IPLನಲ್ಲಿ ಕಣ್ ಹುಡುಗಿ ಹವಾ: ಮತ್ತೇ ವೈರಲ್ ಆದ ವಿಡಿಯೋ...!
ಕಣ್ ಹೊಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಮೂಡಿಸಿದ ಮಲಯಾಳಿ ಚೆಲುವೆ ಪ್ರಿಯಾ ವಾರಿಯರ್, ಇನ್‌ಸ್ಟಾಗ್ರಾಮ್‌ನಲ್ಲಿ ದಾಖಲೆಯ ಪ್ರಮಾಣದ ಹಿಂಬಾಲಕರನ್ನು ಕೆಲವೇ ಗಂಟೆಗಳಲ್ಲಿ ಸೃಷ್ಠಿಸಿಕೊಂಡಿದ್ದಳು. ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡ ಹಿನ್ನಲೆಯಲ್ಲಿ ಆಕೆಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿದ್ದು, ಇದೇ ಮೊದಲ ಬಾರಿಗೆ ನ್ಯಾಷಿನಲ್ ಚಾನಲ್‌ಗಳಲ್ಲಿ ಕಾಣಿಸಿಕೊಂಡಿದ್ದಾಳೆ.

ಪ್ರಿಯಾ ವಾರಿಯರ್ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿರುವ ಮಂಚ್ ಚಾಕೊಲೆಟ್, ಆಯ್ಕೆಯನ್ನು ಹಾಕಿಕೊಂಡು ಜಾಹಿರಾತನ್ನು ಬಿಡುಗಡೆ ಮಾಡಿದೆ. ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಈ ಜಾಹಿರಾತು ಕಾಣಿಸಿಕೊಂಡಿದ್ದು, ಇಲ್ಲಿಯೂ ಕಣ್ ಹೊಡೆದಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ ಎನ್ನಲಾಗಿದೆ.
ಯೂಟ್ಯೂಬ್‌ನಲ್ಲಿ ವಿಡಿಯೋ ಆಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಟ್ವಿಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಆಗಿದೆ. ಈ ಹಿಂದೆ ಮೊದಲ ವಿಡಿಯೋ ವೈಲರ್ ಆಗಿದ್ದ ಮಾದರಿಯಲ್ಲಯೇ ಈ ಹೊಸ ವಿಡಿಯೋ ಸಹ ಎಲ್ಲೇಡೆ ಹರಿದಾಡುತ್ತಿದೆ. ಮತ್ತೇ ಟ್ರೋಲ್ ಪೇಜ್‌ಗಳು ಆಯ್ಕೆಯ ಚಿತ್ರವನ್ನು ಬಳಸಿಕೊಳ್ಳುತ್ತಿವೆ.
ಓದಿರಿ: IPL ಬೆಟ್ಟಿಂಗ್ ಆಡದೇ ಕಾಸು ಮಾಡಿ: ಇಲ್ಲಿದೇ ಆಪ್‌ಗಳ ವಿವರ..!
ಮಲೆಯಾಳಂ ಸಿನಿಮಾಕ್ಕೆ ಮಾತ್ರವೇ ಸಿಮೀತವಾಗಿದ್ದ ಪ್ರಿಯಾ, ರಾತ್ರಿ ಕಳೆದು ಬೆಳಗಾಗುವುದರ ಒಳಗೆ ನ್ಯಾಷಿನಲ್ ಕ್ರಷ್ ಆಗಿದ್ದಳು, ಈ ಹಿನ್ನಲೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಆಯ್ಕೆಯನ್ನು ಮಿಲಿಯನ್ ಸಂಖ್ಯೆಯ ಅಭಿಮಾನಿಗಳು ಹಿಂಬಾಲಿಸಲು ಶುರು ಮಾಡಿರು. ಇದರಿಂದಾಗಿ ಆಕೆಗೆ ಹೆಚ್ಚಿನ ಆದಾಯವು ದೊರೆಯುತ್ತಿದೆ ಎನ್ನಲಾಗಿದೆ. ಆಕೆ ಒಂದು ಪ್ರಮೋಷನ್ ಪೋಸ್ಟ್ ಮಾಡಿದಳು ಎಂದರೆ 8 ಲಕ್ಷಕ್ಕೂ ಹೆಚ್ಚಿನ ಆದಾಯ ದೊರೆಯಲಿದೆ ಎನ್ನಲಾಗಿದೆ.
ನೀವು ವಿಡಿಯೋ ನೋಡಿ.


Click it and Unblock the Notifications








