ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಪರಿಚಯಿಸಲಿದೆ ಈ ಹೊಸ ಫೀಚರ್ಸ್!
1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಮೆಸೆಜಿಂಗ್ ಆಪ್ 'ವಾಟ್ಸ್ಆಪ್' ಯಾವಾಗಲೂ ನೂತನ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಅಪ್‌ಡೇಟ್ ಆಗುತ್ತಾ ಸಾಗಿದೆ.ಇದೀಗ ಜನಪ್ರಿಯ ವಾಟ್ಸಪ್ ಮತ್ತೊಮ್ಮೆ ತನ್ನ ಬಳಕೆದಾರರಿಗೆ ಸಂತಸದ ಸುದ್ದಿ ನೀಡುವ ತವಕದಲ್ಲಿದ್ದು, ಕೆಲವು ವಿಶೇಷ ಫೀಚರ್ಸ್‌ಗಳನ್ನು ಬಳಕೆದಾರರಿಕೆ ನೀಡಲಿದೆ.

ಪ್ರತಿದಿನ ಸುಮಾರು 1 ಬಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರದನ್ನು ಹೊಂದಿರುವ ವಾಟ್ಸಪ್ ಅಪ್ಲಿಕೇಶನ್ ಡಾರ್ಕ್ ಮೋಡ್, ಫಿಂಗರ್‌ಪ್ರಿಂಟ್ ಅನ್‌ಲಾಕ್, ಸ್ಟಿಕ್ಕರ್ ಇಂಟಿಗ್ರೇಶನ್, ಪ್ರೈವೇಟ್ ರಿಪ್ಲೇ ಮತ್ತು ಆಡಿಯೋ ಪಿಕ್ಕರ್ ಎಂಬ ನೂತನ ಫೀಚರ್‌ಗಳನ್ನು ಪರಿಚಯಿಸಲಿದೆ. ಈ ಫೀಚರ್ಸ್‌ಗಳು ವಾಟ್ಸಪ್ ಅಪ್‌ಡೇಟ್ ವರ್ಷ್‌ನ್‌ನಲ್ಲಿ ಬಳಕೆದಾರರಿಗೆ ದೊರೆಯಲಿವೆ.

ವಾಟ್ಸಪ್ ಪರಿಚಯಿಸಲಿರುವ ವಿನೂತನ ಫೀಚರ್ಸ್‌ಗಳು ಭದ್ರತೆ, ಫೋನ್ ಬ್ಯಾಟರಿ ಉಳಿಕೆ, ಪ್ರತ್ಯಕ ಚಾಟಿಂಗ್‌ನಂತಹ ವಿಶೇಷತೆಗಳನ್ನು ಹೊಂದಿದ್ದು, ಇವುಗಳು ಬಳಕೆದಾರರಿಗೆ ಮತ್ತಷ್ಟು ಉಪಯುಕ್ತವಾಗಲಿದ್ದು, ಇದು ವಾಟ್ಸಪ್ ಪ್ರಿಯರಿಗೆ ಖುಷಿ ಕೊಡಲಿದೆ ಎನ್ನಲಾಗುತ್ತಿದೆ. ಹಾಗಾದರೇ ವಾಟ್ಸಪ್‌ನ ನೂತನ ಫೀಚರ್ಸ್‌ಗಳ ವಿಶೇಷತೆಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿ.

ಡಾರ್ಕ್ ಮೋಡ್
ವಾಟ್ಸಪ್‌ನ ಹೊಸ ಡಾರ್ಕ್ ಮೋಡ್ ಫೀಚರ್ ಕಡುಬಣ್ಣ ಮತ್ತು ಮಂದಬೆಳಕಿನ ಲಕ್ಷಣಗಳನ್ನು ಹೊಂದಿರಲಿದ್ದು, ರಾತ್ರಿ ವೇಳೆ ಬಳಕೆದಾರರು ವಾಟ್ಸಪ್‌ಅನ್ನು ಬಳಸುವಾಗ ಮಂದಬೆಳಕು ಆಯ್ಕೆಯನ್ನು ಬಳಕೆದಾರರು ಉಪಯೋಗಿಸಿಕೊಳ್ಳಬಹುದು. ಇದು ಕಣ್ಣಿಗೆ ಬಿಳುವ ಬೆಳಕಿನ ಪ್ರಖರತೆಯನ್ನು ತಗ್ಗಿಸುತ್ತದೆ ಇದರೊಟ್ಟಿಗೆ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಕೆಯನ್ನು ಉಳಿಸುತ್ತದೆ.

ಫಿಂಗರ್‌ಪ್ರಿಂಟ್ ಅನ್‌ಲಾಕ್
ಇಂದಿನ ಡಿಜಿಟಲ್ ಯುಗದಲ್ಲಿ ಬಳಕೆದಾರರು ಭದ್ರತೆ ಮತ್ತು ಖಾಸಗಿತನದ ಬಗ್ಗೆ ಹೆಚ್ಚು ಕಾಳಜಿ ನೀಡುತ್ತಾರೆ. ಅದಕ್ಕಾಗಿಯೇ ವಾಟ್ಸ್‌ಪ್ ಇದೀಗ ಫೀಂಗರ್‌ಪ್ರಿಂಟ್ ಅನ್‌ಲಾಕ್ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತಿದ್ದು, ಬಳಕೆದಾರರ ಪ್ರತಿ ಬಾರಿ ವಾಟ್ಸಪ್ ತೆರೆಯಬೇಕಿದ್ದಾಗಲೂ ಫಿಂಗರ್‌ಪ್ರಿಂಟ್ ನೀಡಲೆಬೇಕು ಇದರಿಂದ ಬಳಕೆದಾರರ ವಾಟ್ಸಪ್‌ಗೆ ರಕ್ಷಣೆ ಮತ್ತು ಖಾಸಗಿತನದ ಅನುಭವ ದೊರೆಯಲಿದೆ.

ಸ್ಟಿಕ್ಕರ್ ಇಂಟಿಗ್ರೇಶನ್
ಕಳೆದ ವರ್ಷದಲ್ಲಿ ವಾಟ್ಸಪ್ ಸಿಕ್ಕರ್ ಕಳುಹಿಸಬಹುದಾದ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಿತ್ತು. ಇದೀಗ ವಾಟ್ಸಪ್ ಥರ್ಡ್‌ಪಾರ್ಟಿ ಸ್ಟಿಕ್ಕರ್‌ಗಳನ್ನು ಸಹ ಕಳುಹಿಸಲು ಅನುಮತಿ ನೀಡಿದ್ದು, ಇದರಿಂದ ಬೇರೆ ಬೇರೆ ಕಂಪನಿಯ ಸಿಕ್ಕರ್ ಆಪ್‌ಗಳಲ್ಲಿನ ಸ್ಟಿಕ್ಕರ್‌ಗಳನ್ನು ವಾಟ್ಸಪ್‌ನಲ್ಲಿ ಕಳುಹಿಸಲು ಅವಾಕಾಶವಿದೆ. ಇಲ್ಲಿಯವರೆಗೆ ಬರಿ ವಾಟ್ಸಪ್‌ನಲ್ಲಿ ಲಭ್ಯವಿದ್ದ ಸ್ಟಿಕ್ಕರ್ ಮಾತ್ರ ಕಳುಹಿಸಬಹುದಾಗಿತ್ತು.

ಪ್ರೈವೇಟ್ ರಿಪ್ಲೇ
ವಾಟ್ಸಪ್ ಗ್ರೂಪ್ ಬಳಕೆದಾರರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಪ್ರೈವೇಟ್ ರಿಪ್ಲೇ ಆಯ್ಕೆಯ ಅವಕಾಶವನ್ನು ಇದೀಗ ವಾಟ್ಸಪ್ ನೀಡಿದ್ದು, ಇದರಿಂದ ವಾಟ್ಸಪ್ ಗ್ರೂಪ್ ಬಳಕೆದಾರರು ತಮ್ಮ ಗ್ರೂಪ್ ಸದಸ್ಯರಿಗೆ ಖಾಸಗಿಯಾಗಿ ಪ್ರತಿಕ್ರಿಯೆ ಕಳುಹಿಸಬಹುದು. ಈ ಪ್ರೈವೇಟ್ ರಿಪ್ಲೇ ಆಯ್ಕೆ ಆಂಡ್ರಾಯ್ಡ್ ಮತ್ತು ಐಇಎಸ್ ಬಳಕೆದಾರರಿಗೆ ಲಭ್ಯವಾಗುವುದು.

ಆಡಿಯೋ ಪಿಕ್ಕರ್
ಆಡಿಯೋ ಆಯ್ಕೆಯಲ್ಲಿ ಬಳಕೆದಾರರು ಕಳುಹಿಸುವ ಆಡಿಯೋವನ್ನು ಕಳುಹಿಸುವ ಮುನ್ನ ಅದನ್ನು ಕೇಳಬಹುದಾಗಿದೆ ಆನಂತರ ಕಳುಹಿಸಬಹುದಾಗಿದೆ. ಮತ್ತು ಇದರೊಂದಿಗೆ ಒಂದೇ ವೇಳಗೆ 30 ಆಡಿಯೋ ಫೈಲ್‌ಗಳನ್ನು ಸಹ ಸೆಂಡ್ ಮಾಡುವ ಅವಕಾಶವನ್ನು ವಾಟ್ಸಪ್ ಒದಗಿಸಿದೆ. ಇಲ್ಲಿಯವರೆಗೆ ಧ್ವನಿ ಸಂದೇಸವನ್ನು ಪುನಃ ಕೇಳದೆ ಕಳುಹಿಸಲಾಗುತ್ತಿತ್ತು. ಇನ್ನು ಮುಂದೆ ಕೇಳಿ ಕಳುಹಿಸಬಹುದು ಅಥವಾ ಬಿಡಬಹುದಾಗಿದೆ.


Click it and Unblock the Notifications








