Home
Social media

ಈ ಟಿಪ್ಸ್‌ಗಳನ್ನು ಫಾಲೋ ಮಾಡಿ: ನಿಮ್ಮ ಇಂಟರ್ನೆಟ್ ಬಳಕೆ ಸೇಫ್ ಇರುತ್ತೆ.!

ಇಂದು ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್‌ ಹೊಂದಿದ್ದು, ಇಂಟರನೆಟ್ ಕೂಡಾ ಬಳಸುತ್ತಿರುತ್ತಾರೆ. ಆದರೇ ಇಂಟರ್ನೆಟ್ ಬಳಸುವ ಪ್ರತಿಯೊಬ್ಬರಿಗೂ ಸುರಕ್ಷತೆಯ ಅಂತರ್ಜಾಲ ಬಳಕೆಯ ಕುರಿತು ತಿಳಿದಿರುವುದಿಲ್ಲ. ಅಂತರ್ಜಾಲ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು 'ವಿಶ್ವ ಸುರಕ್ಷಿತ ಅಂತರ್ಜಾಲ ದಿನ'ದ ಉದ್ದೇಶ. ಅದಕ್ಕಾಗಿ ಗೂಗಲ್ ಕಂಪನಿಯು ಸಹ #SecurityCheckKiya. ಹ್ಯಾಶ್‌ಟ್ಯಾಗ್ ಮೂಲಕ ಬೆಂಬಲ ಸೂಚಿಸಿದೆ.

ಈ ಟಿಪ್ಸ್‌ಗಳನ್ನು ಫಾಲೋ ಮಾಡಿ: ನಿಮ್ಮ ಇಂಟರ್ನೆಟ್ ಬಳಕೆ ಸೇಫ್ ಇರುತ್ತೆ.!

ಇದೇ ಫೆಬ್ರುವರಿ 5 ರಂದು ಈ ವರ್ಷದ ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗಿದ್ದು, "Together for a better internet" ಎಂಬ ಘೋಷಣೆ ಹೊಂದಲಾಗಿದೆ. ಉತ್ತಮ ಇಂಟರ್ನೆಟ ಬಳಕೆಗೆ ಎಲ್ಲರೂ ಜತೆಯಾಗೋಣ ಎಂಬ ಘೋಷ ವ್ಯಾಖ್ಯಾನ ಹೊಂದಲಾಗಿದೆ. ಹೀಗಾಗಿ ಅಂತರ್ಜಾಲ ಸುರಕ್ಷತೆಯ ಬಗ್ಗೆ ಬಳಕೆದಾರರಿಗೆ ಹೆಚ್ಚಿನ ಅರಿವು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಬಳಕೆದಾರರನ್ನು ಜಾಗೃತರನ್ನಾಗಿಸುವುದು ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಪ್ರಮುಖ ಆಶಯವಾಗಿದೆ.

ಈ ಟಿಪ್ಸ್‌ಗಳನ್ನು ಫಾಲೋ ಮಾಡಿ: ನಿಮ್ಮ ಇಂಟರ್ನೆಟ್ ಬಳಕೆ ಸೇಫ್ ಇರುತ್ತೆ.!

ಪ್ರಸ್ತುತ ಅಂತರ್ಜಾಲ ಬಳಕೆಯಲ್ಲಿ ಬಳಕೆದಾರರು ಅನೇಕ ರೀತಿ ಮೋಸಕ್ಕೆ ಒಳಗಾಗುತ್ತಿರುವುದನ್ನು ನೋಡುತ್ತಿದ್ದೆವೆ. ಇಂಟರ್ನೆಟ್ ಬಳಸಿಕೊಂಡು ದುರ್ಬಳಿಕೆಗೆ ದಾರಿ ಮಾಡುವವರ ಸಂಖ್ಯೆ ಏನು ಕಡಿಮೆ ಇಲ್ಲ. ಆದರೆ ಕೇಲವು ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಅಂತರ್ಜಾಲ ಬಳಕೆಯನ್ನು ಸೇಫ್ ಆಗಿಸಿಕೊಳ್ಳಬಹುದು. ಹಾಗಾದರೇ ಏನೆಲ್ಲಾ ಸುರಕ್ಷಿತ ಕ್ರಮಗಳು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಅಸುರಕ್ಷಿತ ಆಪ್‌ಗಳನ್ನು ದೂರವಿಡಿ

ಅಸುರಕ್ಷಿತ ಆಪ್‌ಗಳನ್ನು ದೂರವಿಡಿ

ವೆಬ್‌ಪೇಜ್‌ಗಳಿಂದ ಯಾವುದೇ ಆಪ್‌ಗಳನ್ನು ಡೌನಲೋಡ್ ಮಾಡಿಕೊಳ್ಳದಿರಿ. ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಉತ್ತಮ. ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರೇ ನಿಮ್ಮ ಸ್ಮಾರ್ಟ್‌ಫೋನ್‌ ಕಾರ್ಯ ನಿಧಾನ ಆಗುತ್ತದೆ. ಐಓಎಸ್ ಐಫೋನ್‌ಗಳಿಗೆ ಹೋಲಿಸಿದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆನೆ ಅಸುಕ್ಷಿತ ಆಪ್‌ಗಳಿಂದ ಅಪಾಯ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆದ್ದರಿಂದ ಇಂಥ ಅಸುರಕ್ಷಿತ ಆಪ್‌ಗಳನ್ನು ದೂರವಿಡಿ.

ಪಾಸ್‌ವರ್ಡ್ ಸ್ಟ್ರಾಂಗ್ ಇರಲಿ

ಪಾಸ್‌ವರ್ಡ್ ಸ್ಟ್ರಾಂಗ್ ಇರಲಿ

ನಿಮ್ಮ ಸ್ಮಾರ್ಟ್‌ಫೋನ್‌ಗೆ ಪಾಸವರ್ಡ್ ಸ್ಟ್ರಾಂಗ್ ಇರಲಿ, ಗೂಗಲ್ ಅಕೌಂಟ್ ಗೆ ಸೈನಿನ್ ಆಗಿ ಫೈಂಡ್ ಮೈ ಫೋನ್‌ ಫೀಚರ್ ಆಯ್ಕೆಯನ್ನು ಸಕ್ರಿಯಗೊಳಿಸಿ. ಸಕ್ರಿಯ ಮಾಡಿಕೊಂಡರೇ ನೀವು android.com ಗೆ ಭೇಟಿ ನೀಡಿ ಫೈಂಡ್ ಲೋಕೆಟ್, ರಿಂಗ್, ಲಾಕ್ ಮತ್ತು ಇರೆಸ್ ಆಯ್ಕೆಗಳನ್ನು ಬಳಸಬಹುದು. ಇದು ನಿಮ್ಮ ಸ್ಮಾರ್ಟ್‌ಫೋನಿಗೆ ಸುರಕ್ಷತೆಗೆ ಸಹಕಾರಿ.

ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಭದ್ರಪಡಿಸಿ

ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಭದ್ರಪಡಿಸಿ

ನಿಮ್ಮ ಫೇಸ್‌ಬುಕ್, ಯೂಟೂಬ್, ಜಿಮೇಲ್, ಗೂಗಲ್ ಮ್ಯಾಪ್ ಮತ್ತು ಗೂಗಲ್ ಅಕೌಂಟ್ ಸೇರಿದಂತೆ ನೀವು ಬಳಸುವ ಎಲ್ಲ ಸಾಮಾಜಿಕ ತಾಣಗಳಲ್ಲಿ ನಿಮ್ಮ ಮಾಹಿತಿ ಇರುತ್ತದೆ ಹೀಗಾಗಿ ಈ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಕಠಿಣ ಪಾಸ್‌ವರ್ಡ್ ಇಡಬೇಕು. ಇದರಿಂದ ನಿಮ್ಮ ಅಂತರ್ಜಾಲ ಮಾಹಿತಿ ಸೋರಿಕೆ ತಡೆಯಬಹುದು.

ಡಾಟಾ ಭದ್ರತೆ

ಡಾಟಾ ಭದ್ರತೆ

ನೀವು ಯಾವುದಾದರು ಆಪ್‌ ಅಥವಾ ವೆಬ್‌ಸೈಟ್‌ ಬಳಸಬೇಕಾದರೇ ಅವರು ನಿಮ್ಮ ಕಡೆಯಿಂದ ನಿಮ್ಮ ಕಾಂಟ್ಯಾಕ್ಟ್ಸ್, ಲೋಕೆಷನ್, ಕ್ಯಾಲೆಂಡರ್, ಕ್ಯಾಮೆರಾ ಹೀಗೆ ಕೇಲವು ಮಾಹಿತಿಗನ್ನು ಹಂಚಿಕೊಳ್ಳಲು ಅನುಮತಿ ಕೋರುತ್ತಾರೆ. ಆಗ ಅನಗತ್ಯವಾಗಿ ಎಲ್ಲ ಡಾಟಾ ಮಾಹಿತಿ ಹಂಚಿಕೆಗೆ ಅನುಮತಿ ನೀಡಬೇಡಿರಿ. ಆ ಆಪ್‌ಗೆ ಅಗತ್ಯ ಇರುವ ಡಾಟಾ ಮಾಹಿತಿ ಅಷ್ಟೇ ನೀಡಿದರೆ ಸಾಕು.

Best Mobiles in India

English summary
This Safe Internet Day, make sure you are protecting your digital life.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+