Subscribe to Gizbot

ಪ್ರಿಯಾ ವಾರಿಯರ್ ಇನ್‌ಸ್ಟಾಗ್ರಮ್ ಪೋಸ್ಟ್ ವೊಂದಕ್ಕೆ ಪಡೆಯುವ ಹಣ ಎಷ್ಟು..? ಕೇಳಿದ್ರೆ ತಲೆ ತಿರುಗುವುದು ಗ್ಯಾರೆಂಟಿ..!

Written By:

ಭಾರತೀಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಎಬ್ಬಿಸಿರುವ ಮಲೆಯಾಳಿ ಚೆಲುವೆ ಕಣ್ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಅದೃಷ್ಠ ಕುಲಾಯಿಸಿದೆ. ಒಂದೇ ಒಂದು ದಿನದಲ್ಲಿ ಸೆಲೆಬ್ರಿಟಿಯಾದ ಈಕೆಗೆ ಸೋಶಿಯಲ್ ಮೀಡಿಯಾದಿಂದ ಹಣದ ಹೊಳೆಯೇ ಹರಿಯುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾಣಿಯಾಗಿ ಮಿಂಚುತ್ತಿರುವ ಈಕೆ, ಭಾರತದ ಟಾಪ್ ಸೆಲೆಬ್ರಿಟಿಗಳನ್ನು ಮೀರಿಸಿದ್ದಾಳೆ ಎಂದರೆ ತಪ್ಪಾಗುವುದಿಲ್ಲ.

ಪ್ರಿಯಾ ವಾರಿಯರ್ ಇನ್‌ಸ್ಟಾಗ್ರಮ್ ಪೋಸ್ಟ್ ವೊಂದಕ್ಕೆ ಪಡೆಯುವ ಹಣ ಎಷ್ಟು..?

ಕಣ್ ಹೊಡೆಯುವ ಮೂಲಕ ಇಂಟರ್ ನೆಟ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಪ್ರಿಯಾ ಪ್ರಕಾಶ್ ವಾರಿಯರ್, ಇನ್ ಸ್ಟಾಗ್ರಾಮ್ ನಲ್ಲಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್‌ ಗಿಂತಲೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರ. ಈಕೆ ಹೆಚ್ಚಿನ ಹಿಂಬಾಲಕರನ್ನು ಹೊಂದಿರುವ ಕಾರಣಕ್ಕೆ ಇನ್ ಸ್ಟಾಗ್ರಾಮ್‌ನಲ್ಲಿ ತಾನು ಮಾಡುವ ಪೋಸ್ಟ್ ವೊಂದಕ್ಕೆ 8 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ದಾಖಲೆ:

ಹೊಸ ದಾಖಲೆ:

ಒಂದು ಪೋಸ್ಟ್ ಗೆ 8 ಲಕ್ಷ ರೂ. ಸಂಭಾವನೆ ಪಡೆಯುವ ಮೂಲಕ ಪ್ರಿಯಾ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೆಲಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಂಪೆನಿಗಳ ಪರ ಪ್ರಚಾರಕ್ಕಾಗಿ ಪೋಸ್ಟ್ ಗಳನ್ನು ಮಾಡುತ್ತಾರೆ. ಅದಕ್ಕಾಗಿ ಇಷ್ಟು ಪ್ರಮಾಣದ ಹಣ ವನ್ನು ಪಡೆಯುತ್ತಾರೆ. ಆದರೆ ಇಷ್ಟು ಕಡಿಮೆ ದಿನದಲ್ಲಿ ಇಷ್ಟು ಪ್ರಮಾಣದ ಹಣವನ್ನು ಪಡೆಯುತ್ತಿರುವುದು ಪ್ರಿಯಾ ಮಾತ್ರ ಎನ್ನಲಾಗಿದೆ.

ಜೂನ್‌ನಲ್ಲಿ ಸಿನಿಮಾ:

ಜೂನ್‌ನಲ್ಲಿ ಸಿನಿಮಾ:

‘ಒರು ಆಡಾರ್ ಲವ್' ಚಿತ್ರದ ಹಾಡೊಂದರಲ್ಲಿ ಕಣ್ ಹೊಡೆಯುವ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದ ಪ್ರಿಯಾ ಪ್ರಕಾಶ್ ವಾರಿಯರ್, ಟೀಸರ್ ನಲ್ಲಿಯೂ ಅಂದವಾಗಿ ಕಾಣಿಸಿಕೊಂಡಿದ್ದರು. ಸದ್ಯ ಈಕೆ ಅಭಿನಯದ ಚೊಚ್ಚಲ ಸಿನಿಮಾ ‘ಒರು ಆಡಾರ್ ಲವ್' ಜೂನ್ ತಿಂಗಳಲ್ಲಿ ತೆರೆಕಾಣಲಿದೆ.

ಮೆಮೆ ಕ್ವೀನ್:

ಮೆಮೆ ಕ್ವೀನ್:

ಕಳೆದ ತಿಂಗಳಲ್ಲಿ ಕಾಣಿಸಿಕೊಂಡ ಶೇ.90ಕ್ಕೆ ಹೆಚ್ಚಿನ ಮೆಮೆಗಳಲ್ಲಿ ಪ್ರಿಯಾ ಇದ್ದರು ಎನ್ನಲಾಗಿದೆ. ದೇಶದ ಮೂಲೆ ಮೂಲೆಯಲ್ಲಿಯೂ ಪ್ರಿಯಾ ಅಭಿಮಾನಿಗಳು ಹುಟ್ಟುಕೊಂಡಿದ್ದು, ಎಲ್ಲಾ ಭಾಷೆಗಳಲ್ಲಿಯೂ ಆಕೆಯ ಕುರಿತು ಮೆಮೆಗಳು ಹರಿದಾಡಿದ್ದವು. ಕನ್ನಡದಲ್ಲಿಯೂ ಸಹ ಹೆಚ್ಚಿನ ಮೆಮೆಗಳನ್ನು ಕಾಣಬಹುದಾಗಿತ್ತು.

ಇನ್ ಸ್ಟಾಗ್ರಾಮ್‌ನಲ್ಲಿ ಸ್ಟ್ರಾಮ್:

ಇನ್ ಸ್ಟಾಗ್ರಾಮ್‌ನಲ್ಲಿ ಸ್ಟ್ರಾಮ್:

ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನೇ ಹಿಂದಿಕ್ಕಿರುವ ಪ್ರಿಯಾ 51 ಲಕ್ಷ ಮಂದಿ ಫಾಲೋವರ್ ಗಳನ್ನು ಹೊಂದಿದ್ದಾರೆ. ಇದೇ ರೀತಿ ಜುಕರ್ 41 ಲಕ್ಷ ಮಂದಿ ಫಾಲೋವರ್ ಗಳನ್ನು ಹೊಂದಿದ್ದಾರೆ.

ಕೊಹ್ಲಿ ಪೋಸ್ಟ್:

ಕೊಹ್ಲಿ ಪೋಸ್ಟ್:

ಇನ್‌ಸ್ಟಾಗ್ರಾಮ್‌ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಪ್ರೋಮೊಷನಲ್ ಪೋಸ್ಟ್ ವೊಂದಕ್ಕೆ 2 ಕೋಟಿಗೂ ಅಧಿಕ ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?

ಓದಿರಿ: ಚೀನಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಫೋನಿನಲ್ಲಿ ವೈರಸ್ ತುಂಬುತ್ತಿರುವ ಚೀನಿಯರು..!

English summary
priya prakash varrier instagram par insta post rates. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot