ವಾಟ್ಸಪ್ ಪರಿಚಯಿಸುತ್ತಿದೆ 'ಗ್ರೂಪ್ ಕಾಲಿಂಗ್' ಫೀಚರ್!

|

ಆರಂಭದಿಂದಲೂ ತನ್ನ ಬಳಕೆದಾರರಿಗೆ ಉಪಯುಕ್ತ ಫೀಚರ್‌ಗಳನ್ನು ನೀಡುತ್ತಾ ಬಂದಿರುವ ಜನಪ್ರಿಯ ಮೆಸೇಂಜಿಂಗ್ ಆಪ್‌ ವಾಟ್ಸಪ್ ಇದೀಗ ಮತ್ತೊಂದು ವಿಶೇಷ ಫೀಚರ್ ಅನ್ನು ತನ್ನ ಅಪ್‌ಡೇಟ್‌ ವರ್ಷ್‌ನ '2.19.9'ದಲ್ಲಿ ಪರಿಚಯಿಸಲು ಮುಂದಾಗುತ್ತಿದೆ. ಈ ಹೊಸ ಫೀಚರ್ ಗ್ರೂಪ್ ಅಡ್ಮಿನ್‌ಗಳಿಗೆ ಖುಷಿ ಸಂಗತಿಯಾಗಿರಲಿದೆ. ಹಾಗಾದರೇ ಏನಿದು ವಾಟ್ಸಪ್‌ನ ಹೊಸ ಸ್ಪೆಷಿಲ್ ಫೀಚರ್?.

ವಾಟ್ಸಪ್ ಪರಿಚಯಿಸುತ್ತಿದೆ 'ಗ್ರೂಪ್ ಕಾಲಿಂಗ್' ಫೀಚರ್!
ವಾಟ್ಸಪ್‌ನಲ್ಲಿ ಇನ್ನು ಮುಂದೆ ಗ್ರೂಪ್ ಕಾಲಿಂಗ್ ಮಾಡುವುದು ತುಂಬಾ ಸರಳವಾಗಿರಲಿದೆ. ಅದು ಹೇಗೆಂದರೆ ವಾಟ್ಸಪ್‌ಗ್ರೂಪ್ ನೀಡಿರುವ ಹೊಸ ಫೀಚರ್‌ನಿಂದ ಗ್ರೂಪ್‌ನಲ್ಲಿ ನೇರವಾಗಿ ವೀಡಿಯೋ ಕಾಲಿಂಗ್ ಮತ್ತು ವಾಯ್ಸ್ ಕಾಲಿಂಗ್ ಮಾಡುವ ಸೌಲಭ್ಯ ನೀಡುತ್ತಿದೆ, ಇದರಿಂದಾಗಿ ಗ್ರೂಪ್ ಸದಸ್ಯರೊಂದಿಗೆ ಎಕ ಕಾಲದಲ್ಲಿ ವೀಡಿಯೋ ಕಾಲಿಂಗ್ ಅಥವಾ ವಾಯ್ಸ್ ಕಾಲಿಂಗ್‌ನಲ್ಲಿ ಭಾಗಿಯಾಗಬಹುದು.
ವಾಟ್ಸಪ್ ಪರಿಚಯಿಸುತ್ತಿದೆ 'ಗ್ರೂಪ್ ಕಾಲಿಂಗ್' ಫೀಚರ್!
ಈ ಮೊದಲು ಗ್ರೂಪ್ನಲ್ಲಿ ವೀಡಿಯೋ ಕರೆ ಮಾಡಬೇಕಿದ್ದರೇ ಮೊದಲು ಒಬ್ಬರಿಗೆ ಕರೆ ಮಾಡಿ ನಂತರ ಮತ್ತೊಬ್ಬರನ್ನು ಸೇರಿಸಿಕೊಳ್ಳಬೇಕಿತ್ತು. ಆದರೆ, ವಾಟ್ಸಪ್‌ನ ಈ ನೂತನ ಗ್ರೂಪ್ ಕಾಲಿಂಗ್ ಬಟನ್ ಫೀಚರ್‌ನಿಂದ ಒಂದೇ ಸಮಯಕ್ಕೆ ಗ್ರೂಪ್ನ ಎಲ್ಲ ಸದಸ್ಯರಿಗೆ ವೀಡಿಯೋ ಕಾಲಿಂಗ್ ಅಥವಾ ಬರೀ ವಾಯ್ಸ್‌ ಕಾಲಿಂಗ್ ಮಾಡಿ ಸಂಭಾಷಣೆ ನಡೆಸಹುದಾಗಿದೆ. ಇದರಿಂದ ವಾಟ್ಸಪ್ ಬಳಕೆದಾರಿರಗೆ ಖುಷಿ ಹೆಚ್ಚಿದೆ.
ವಾಟ್ಸಪ್ ಪರಿಚಯಿಸುತ್ತಿದೆ 'ಗ್ರೂಪ್ ಕಾಲಿಂಗ್' ಫೀಚರ್!
ವಾಟ್ಸಪ್ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ವೀಡಿಯೋ ಕರೆ ಮಾಡುವ ಫೀಚರ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಿತ್ತು. ಆದರೆ ಈ ಫೀಚರ್ ನಲ್ಲಿ ಗ್ರೂಪ್ ಕರೆ ಮಾಡುವ ಸೌಲಭ್ಯ ನೀಡಿರಲಿಲ್ಲ. ಇದೀಗ ವಾಟ್ಸಪ್ ಈ ಫೀಚರ್ ನಲ್ಲಿ ಗ್ರೂಪ್ ಕಾಲಿಂಗ್ ಬಟನ್ ಐಕೋನ್ ಅನ್ನು ಗ್ರೂಪ್‌ಗಳಿಗೆ ನೀಡುತ್ತಿದ್ದು, ಇದರಿಂದ ಸಮೂಹ ಕರೆ ಮಾಡುವುದು ಇನ್ನೂ ಮುಂದೆ ಸುಲಭವಾಗಿರಲಿದೆ.
ವಾಟ್ಸಪ್ ಪರಿಚಯಿಸುತ್ತಿದೆ 'ಗ್ರೂಪ್ ಕಾಲಿಂಗ್' ಫೀಚರ್!
ವಾಟ್ಸಪ್‌ನ ಈ ಹೊಸ ಸಮೂಹ ಸಂಭಾಷಣೆ ಫೀಚರ್‌ಅನ್ನು ನೀವು ಬಳಸಬೇಕಾದರೇ ನಿಮ್ಮ ವಾಟ್ಸಪ್‌ಅನ್ನು 2.19.9 ವರ್ಷನ್‌ಗೆ ಅಪ್‌ಡೇಟ್‌ ಮಾಡಿಕೊಳ್ಳಬೇಕು ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದಲೂ ಡೌನ್ಲೋಡ್ ಕೂಡಾ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್‌ನಲ್ಲಿಯೂ ಸಹ ಈ ಫೀಚರ್ ಬಳಸಬಹುದಾಗಿದೆ.
Best Mobiles in India

English summary
Many users took to Twitter to report the issue wherein their old WhatsApp messages, dating back to 2015, got deleted. WhatsApp hasn’t acknowledged the issue as of now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X