Subscribe to Gizbot

ಚೀನಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಫೋನಿನಲ್ಲಿ ವೈರಸ್ ತುಂಬುತ್ತಿರುವ ಚೀನಿಯರು..!

Written By:

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಹಿಡಿತವನ್ನು ಸಾಧಿಸಿದ್ದು, ಅದರಲ್ಲಿಯೂ ಶಿಯೋಮಿ ಕಂಪನಿ ಭಾರತದಲ್ಲಿ ಅತೀ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿರುವ ನಂಬರ್ 1 ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಚೀನಾ ಮೂಲದ ಸುಮಾರು 40 ಸ್ಮಾರ್ಟ್‌ಪೋನ್ ತಯಾರಕ ಕಂಪನಿಗಳು ಮಾಲ್ವೇರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ ಎನ್ನಲಾಗಿದೆ.

ಚೀನಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ:

ಸೆಕ್ಯೂರಿಟಿ ಕಂಪನಿ ಡಾ.ವೆಬ್ ಈ ಕುರಿತು ಮಾಹಿತಿಯನ್ನು ಹೊರ ಹಾಕಿದ್ದು, ಚೀನಾದಲ್ಲಿ ತಯಾರುಗುತ್ತಿರುವ ಸುಮಾರು 40 ಸ್ಮಾರ್ಟ್‌ಫೋನ್‌ ಕಂಪನಿಗಳು ಇನ್‌ಬಿಲ್ಟ್ ಮಾಲ್ವೇರ್ ಹೊಂದಿವೆ. ಇದನ್ನು ತಯಾರಕರು ಸ್ಮಾರ್ಟ್‌ಫೋನ್ ನಿರ್ಮಿಸುವ ವೇಳೆಯಲ್ಲಿಯೇ ಸೇರಿಸುತ್ತಿದ್ದಾರೆ. ಮುಂದೆ ಇದು ಅವರಿಗೆ ಸಹಾಯ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲೇ ಹೆಚ್ಚು:

ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲೇ ಹೆಚ್ಚು:

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಗಳು ತಮ್ಮ ಲೋ ಬಜೆಟ್ ಸ್ಮಾರ್ಟ್‌ಫೋನ್ ಗಳಲ್ಲಿ ಮಾಲ್ವೇರ್‌ಗಳನ್ನು ಅಳವಡಿಸುತ್ತಿದ್ದು, ಇದರಿಂದ ಮುಂದೆ ಸ್ಮಾರ್ಟ್‌ಫೋನ್‌ಗಳ ಮೇಲೆ ನಿಯಂತ್ರಣ ಸಾಧಿಸಿ ಆಡ್‌ವೇರ್‌ಗಳನ್ನು ಹರಡುವ ಯೋಜನೆಯನ್ನು ರೂಪಿಸಿವೆ.

ಆಪರೇಟಿಂಗ್ ಸಿಸ್ಟಮ್ ನೊಂದಿಗೆ:

ಆಪರೇಟಿಂಗ್ ಸಿಸ್ಟಮ್ ನೊಂದಿಗೆ:

ಚೀನಾ ಕಂಪನಿಗಳು ತಮ್ಮ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಮಾಲ್ವೇರ್‌ಗಳನ್ನು ಸೇರಿಸುತ್ತಿದ್ದು, ಇವುಗಳು ಸೈಲೆಂಟಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು ತಮ್ಮ ಸರ್ವರ್ ಗಳಿಗೆ ವರ್ಗಾಹಿಸುತ್ತವೆ ಎನ್ನಲಾಗಿದೆ.

ನಿಮ್ಮ ಮಾಹಿತಿ ಕದಿಯಬಹುದು:

ನಿಮ್ಮ ಮಾಹಿತಿ ಕದಿಯಬಹುದು:

ಈ ರೀತಿ ಮಾಡುವುದರಿಂದ ಸ್ಮಾರ್ಟ್‌ಫೋನ್ ಬಳಕೆದಾರರ ಮಾಹಿತಿಯನ್ನು ಖದೀಯಬಹುದು ಎನ್ನಲಾಗಿದೆ. ಅಲ್ಲದೇ ಈ ಮಾಲ್ವೇರ್ ಮಾಹಿತಿಗಳನ್ನು ಹ್ಯಾಕರ್ ಗಳಿಗೆ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ ಎನ್ನಲಾಗಿದೆ.

ಹೆಚ್ಚು ಅಪಾಯಕಾರಿ:

ಹೆಚ್ಚು ಅಪಾಯಕಾರಿ:

ಈ ಸ್ಮಾರ್ಟ್‌ಫೋನ್‌ಗಳ ಮೇಲೆ ನಿಮಗಿಂತಲೂ ಕಂಪನಿಗಳಿಗೆ ಹೆಚ್ಚಿನ ನಿಯಂತ್ರಣವಿರಲಿದೆ ಎನ್ನಲಾಗಿದ್ದು, ನಿಮ್ಮ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುವುದಲ್ಲದೇ ನಿಮ್ಮನ್ನು ಟ್ರಾಪ್ ಮಾಡುವ ಸಂದರ್ಭಗಳು ಹೆಚ್ಚಾಗಿರುತ್ತದೆ. ಇದರಿಂದಾಗಿ ಬಳಕೆದಾರರಿಗೆ ತೊಂದರೆಯಾಗಲಿದೆ.

Bike-Car ಜಾತಕ ಹೇಳುವ ಆಪ್..!
ಹ್ಯಾಕ್:

ಹ್ಯಾಕ್:

ಇದಲ್ಲದೇ ನಿಮ್ಮ ಫೋಟೋ-ದಾಖಲೆಗಳನ್ನು ಸುಲಭವಾಗಿ ಲಪಾಟಯಿಸುವ ಸಾಧ್ಯತೆ ಅಧಿಕವಾಗಿದ್ದು, ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಬಹುದಾಗಿದೆ. ಇದರಿಂದ ನಿಮಗೆ ತೊಂದರೆಯಾಗಲಿದೆ. ಚೀನಾ ಸ್ಮಾರ್ಟ್‌ಫೋನ್‌ಗಳನ್ನು ಬಳಸುವಾಗ ಎಚ್ಚರ ವಹಿಸುವುದು ಅಗತ್ಯ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Android Phones Caught Selling with Pre-Installed Factory Malware. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot