ಶೀತಲ ಸಮರದಲ್ಲಿ ಅಮೆರಿಕಾ ವಿರುದ್ದ ಗೆದ್ದ ರಷ್ಯಾ!..ಇದಕ್ಕೆ ಕಾರಣ ಫೇಸ್‌ಬುಕ್!!
ಇದೇ ಸಮಯದಲ್ಲಿ ಫೇಸ್‌ಬುಕ್ ತನ್ನ ಉದ್ದಿಮೆಗಾಗಿ ಸಾಮಾಜಿಕ ಬದ್ದತೆಯನ್ನು ಕಾಪಾಡಿಕೊಳ್ಳದೆ ಮತ್ತು ನಿಯಂತ್ರಿಸಿಕೊಳ್ಳದೆ ಅಮೆರಿಕಾವನ್ನು ಸೋಲಿಸಿದೆ.!
ಅಮೆರಿಕಾ ಮತ್ತು ರಷ್ಯಾ ನಡುವಿನ ಶೀತಲ ಸಮರದಲ್ಲಿ ರಷ್ಯಾ ಗೆದ್ದಿದೆ!..ಹೌದು, ಪ್ರಪಂಚದ ಎರಡು ಬೃಹತ್ ರಾಷ್ಟ್ರಗಳ ಶೀತಲ ಸಮರಕ್ಕೆ ಮತ್ತೊಂದು ಆಯಾಮ ದೊರೆತಿದ್ದು, ಸಾಮಾಜಿಕ ತಾಣ ಫೇಸ್‌ಬುಕ್‌ನಿಂದಾಗಿ ರಷ್ಯಾ ಅಮೆರಿಕಾ ವಿರುದ್ದ ವಿಜಯ ಸಾಧಿಸಿದೆ ಎನ್ನುತ್ತಿವೆ ಕೆಲವು ವರದಿಗಳು.!!
ಹೌದು, ನೀವು ಕೇಳುತ್ತಿರುವ ಈ ವಿಷಯ ವಿಚಿತ್ರವಾದರೂ ಸತ್ಯ.! ಅಮೆರಿಕಾದ ಮೇಲೆ ತನ್ನ ನಿಲುವನ್ನು ಹೇರಲು ರಷ್ಯಾ ಫೇಸ್‌ಬುಕ್ ಮೂಲಕ ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದೆ.!! ಇದೇ ಸಮಯದಲ್ಲಿ ಫೇಸ್‌ಬುಕ್ ತನ್ನ ಉದ್ದಿಮೆಗಾಗಿ ಸಾಮಾಜಿಕ ಬದ್ದತೆಯನ್ನು ಕಾಪಾಡಿಕೊಳ್ಳದೆ ಮತ್ತು ನಿಯಂತ್ರಿಸಿಕೊಳ್ಳದೆ ಅಮೆರಿಕಾವನ್ನು ಸೋಲಿಸಿದೆ.! ಹಾಗಾದರೆ, ಏನಿದು ವರದಿ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಅಮೆರಿಕಾ ಮೇಲೆ ರಷ್ಯಾದ ಫೇಸ್‌ಬುಕ್ ಅಸ್ತ್ರ!!
ಅಮೆರಿಕಾ ಮತ್ತು ರಷ್ಯಾದ ಸಂಬಂಧ ಯಾವಾಗಲೂ ಅಷ್ಟಕಷ್ಟೆ. ಅಮೆರಿಕಾದ ಸಿದ್ದಾಂತಗಳನ್ನು ರಷ್ಯಾ ಒಪ್ಪದಿದ್ದರೆ ರಷ್ಯಾದ ಸಿದ್ದಾಂತಗಳನ್ನು ಅಮೆರಿಕಾ ಒಪ್ಪುವುದಿಲ್ಲ. ಇದರ ಜೊತೆಯಲ್ಲಿಯೇ ಅಮೆರಿಕಾವನ್ನು ಹಿಂದಿಕ್ಕಿ ಪ್ರಪಂಚದ ನಂಬರ್ ಒನ್ ಆಗುವ ಉದ್ದೇಶವನ್ನು ರಷ್ಯಾ ಹೊಂದಿದ್ದು, ಅದಕ್ಕಾಗಿ ಫೇಸ್‌ಬುಕ್ ಅನ್ನು ಅಸ್ತ್ರವಾಗಿ ರಷ್ಯಾ ಬಳಸಿಕೊಂಡಿದೆ ಎನ್ನುತ್ತವೆ ವರದಿಗಳು.!!

ಫೇಸ್‌ಬುಕ್ ಅನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ಹೇಗೆ?
ನಿಮಗೆಲ್ಲಾ ಗೊತ್ತಿರುವ ಹಾಗೆ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಿಂದ ಸುದ್ದಿ ಪಡೆಯುವವರ ಸಂಖ್ಯೆಯೇ ಹೆಚ್ಚಾಗಿದೆ. ಫೇಸ್‌ಬುಕ್ ಪೇಜ್‌ಗಳಿಂದ ಸುದ್ದಿಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ಸುದ್ದಿ ಮಾಧ್ಯಮಗಳು ಬೇಕಾದಷ್ಟಿವೆ.!! ಇಂತಹ ಫೇಸ್‌ಬುಕ್ ಪೇಜ್‌ಗಳನ್ನು ಬಳಸಿಕೊಂಡು ತನ್ನ ಸಿದ್ದಾಂತಗಳನ್ನು ಅಮೆರಿಕಾದವರ ಮೇಲೆ ರಷ್ಯಾ ಹೇರಿತ್ತು.!!

ಹಣದ ಆಸೆಗೆ ಬದ್ದತೆ ಮಾರಿಕೊಂಡ ಫೇಸ್‌ಬುಕ್!!?
ಫೇಸ್‌ಬುಕ್‌ನ ಆದಾಯ ಮೂಲಗಳಲ್ಲಿ ಒಂದಾದ ಪೇಜ್‌ಗಳನ್ನು ಫೇಸ್‌ಬುಕ್ ಸಂಸ್ಥೆ ಪ್ರಮೋಟ್ ಮಾಡುತ್ತದೆ. ಹಣ ನೀಡಿದರೆ ನೀವು ಯಾರಿಗೆ ಯಾವ ಸುದ್ದಿಯನ್ನು ಕಳುಹಿಸಬಹುದು ಮತ್ತು ಎಷ್ಟು ಜನರಿಗಾದರೂ ಕಳುಹಿಸಬಹುದು.!! ಇದನ್ನೇ ಉಪಯೋಗಿಸಿಕೊಂಡ ರಷ್ಯಾ ತನ್ನ ಸಿದ್ದಾಂತಗಳನ್ನು ಹೇರುವ ವಿಷಯ ಮತ್ತು ಸುದ್ದಿಗಳನ್ನು ಅಮೆರಿಕಾದ ಜನತೆ ಮೇಲೆ ಏರಿದೆ.!!

470 ಫೇಸ್ ಅಕೌಂಟ್‌ಗಳು ಪತ್ತೆ.!!
ರಷ್ಯಾ ಸಿದ್ದಾಂತಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ಅಮೆರಿಕಾದ ಮೇಲೆ ಹೇರುವ ರಷ್ಯಾದ 470 ಫೇಕ್ ಫೇಸ್‌ಬುಕ್ ಪೇಜ್‌ಗಳನ್ನು ಗುರುತಿಸಲಾಗಿದ್ದು, 1,00,000 ಡಾಲರ್‌ಗೂ ಹೆಚ್ಚಿನ ಹಣವನ್ನು ಈ ಪೇಜ್‌ಗಳು ಪ್ರಮೋಟ್‌ಗಾಗಿ ಖರ್ಚು ಮಾಡಿವೆ. ಪ್ರಮೋಟ್ ಮೂಲಕ 70 ಕ್ಕೂ ಹೆಚ್ಚು ಅಮೆರಿಕಾ ಜನರನ್ನು ಈ ಸುದ್ದಿಗಳು ತಲುಪಿವೆ.!! ಅಮೆರಿಕಾದ 28 ಪರ್ಸೆಂಟ್‌ಗೂ ಹೆಚ್ಚು ಯುವಕರು ಇದರಿಂದ ಪ್ರಭಾವವನ್ನು ಹೊಂದಿದ್ದಾರೆ ಎನ್ನುತ್ತವೆ ವರದಿಗಳು.!!

ಟ್ರಂಪ್ ಗೆದ್ದಿದ್ದು ಇದರಿಂದಲೇ?
ಪ್ರಸ್ತುತ ಅಮೆರಿಕಾ ಅಧ್ಯಕರಾಗಿ ಆಯ್ಕೆಯಾದ ಟ್ರಂಪ್ ಅವರ ಗೆಲುವನ್ನು ಯಾರೂ ಕೂಡ ಊಹಿಸಿರಲಿಲ್ಲ. ಆದರೆ, ಹಿಲರಿ ಕ್ಲಿಂಟನ್ ಅನ್ನು ಟ್ರಂಪ್ ಸೋಲಿಸಿದ ಪರಿ ಎಲ್ಲರಿಗೂ ಆಶ್ಚರ್ಯವಾಗಿತ್ತು. ಹಿಲರಿ ಕ್ಲಿಂಟನ್ ಒಪ್ಪದ ರಷ್ಯಾದ ಪರೋಕ್ಷ ಬೆಂಬಲ ಟ್ರಂಪ್ ಮೇಲಿತ್ತು. ಇದಕ್ಕಾಗಿ ಫೇಸ್‌ಬುಕ್ ಮೂಲಕ ರಷ್ಯಾ ಪ್ರಯತ್ನಿಸಿತ್ತು ಎನ್ನುವ ವರದಿಗಳಾಗಿದ್ದವು.!! ಹಾಗಾದರೆ, ಟ್ರಂಪ್ ಗೆದ್ದಿದ್ದು ಇದರಿಂದಲೇ ಇರಬಹುದೆ? ಪ್ರಶ್ನೆ ಮೂಡುತ್ತದೆ.!!
ಓದಿರಿ:ನೋಕಿಯಾದ ಅತ್ಯಂತ ಕಡಿಮೆ ಬೆಲೆಯ ನೋಕಿಯಾ 2 ಇಂದು ಲಾಂಚ್!..4000mAh ಬ್ಯಾಟರಿ ಫೋನ್ ಬೆಲೆ!?


Click it and Unblock the Notifications








