲೋ ಮಾಡುತ್ತಿಲ್ಲ:
ಇನ್‌ಸ್ಟಾಗ್ರಾಮ್ನಲ್ಲಿ ಪ್ರಧಾನಿ ಮೋದಿ ಅವರನ್ನು 1 ಕೋಟಿಗೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಆದರೆ ಇನ್‌ಸ್ಟಾಗ್ರಾಮ್ನಲ್ಲಿ ಇದುವರೆಗೂ ಮೋದಿ ಯಾರನ್ನು ಫಾಲೋ ಮಾಡುತ್ತಿಲ್ಲ ಎನ್ನಲಾಗಿದೆ.

ಇನ್‌ಸ್ಟಾಗ್ರಾಮ್ ನಲ್ಲಿ ಆಕ್ವೀವ್:
ಮೋದಿ ಇನ್‌ಸ್ಟಾಗ್ರಾಮ್ ನಲ್ಲಿ 150ಕ್ಕೂ ಹೆಚ್ಚು ಚಿತ್ರ ಹಾಗೂ ವಿಡಿಯೊಗಳು ಪೋಸ್ಟ್ ಮಾಡಿದ್ದಾರೆ. ಕಳೆದ ವಾರ ಕೇದರಾನಾಥ್‌ಗೆ ಭೇಟಿ ನೀಡಿದ ಫೋಟೊ 7 ಲಕ್ಷ ಲೈಕ್ ಪಡೆದುಕೊಂಡಿದೆ ಎನ್ನಲಾಗಿದೆ.


Click it and Unblock the Notifications