Subscribe to Gizbot

ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ 'ಪ್ರಜಾಕೀಯ': ದೇಶದಲ್ಲೇ #UPPI ಟ್ರೆಂಡ್.!

Written By:

ಸದ್ಯ ಕರ್ನಾಟಕದಲ್ಲಿ ರಾಜಕೀಯ ಮೇಲಾಟ ಜೋರಾಗಿ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯವನ್ನು ಪ್ರವೇಶ ಮಾಡುವುದಾಗಿ ಹೇಳಿಕೆ ನೀಡಿದ್ದರೂ. ಅಲ್ಲದೇ ತಾವು ಯಾವುದೇ ರಾಜಕೀಯ ಪಕ್ಷವನ್ನು ಕಟ್ಟುವುದಿಲ್ಲ ತಮ್ಮದೇ ಹೊಸ ಪಕ್ಷದ ಬಗ್ಗೆ ಮಾಹಿತಿಯನ್ನು ನೀಡಿದ್ದರೂ.

ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ 'ಪ್ರಜಾಕೀಯ': ದೇಶದಲ್ಲೇ #UPPI ಟ್ರೆಂಡ್.!

ಓದಿರಿ: ಫೋಷಕರೇ ಎಚ್ಚರ.! ನಿಮ್ಮ ಮಕ್ಕಳು ಈ ಗೇಮ್ ಬಲಿಯಾಗದಂತೆ ನೋಡಿಕೊಳ್ಳಿ.!!

ಉಪ್ಪಿ ಆರಂಭಿಸುತ್ತಾರೆ ಎನ್ನಲಾಗಿರುವ 'ಪ್ರಜಾಕೀಯ' ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಶುರುವಾಗಿದ್ದು, ಉಪೇಂದ್ರ ತಮ್ಮ ರಾಜಕೀಯ ಚಿಂತನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಪ್ಪಿಗೆ ಸಖತ್ ಬೆಂಬಲ:

ಉಪ್ಪಿಗೆ ಸಖತ್ ಬೆಂಬಲ:

ಈಗಾಗಲೇ ಉಪ್ಪಿಗೆ ಸಾಮಾಜಿಕ ಜಾಲಾತಾಣಗಳಾದ ಫೇಸ್‌ಬುಕ್, ಟ್ವೀಟರ್, ವಾಟ್ಸ್‌ಆಪ್ ನಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದ್ದು, ಉಪ್ಪಿಯ ಹೊಸ ರಾಜಕೀಯ ಚಿಂತನೆಗೆ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಅಲ್ಲದೇ ಬದಲಾವಣೆಗೆ ಬೆಂಬಲ ನೀಡುವುದಾಗಿ ತಿಳಿಸುತ್ತಿದ್ದಾರೆ.

ಟ್ವೀಟರ್ ನಲ್ಲೂ ಹವಾ:

ಇದಲ್ಲದೇ ಉಪ್ಪಿಗೆ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವೀಟರ್ ನಲ್ಲಿಯೂ ಬೆಂಬಲ ದೊರೆಯುತ್ತಿದ್ದು, ಉಪ್ಪಿ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಉಪ್ಪಿ ಮಾಡಿರುವ ಟ್ವೀಟ್ ಗಳನ್ನು ರೀಟ್ವಿಟ್ ಮಾಡುತ್ತಿದ್ದಾರೆ.

ಟ್ರೆಂಡ್ ಆಗಿದೆ #UPPI:

ಟ್ರೆಂಡ್ ಆಗಿದೆ #UPPI:

ಟ್ವೀಟರ್ ನಲ್ಲಿ #UPPI ಟ್ಯಾಗ್ ಹೆಚ್ಚು ಟ್ರೆಂಡ್ ಆಗಿದ್ದು, ಅಭಿಮಾನಿಗಳು ಮತ್ತು ಸಾಮಾನ್ಯ ಜನರು ಈ ಟ್ಯಾಗ್ ನಲ್ಲಿ ಉಪ್ಪಿ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಯನ್ನು ನಡೆಸುತ್ತಿದ್ದಾರೆ.

ಪ್ರಜಾಕಾರಣ.. ಪ್ರಜಾನೀತಿ.. ಪ್ರಜಾಕೀಯ..:

ಪ್ರಜಾಕಾರಣ.. ಪ್ರಜಾನೀತಿ.. ಪ್ರಜಾಕೀಯ..:

ಉಪ್ಪಿ ಹೇಳಿರುವ ಪ್ರಜಾಕಾರಣ.. ಪ್ರಜಾನೀತಿ.. ಪ್ರಜಾಕೀಯ.. ಎಂಬ ಮೂರು ಪದಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಉಪ್ಪಿಯ ಈ ಹೊಸ ತತ್ವ ಯುವ ಜನತೆಗೆ ಹೆಚ್ಚು ಹತ್ತಿರವಾಗಿದೆ.

ರಾಷ್ಟ್ರ ಮಟ್ಟದಲ್ಲಿ ಸದ್ದು:

ರಾಷ್ಟ್ರ ಮಟ್ಟದಲ್ಲಿ ಸದ್ದು:

ಉಪ್ಪಿ ಹೊಸ ಐಡಿಯಾ ರಾಷ್ಟ್ರ ಮಟ್ಟದಲ್ಲಿ ಟ್ರೆಂಡ್ ಆಗಿದ್ದು, ಗೂಗಲ್ ನಲ್ಲಿ ಕೇವಲ upendra ಎಂದು ಟೈಮ್ ಮಾಡಿದರೆ ಸಾಕು ನಿಮಗೆ ಆ ಬಗ್ಗೆ ಸಂಪೂರ್ಣ ಮಾಹಿತಿಯೂ ದೊರೆಯಲಿದೆ. ರಾಷ್ಟ್ರಿಯಾ ಮಾಧ್ಯಮಗಳು ಉಪ್ಪಿ ಐಡಿಯಾ ಬಗ್ಗೆ ತಲೆ ಕಡಿಸಿಕೊಂಡಿವೆ. ಉಪ್ಪಿ ಬಗ್ಗೆ ಸುದ್ದಿ ಮಾಡುತ್ತಿವೆ.

ವೈರಲ್ ಆಗಿದೆ ವಿಡಿಯೋ: ನೀವು ನೋಡಿ!

ಉಪ್ಪಿ ಮಾತನಾಡಿರುವ ವಿಡಿಯೋವೊಂದು ನಿನ್ನೆಯಿಂದಲೂ ವೈರಲ್ ಆಗಿದ್ದು, ಫೇಸ್‌ಬುಕ್ ನಲ್ಲಿ ಪ್ರತಿಯೊಬ್ಬರು ಶೇರ್ ಮಾಡುತ್ತಿದ್ದಾರೆ. ಹಾಗಿಯೇ ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿಯೂ ಈ ವಿಡಿಯೋ ಸದ್ದು ಮಾಡುತ್ತಿದೆ. ಅದರಲ್ಲೂ ಉಪ್ಪಿ ಅಭಿಮಾನಿಗಳು ಹೆಚ್ಚು ಶೇರ್ ಮಾಡುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Upendra is an Indian film actor and director known primarily for his work in Kannada cinema. He began his career writing dialogues and lyrics. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot